ನೆಮಜಲಿನಲ್ಲಿ ಪುತ್ತೂರು ಕೋರ್ಟ್ ಕಟ್ಟಡ : ಕಾಮಗಾರಿ ಪ್ರಗತಿಯಲ್ಲಿ
Team Udayavani, Jan 11, 2021, 6:00 AM IST
ಪುತ್ತೂರು: ಬನ್ನೂರಿನ ಆನೆಮಜಲಿನಲ್ಲಿ ನಿರ್ಮಿಸಲು ಉದ್ದೇಶಿಸಿ ರುವ 50 ಕೋ.ರೂ. ವೆಚ್ಚದ ನೂತನ ನ್ಯಾಯಾಲಯ ಕಟ್ಟಡಕ್ಕೆ ಪ್ರಥಮ ಹಂತ ದಲ್ಲಿ ಮಂಜೂರಾಗಿರುವ 25 ಕೋ. ರೂ. ಅನುದಾನದ ಕಾಮಗಾರಿ ಪ್ರಗತಿಯಲ್ಲಿದೆ.
ಪುತ್ತೂರಿನಲ್ಲಿ ಈಗಿರುವ ಬ್ರಿಟಿಷ್ ಕಾಲದ ನ್ಯಾಯಾಲಯ ಕಟ್ಟಡಕ್ಕೆ ಪರ್ಯಾಯ ವಾಗಿ ನಗರದಿಂದ 6 ಕಿ.ಮೀ. ದೂರದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ವರ್ಷಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
2018 ನ. 10ರಂದು ಹೊಸ ಕಟ್ಟಡಕ್ಕೆ ಚಾಲನೆ ನೀಡಲಾಗಿತ್ತಾದರೂ ಟೆಂಡರ್ ವಿಳಂಬವಾದ ಕಾರಣ ಕಾಮಗಾರಿ ಪ್ರಾರಂಭ ಪ್ರಕ್ರಿಯೆ ತಡವಾಗಿತ್ತು. ಉದ್ದೇಶಿತ ಸ್ಥಳದಲ್ಲಿ ನವ ಮಾದರಿಯ ನ್ಯಾಯಾಲಯದ ಕಟ್ಟಡ ನಿರ್ಮಾಣ ಗೊಳ್ಳಲಿದ್ದು, ಮಂಗಳೂರಿನ ಕನ್‌ಸ್ಟ್ರಕ್ಷನ್ ಸಂಸ್ಥೆ ಗುತ್ತಿಗೆ ವಹಿಸಿ ಕೊಂಡಿದೆ. ಕರಾರಿನ ಪ್ರಕಾರ 2019 ನೇ ಡಿ. 6ರಂದು ಕಾಮಗಾರಿ ಪ್ರಾರಂಭಿಸಿ 2021ನೇ ಮೇ 11ಕ್ಕೆ ಕಾಮಗಾರಿ ಮುಕ್ತಾಯಗೊಳ್ಳಬೇಕಿತ್ತು. ಟೆಂಡರ್ ಪ್ರಕ್ರಿಯೆ ವಿಳಂಬ, ಲಾಕ್‌ಡೌನ್ ಕಾರಣದಿಂದ ನಿರೀಕ್ಷಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಿಲ್ಲದಾಗಿದೆ.
ನೂತನ ಕಟ್ಟಡವನ್ನು ಹೈಕೋರ್ಟ್ ಮಾದರಿಯಲ್ಲಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಹಾಸನ ನ್ಯಾಯಾಲಯ ಸಂಕೀರ್ಣದಂತೆ ವಿನ್ಯಾಸದಲ್ಲಿ ಕೆಲವು ಮಾರ್ಪಾಡು ಮಾಡಿ ನಕಾಶೆ ತಯಾರಿಸ ಲಾಗಿದೆ. ಡಿಸೈನಿಂಗ್ ಪ್ಲಾನಿಂಗ್ ದೊರೆತ ಬಳಿಕ ಫಿಲ್ಲರ್ ಕಾಮಗಾರಿ ಪ್ರಾರಂಭಿ ಸಲಾಗಿತ್ತು. ನ್ಯಾಯಾಲಯ ಕಟ್ಟಡದ ಪಕ್ಕದಲ್ಲೇ ನಾಲ್ಕು ಅಂತಸ್ತಿನ ವಕೀಲರ ಸಂಘದ ಕಚೇರಿ ಕಟ್ಟಡವು ಪ್ರಗತಿಯಲ್ಲಿದೆ. ಹೀಗಾಗಿ ಸುಸಜ್ಜಿತ ನ್ಯಾಯಾಯಲ ಕಟ್ಟಡವೊಂದು ಕೆಲವೇ ಸಮಯದಲ್ಲೇ ಎದ್ದು ನಿಲ್ಲಲಿದೆ.
4 ಅಂತಸ್ತಿನ ಕಟ್ಟಡ :
ಒಟ್ಟು 50 ಕೋ. ರೂ. ವೆಚ್ಚದಲ್ಲಿ 4 ಮಹಡಿಯ ನ್ಯಾಯಾಲಯ ಸಂಕೀರ್ಣ ನಿರ್ಮಿಸುವ ಪ್ರಸ್ತಾವ ಲೋಕೋಪಯೋಗಿ ಇಲಾಖೆ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗಿತ್ತು. ಇದರಲ್ಲಿ 25 ಕೋ.ರೂ. ಮಂಜೂರುಗೊಂಡು ಮೊದಲ ಹಂತದಲ್ಲಿ 2 ಅಂತಸ್ತಿನ ಸಮುಚ್ಚಯ ನಿರ್ಮಾಣಗೊಳ್ಳಲಿದ್ದು ಅಡಿಪಾಯ ಪೂರ್ಣಗೊಂಡು ಗೋಡೆ ನಿರ್ಮಾಣ ಪ್ರಗತಿಯಲ್ಲಿದೆ. ಮಳೆ ನೀರು ಹಾದುಹೋಗಲು ಪೂರಕವಾಗಿ ಚರಂಡಿ ಕಾಮಗಾರಿ ಕೂಡ ನಡೆಯುತ್ತಿದೆ.
ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 25 ಕೋ.ರೂ. ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದ.ಕ.ಜಿಲ್ಲೆ ಯಲ್ಲಿ ಮಾದರಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. -ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಕಾಮಗಾರಿ ಪ್ರಾರಂಭವಾಗಿದೆ.ಅಡಿಪಾಯ ಕೆಲಸ ಪೂರ್ಣಗೊಂಡಿದೆ. ಸುಮಾರು 15 ಶೇ.ಕಾಮಗಾರಿ ಮುಗಿದಿದೆ. ಮೊದಲ ಹಂತದ ಕಾಮಗಾರಿ ಮೇ ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. -ಪ್ರಮೋದ್ ಕುಮಾರ್ ಕೆ., ಸಹಾಯಕ ಎಂಜಿನಿಯರ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444