ಪಿಯುಸಿ ಪರೀಕ್ಷೆ: ಕಲಾ ವಿಭಾಗದಲ್ಲಿ 561 ಅಂಕ ಗಳಿಸಿ ಅಂಧ ವಿದ್ಯಾರ್ಥಿನಿಯ ಸಾಧನೆ


Team Udayavani, Jun 18, 2022, 11:15 PM IST

ಪಿಯುಸಿ ಪರೀಕ್ಷೆ: ಕಲಾ ವಿಭಾಗದಲ್ಲಿ 561 ಅಂಕ ಗಳಿಸಿದ ಅಂಧ ವಿದ್ಯಾರ್ಥಿನಿಯ ಸಾಧನೆ

ಮಂಗಳೂರು: ಈಕೆ ಬೆಳಕು ಕಂಡಿಲ್ಲ. ಆದರೆ ಅಕ್ಷರ ಬೆಳಕಿನ ಮೂಲಕ ಬದುಕು ಬೆಳಗಿಸುವ ಆಸೆ.

ಅಂಧ ವಿದ್ಯಾರ್ಥಿನಿ ಯಾಗಿರುವ ಅಪೂರ್ವಾ ಇತರರಿಗೆ ಸ್ಫೂರ್ತಿಯಾಗುವಂತಹ ಸಾಧನೆ ಮಾಡಿದ್ದಾರೆ. ಅವರು ಈ ಬಾರಿಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 561 ಅಂಕ ಗಳಿಸಿದ್ದಾರೆ.

ಬೆಳಗಾವಿಯ ಕಾಗ್ವಾಡ್‌ ತಾ| ಮೋಳೆ ಗ್ರಾಮದ ಅಪೂರ್ವಾ ನಗರದ ಸೈಂಟ್‌ ಆ್ಯಗ್ನೆಸ್‌ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ. ಬ್ರೈಲ್‌ ಲಿಪಿ ಯಲ್ಲೇ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಾರೆ. ಅಪೂರ್ವಾಳ ತಂದೆ ಬಾಹುಬಲಿ ಟೊಪಗಿ ಕೃಷಿಕ. ತಾಯಿ ರೋಹಿಣಿ ಟೊಪಗಿ ಶಿಕ್ಷಕಿ. ಅವರ ಮೂವರು ಮಕ್ಕಳು ಕೂಡ ಅಂಧರು. ಅಪೂರ್ವಾಳ ಸಹೋದರಿ ಬಿಎಡ್‌, ಸಹೋದರ ಬಿಎ ಓದುತ್ತಿದ್ದಾರೆ.

ಐಎಎಸ್‌ ಅಧಿಕಾರಿ ಆಗುವಾಸೆ
“ಉದಯವಾಣಿ’ಯೊಂದಿಗೆ ಮಾತನಾಡಿದ ಅಪೂರ್ವಾ, “ನನಗೆ ಕನಿಷ್ಠ 580 ಅಂಕಗಳ ನಿರೀಕ್ಷೆ ಇತ್ತು. ಆದ್ದರಿಂದ ಮರುಮೌಲ್ಯಮಾಪನಕ್ಕೆ ಹಾಕುತ್ತೇನೆ. ಐಎಎಸ್‌ ಅಧಿಕಾರಿಯಾಗುವ ಆಸೆ ಇದೆ. ಬೆಂಗಳೂರಿನ ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಬಿಎ ಮಾಡಲಿದ್ದೇನೆ’ ಎಂದು ಹೇಳಿದ್ದಾರೆ.

ಹಿಂಜರಿಕೆ ಬೇಡ
ನಾನು ಅಂಧಳಾಗಿದ್ದರೂ ಶಾಪ ಅಥವಾ ವರ ಎಂದು ಭಾವಿಸಿಲ್ಲ. ಧೈರ್ಯದಿಂದ ಮುನ್ನುಗ್ಗಿದರೆ ಯಾರು ಕೂಡ ಸಾಧನೆ ಮಾಡಬಹುದು. ಪಾಠವನ್ನು ಸರಿಯಾಗಿ ಓದುತ್ತಿದ್ದೆ. ಸಂದೇಹವಿದ್ದರೆ ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಪ್ರಶ್ನೆಪತ್ರಿಕೆಗಳನ್ನು ಅಭ್ಯಸಿಸುತ್ತಿದ್ದೆ. ತಂದೆ, ತಾಯಿ ತುಂಬಾ ಪ್ರೋತ್ಸಾಹ ಮಾಡುತ್ತಿ ದ್ದಾರೆ. ಏನಾದರೂ ಸ್ವಲ್ಪ ವಿಫ‌ಲವಾದರೂ ಹುರಿದುಂಬಿಸುತ್ತಿದ್ದಾರೆ ಎಂದು ಅಪೂರ್ವಾ ಹೇಳಿದ್ದಾರೆ.

ಮಗಳ ಸಾಧನೆಯಿಂದ ತುಂಬಾ ಖುಷಿಯಾಗಿದೆ. ಆಕೆಗೆ ಇನ್ನಷ್ಟು ಅಂಕದ ನಿರೀಕ್ಷೆ ಇತ್ತು. ಆಕೆ ವಿಶೇಷವಾಗಿ ಅಭ್ಯಾಸ ಮಾಡುತ್ತಿರಲಿಲ್ಲ. ಆದರೆ ಆಡಿಯೋ ಮೂಲಕ ಗಮನವಿಟ್ಟು ಅಧ್ಯಯನ ಮಾಡುತ್ತಿದ್ದಳು ಎಂದು ಅಪೂರ್ವಾಳ ತಾಯಿ ರೋಹಿಣಿ ಟೊಪಗಿ ಹೇಳಿದ್ದಾರೆ.

ಟಾಪ್ ನ್ಯೂಸ್

1-asdsadd

ರಷ್ಯಾ-ಉಕ್ರೇನ್ ಮಾನವ ಹಕ್ಕು ಸಂಸ್ಥೆಗಳು, ಬಿಲಿಯಾಟ್ಸ್ಕಿ ಗೆ ಜಂಟಿಯಾಗಿ ಶಾಂತಿ ನೊಬೆಲ್

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

ನಾನು ಸೋನಿಯಾ ಗಾಂಧಿಯ ರಿಮೋಟ್ ಕಂಟ್ರೋಲ್ ಅಲ್ಲ; ಬಿಜೆಪಿಗೆ ಖರ್ಗೆ ತಿರುಗೇಟು

jds

SSC: 20,000 ಹುದ್ದೆ ಆಯ್ಕೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಹೆಚ್ ಡಿಕೆ ಆಗ್ರಹ

web baby corner

Easy recipes: ಬೇಬಿ ಕಾರ್ನ್ ಮಂಚೂರಿಯನ್‌ ಟ್ರೈ ಮಾಡಿ ಟೇಸ್ಟ್ ನೋಡಿ…

ಪ.ಜಾತಿಗೆ 17% ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಪ.ಜಾತಿಗೆ 17%, ಪ. ಪಂಗಡಕ್ಕೆ 7% ಮೀಸಲಾತಿ ಹೆಚ್ಚಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

1-adasas-dsa

ಮಂಗಳೂರು : ಲಂಚ ಪಡೆದ ಭೂಮಾಪಕನಿಗೆ 3 ವರ್ಷ ಶಿಕ್ಷೆ, ದಂಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasas-dsa

ಮಂಗಳೂರು : ಲಂಚ ಪಡೆದ ಭೂಮಾಪಕನಿಗೆ 3 ವರ್ಷ ಶಿಕ್ಷೆ, ದಂಡ

8

ಅರಮನೆ ಬಾಗಿಲು-ಕೊಂಡೆ ಬೀದಿ ಚರಂಡಿ ದುಃಸಿತ್ಥಿ

ಕೈ ತಪ್ಪಿದ ಔಟ್‌ಬೋರ್ಡ್‌ ಎಂಜಿನ್‌ ಸಹಾಯಧನ : ನಾಡದೋಣಿ ಮೀನುಗಾರರ ಸಂಕಷ್ಟ

ಕೈ ತಪ್ಪಿದ ಔಟ್‌ಬೋರ್ಡ್‌ ಎಂಜಿನ್‌ ಸಹಾಯಧನ : ನಾಡದೋಣಿ ಮೀನುಗಾರರ ಸಂಕಷ್ಟ

ಹೆಲಿಕಾಪ್ಟರ್‌ ನೀಡುವುದಾಗಿ ಹೇಳಿ ಬೆಂಗಳೂರು ಮೂಲದ ಟೆಕ್ಕಿಗೆ ವಂಚನೆ

ಹೆಲಿಕಾಪ್ಟರ್‌ ನೀಡುವುದಾಗಿ ಹೇಳಿ ಬೆಂಗಳೂರು ಮೂಲದ ಟೆಕ್ಕಿಗೆ ವಂಚನೆ

ಅತ್ಯಾಚಾರಗೈದು ವೀಡಿಯೋ ಅಪ್‌ಲೋಡ್‌ ಬೆದರಿಕೆ: ಆರೋಪಿಗೆ 15 ವರ್ಷ ಜೈಲು ಶಿಕ್ಷೆ

ಅತ್ಯಾಚಾರಗೈದು ವೀಡಿಯೋ ಅಪ್‌ಲೋಡ್‌ ಬೆದರಿಕೆ: ಆರೋಪಿಗೆ 15 ವರ್ಷ ಜೈಲು ಶಿಕ್ಷೆ

MUST WATCH

udayavani youtube

ಯುವಕನಾದ ಸಿದ್ದರಾಮಯ್ಯ… ರಾಹುಲ್ ಜತೆ ರೇಸ್ …. ವಿಡಿಯೋ ವೈರಲ್

udayavani youtube

ಮೈಸೂರು ಜಂಬೂ ಸವಾರಿಯಲ್ಲೂ ಅಪ್ಪು ಸ್ಮರಣೆ

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

ಹೊಸ ಸೇರ್ಪಡೆ

1-asdsadd

ರಷ್ಯಾ-ಉಕ್ರೇನ್ ಮಾನವ ಹಕ್ಕು ಸಂಸ್ಥೆಗಳು, ಬಿಲಿಯಾಟ್ಸ್ಕಿ ಗೆ ಜಂಟಿಯಾಗಿ ಶಾಂತಿ ನೊಬೆಲ್

ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ಕಣ್ಮನ ಸೆಳೆದ ಅರಕಲಗೂಡು ದಸರಾ ಉತ್ಸವ

ನರೇಗಾ ಮೂಲಕ ಜೈವಿಕ ಅನಿಲ ಸ್ಥಾಪನೆಗೆ ಒತ್ತು

ನರೇಗಾ ಮೂಲಕ ಜೈವಿಕ ಅನಿಲ ಸ್ಥಾಪನೆಗೆ ಒತ್ತು

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ

ಭವನ ನಿರ್ಮಾಣಕ್ಕೆ ಕೋರ್ಟ್‌ ತಡೆಯಾಜ್ಞೆ

ಭವನ ನಿರ್ಮಾಣಕ್ಕೆ ಕೋರ್ಟ್‌ ತಡೆಯಾಜ್ಞೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.