Udayavni Special

ಖಾಸಗಿ ವಾಹನ ಸಂಚಾರ ಸಂಪೂರ್ಣ ಬಂದ್‌

ಕೋವಿಡ್‌- 19 ಮಣಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಬಿಗಿ ಕ್ರಮ

Team Udayavani, Apr 3, 2020, 12:17 PM IST

ಖಾಸಗಿ ವಾಹನ ಸಂಚಾರ ಸಂಪೂರ್ಣ ಬಂದ್‌

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲಾಡಳಿತವು ಎ. 14ರ ವರೆಗೆ ವಿಧಿಸಿರುವ ಸೆ. 144(3)ಕ್ಕೆ ಪೂರಕವಾಗಿ ಹೆಚ್ಚುವರಿ ಕೆಲವು ನಿರ್ಬಂಧಗಳನ್ನು ಹೇರಿದೆ. ಶುಕ್ರವಾರದಿಂದ ಖಾಸಗಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಸಾರ್ವಜನಿಕರು ತಮ್ಮ ಸಮೀಪದ ಅಂಗಡಿಗ  ಳಿಂದಲೇ ಖರೀದಿಸಬೇಕು ಎಂದು ಸೂಚಿಸಲಾಗಿದೆ.

ದಿನಸಿ ಖರೀದಿಗಾಗಿ ಮೀಸಲಿಟ್ಟಿರುವ ಬೆಳಗ್ಗೆ 7ರಿಂದ 12ರ ವರೆಗಿನ ಸಮಯ ವನ್ನು ಬಹುತೇಕ ಜನರು ದುರುಪಯೋಗ ಮಾಡುತ್ತಿದ್ದು, ಅನಗತ್ಯ ತಿರುಗಾಟ ಅಧಿಕವಾಗುತ್ತಿದೆ. ಇದನ್ನು ಮನಗಂಡು ಜಿಲ್ಲಾಡಳಿತ ಖಾಸಗಿ ವಾಹನ ಸಂಚಾರವನ್ನೇ ನಿರ್ಬಂಧಿಸುವ ತೀರ್ಮಾನಕ್ಕೆ ಬಂದಿದೆ.

ಗುರುತಿನ ಚೀಟಿ ಹೊಂದಿದ ವೈದ್ಯಕೀಯ ಸಿಬಂದಿ ಮತ್ತು ವಾರ್ತಾ ಇಲಾಖೆಯ ಪಾಸ್‌ ಹೊಂದಿರುವ ಮಾಧ್ಯಮದವರಿಗೆ ಮಾತ್ರ ಖಾಸಗಿ ವಾಹನಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉಳಿದಂತೆ ವೈದ್ಯಕೀಯ ಸೇವೆಗಾಗಿ ಹಾಗೂ ಆ್ಯಂಬುಲೆನ್ಸ್‌ ಬಳಕೆಗಾಗಿ ಎಲ್ಲ ಸಾರ್ವಜನಿಕರು 108/ 1077 ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದು. 108 ಆ್ಯಂಬುಲೆನ್ಸ್‌ ಸೇವೆ ಲಭ್ಯವಿಲ್ಲದಿದ್ದಲ್ಲಿ ಮಾತ್ರವೇ ಸಾರ್ವಜನಿಕರು 1077 ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿದ್ದಲ್ಲಿ ಖಾಸಗಿ ವಾಹನಗಳಿಗೆ ವೈದ್ಯಕೀಯ ತುರ್ತು ಪಾಸ್‌ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಬಳಸುವ ಕಮರ್ಷಿಯಲ್‌ ತ್ರಿಚಕ್ರ, ಚತುಷcಕ್ರಗಳ ಲಘು ಸಾರಿಗೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಸಾರ್ವಜನಿಕರಿಗೆ ತುರ್ತಾಗಿ ಸಂಚರಿಸಬೇಕಾದ ಅಗತ್ಯವಿದ್ದರೆ, ಉಪವಿಭಾಗಾಧಿ ಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ ಅಲ್ಲಿಂದ ವಿಶೇಷ ಪಾಸ್‌ ಪಡೆದುಕೊಂಡು ಸಂಚರಿಸ ಬಹುದು ಎಂದು ನಗರ ಪೊಲೀಸ್‌ ಆಯುಕ್ತಡಾ| ಪಿ.ಎಸ್‌. ಹರ್ಷ ತಿಳಿಸಿದ್ದಾರೆ.

214ರಲ್ಲಿ 205 ನೆಗೆಟಿವ್‌
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 214 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 9 ಪಾಸಿಟಿವ್‌ ಬಂದಿದ್ದರೆ, ಉಳಿದ 205 ಪ್ರಕರಣ ನೆಗೆಟಿವ್‌ ಬಂದಿದೆ.
5,875 ಮಂದಿ ಗೃಹ ನಿಗಾವಣೆ ಯಲ್ಲಿದ್ದು, 300 ಮಂದಿ 28 ದಿನಗಳ ಗೃಹ ನಿಗಾವಣೆ ಪೂರೈಸಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ 30 ಮಂದಿ ನಿಗಾದಲ್ಲಿದ್ದಾರೆ. 239 ಮಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 223 ಮಾದರಿ

ಸ್ವೀಕೃತವಾಗಿದೆ. 16 ಮಂದಿಯ ಮಾದರಿಯನ್ನು ಗುರುವಾರ ಪರೀಕ್ಷೆಗೆ ಕಳುಹಿಸಲಾ ಗಿದೆ. 16 ಮಂದಿಯ ವರದಿ ಗುರುವಾರ ಆರೋಗ್ಯ ಇಲಾಖೆ ಕೈ ಸೇರಿದ್ದು, ಎಲ್ಲವೂ ನೆಗೆಟಿವ್‌ ಆಗಿದೆ. 3 ಮಂದಿ ಹೊಸದಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಮಂಗಳೂರು ನಗರದಲ್ಲಿ 154 ವಾಹನಗಳು ವಶಕ್ಕೆ
ಮಂಗಳೂರು: ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ರಸ್ತೆಯಲ್ಲಿ ಅನಾವಶ್ಯಕ ವಾಗಿ ವಾಹನ ಚಲಾಯಿಸಿದವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರಗಿಸಿದ್ದು, ನಗರದಲ್ಲಿ ಸಂಜೆ ವೇಳೆಗೆ 154 ಖಾಸಗಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ತಿಳಿಸಿದ್ದಾರೆ. ಎಲ್ಲರೂ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಸೆಂಟ್ರಲ್‌ ಮಾರುಕಟ್ಟೆಯ ಹಣ್ಣು ,ತರಕಾರಿ ಬೈಕಂಪಾಡಿಗೆ ಸ್ಥಳಾಂತರ
ನಗರದ ಸೆಂಟ್ರಲ್‌ ಮಾರುಕಟ್ಟೆಯ ಎಲ್ಲ ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರಿಗಳನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಚಿಲ್ಲರೆ ವ್ಯಾಪಾ ರಿಗಳನ್ನು ಹೊರತುಪಡಿಸಿ  ಸಾರ್ವಜನಿಕ ಪ್ರವೇಶವನ್ನೂ ನಿಬ ìಂಧಿಸಲಾಗಿದೆ. ಬಂದರಿನಲ್ಲಿ ದಿನಸಿ ವಸ್ತುಗಳ ಸಗಟು ವ್ಯಾಪಾರ ಎಂದಿನಂತೆ ಮುಂದುವರಿಯುತ್ತದೆ. ಸಗಟು ವ್ಯಾಪಾರಸ್ಥರು ರಿಟೇಲ್‌ ವ್ಯಾಪಾರಸ್ಥರಿಗೆ ಮಾತ್ರವೇ ಮಾರಾಟ ಮಾಡಬೇಕು. ಬಂದರಿನಲ್ಲಿ ಬೆಳಗ್ಗೆ 7ರಿಂದ 12ರ ವರೆಗೆ ವಾಹನಗಳ ಸಾರಕು ಇಳಿಸಲು ಅವಕಾಶವಿದೆ.  ಮಧ್ಯಾಹ್ನ 1ರಿಂದ ಸಂಜೆ 7ರ ವರೆಗೆ ಸಗ ಟು ಮಾರಾಟಗಾರರು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಅವಕಾಶವಿದೆ ಎಂದು  ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ಉಡುಪಿಯಲ್ಲಿ ಮತ್ತೆ ಹೊಸ ಕೋವಿಡ್-19 ಸೋಂಕು ಪತ್ತೆ

ಉಡುಪಿಯಲ್ಲಿ ಮತ್ತೆ 27 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಬಲ್ಗೇರಿಯಾದಲ್ಲಿ ಜೂ. 1ರಿಂದ ರೆಸ್ಟೋರೆಂಟ್‌ ಸೇವೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ವಿಧಾನಸಭೆ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಬ್ರೇಕ್: ಹೆಚ್ ಕೆ ಪಾಟೀಲ್ ತೀವ್ರ ವಿರೋಧ

ವಿಧಾನಸಭೆ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಬ್ರೇಕ್: ಹೆಚ್ ಕೆ ಪಾಟೀಲ್ ತೀವ್ರ ವಿರೋಧ

ಆಸೀಸ್ ಸರಣಿಯ ಮೊದಲ ಪಂದ್ಯವನ್ನು ಬ್ರಿಸ್ಬೇನ್ ನಲ್ಲಿ ಆಡಲಿದೆ ಟೀಂ ಇಂಡಿಯಾ

ಆಸೀಸ್ ಸರಣಿಯ ಮೊದಲ ಪಂದ್ಯವನ್ನು ಬ್ರಿಸ್ಬೇನ್ ನಲ್ಲಿ ಆಡಲಿದೆ ಟೀಂ ಇಂಡಿಯಾ

ಸಿಂಗಾಪುರ ಉದ್ಯಾನವನದಲ್ಲಿದೆ ಹೈಟೆಕ್‌ ರೋಬೋಟ್‌ ನಾಯಿ

ಸಿಂಗಾಪುರ ಉದ್ಯಾನವನದಲ್ಲಿದೆ ಹೈಟೆಕ್‌ ರೋಬೋಟ್‌ ನಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಹಡಗಿನ ಮೂಲಕ ಮರಳಿ ಮಂಗಳೂರಿಗೆ

ಬಿ.ಸಿ.ರೋಡ್‌ – ಜಕ್ರಿಬೆಟ್ಟು ಹೆದ್ದಾರಿ ಕಾಂಕ್ರೀಟ್‌ ಕಾಮಗಾರಿಗೆ ಜಪಾನ್‌ ತಂತ್ರಜ್ಞಾನ ಬಳಕೆ

ಬಿ.ಸಿ.ರೋಡ್‌ – ಜಕ್ರಿಬೆಟ್ಟು ಹೆದ್ದಾರಿ ಕಾಂಕ್ರೀಟ್‌ ಕಾಮಗಾರಿಗೆ ಜಪಾನ್‌ ತಂತ್ರಜ್ಞಾನ ಬಳಕೆ

ಜೂನ್‌ 1ರಿಂದ ಖಾಸಗಿ ಬಸ್‌ ಓಡಾಟ? ದ.ಕ. 150, ಉಡುಪಿ 20 ಸಿಟಿ ಬಸ್‌ಗಳ ಸಂಚಾರ

ಜೂನ್‌ 1ರಿಂದ ಖಾಸಗಿ ಬಸ್‌ ಓಡಾಟ? ದ.ಕ. 150, ಉಡುಪಿ 20 ಸಿಟಿ ಬಸ್‌ಗಳ ಸಂಚಾರ

ಜೂ. 1ರಿಂದ ಕೋರ್ಟ್‌ ಕಲಾಪ ಆರಂಭ

ಮಂಗಳೂರು, ಉಡುಪಿಯಲ್ಲಿ ಜೂ. 1ರಿಂದ ಕೋರ್ಟ್‌ ಕಲಾಪ ಆರಂಭ

ಮಳೆಗಾಲ ಸಮೀಪಿಸಿದರೂ ಮುಗಿಯದ ಮರಳು ಗೋಳು

ಮಳೆಗಾಲ ಸಮೀಪಿಸಿದರೂ ಮುಗಿಯದ ಮರಳು ಗೋಳು

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

28-May-11

ಕೋವಿಡ್ ಜಾಗೃತಿ ಕಿರುಚಿತ್ರ ಬಿಡುಗಡೆ

ಯಾದಗಿರಿಯಲ್ಲಿ ಮತ್ತೆ ಏಳು ಜನರಲ್ಲಿ ಕೋವಿಡ್ ಸೋಂಕು ದೃಡ

ಯಾದಗಿರಿಯಲ್ಲಿ ಮತ್ತೆ ಏಳು ಜನರಲ್ಲಿ ಕೋವಿಡ್ ಸೋಂಕು ದೃಡ

28-May-10

ಹೋಂ ಕ್ವಾರಂಟೈನ್‌ ಮೇಲೆ ನಿಗಾ ವಹಿಸಿ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಮತ್ತೆ 75 ಹೊಸ ಸೋಂಕಿತರು: 2493ಕ್ಕೇರಿದ ಸೋಂಕಿತರ ಸಂಖ್ಯೆ

28-May-09

ಸಮರ್ಪಕ ಬಿತ್ತನೆ ಬೀಜ ಒದಗಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.