Udayavni Special

ರಫೇಲ್‌ ಹಗರಣದಿಂದ ಬಿಜೆಪಿ ಬಣ್ಣ ಬಯಲು: ಶೆರ್ಗಿಲ್‌


Team Udayavani, Aug 28, 2018, 3:35 AM IST

shergil-27-8.jpg

ಮಂಗಳೂರು: ರಫೇಲ್‌ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಕೇಂದ್ರದ ಬಿಜೆಪಿ ಸರಕಾರದ ನಿಜ ಬಣ್ಣಬಯಲು ಮಾಡಿದೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ಜೈವೀರ್‌ ಶೆರ್ಗಿಲ್‌ ಆರೋಪಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಫೇಲ್‌ ಹಗರಣ ಬಿಜೆಪಿಯ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಧೋರಣೆಗಳಿಗೆ ದೊಡ್ಡ ಉದಾಹರಣೆ. 526.1 ಕೋ.ರೂ. ಬೆಲೆಯ ಪ್ರತಿ ವಿಮಾನವನ್ನು 1,670.70 ಕೋ.ರೂ. ನೀಡಿ ಖರೀದಿಸಲಾಗುತ್ತಿದೆ. ದೇಶದ ಬೊಕ್ಕಸಕ್ಕೆ 41,205 ಕೋ.ರೂ. ನಷ್ಟವುಂಟು ಮಾಡಲಾಗಿದೆ. ಹೆಚ್ಚುವರಿ 41,205 ಕೋ.ರೂ. ಹಣವನ್ನು ರಫೇಲ್‌ ಖರೀದಿಗೆ ಕೊಡುತ್ತಿರುವುದೇಕೆ ಎಂದು ಮೋದಿ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.

ಬಹಿರಂಗಕ್ಕೆ ಅಡ್ಡಿಯಿಲ್ಲ
ಒಪ್ಪಂದದ ಗೌಪ್ಯತೆಯಿಂದಾಗಿ ಬೆಲೆ ಏರಿಕೆಯ ಕಾರಣ ಹೇಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಮತ್ತು ರಕ್ಷಣಾ ಸಚಿವರು ಹೇಳುತ್ತಿದ್ದಾರೆ. ಆದರೆ ಬೆಲೆ ಬಹಿರಂಗಗೊಳಿಸಬಾರದೆಂಬ ಅಂಶ ಒಪ್ಪಂದದಲ್ಲಿ ಇಲ್ಲ. ಯುಪಿಎ ಸರಕಾರ‌ದ ಅವಧಿಯಲ್ಲಿ ರಕ್ಷಣಾ ವಲಯದ ಒಪ್ಪಂದದ ಬೆಲೆಗಳನ್ನು ಸಂಸತ್ತಿನಲ್ಲೇ ಬಹಿರಂಗಗೊಳಿಸಲಾಗಿತ್ತು. ‘ಚೌಕಿದಾರ್‌’ ಎಂದು ಕರೆದುಕೊಳ್ಳುತ್ತಿರುವ ಮೋದಿ ಇದರಲ್ಲಿ ‘ಭಾಗೀದಾರ್‌’ ಆಗಿದ್ದಾರೆ ಎಂದು ಆರೋಪಿಸಿದರು.

ವಾಯುಸೇನೆಗೆ ಅಗತ್ಯವಿದ್ದ 126 ಯುದ್ಧ ವಿಮಾನಗಳ ಖರೀದಿಯನ್ನು 36ಕ್ಕೆ ಇಳಿಸಿದ್ದೇಕೆ? 36 ರಫೇಲ್‌ ವಿಮಾನಗಳ ಪೈಕಿ ಮೊದಲನೆಯದು 2019ರ ಸೆಪ್ಟಂಬರ್‌ನಲ್ಲಿ ಹಾಗೂ ಕೊನೆಯದು 2022ರಲ್ಲಿ ಬರಲಿದೆ. ಖರೀದಿ ತೀರ್ಮಾನಿಸಿದ ಎಪ್ರಿಲ್‌ 2015ರಿಂದ 8 ವರ್ಷಗಳ ಅಂತರ. ಇದು ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡ ಹಾಗಲ್ಲವೇ ಎಂದು ಶೆರ್ಗಿಲ್‌ ಪ್ರಶ್ನಿಸಿದರು.

ಕೈತಪ್ಪಿದ 130,000 ಕೋ.ರೂ. ಉದ್ದಿಮೆ
ರಫೇಲ್‌ ಖರೀದಿ ಒಪ್ಪಂದ ಪಾರದರ್ಶಕತೆ, ಮೇಕ್‌ಇನ್‌ ಇಂಡಿಯಾ, ತಂತ್ರಜ್ಞಾನ ಹಸ್ತಾಂತರ ಉದ್ದೇಶ ಗಳನ್ನು ನಾಶ ಮಾಡಿದೆ. ಕರ್ನಾಟಕಕ್ಕೆ 1.30 ಲಕ್ಷ ಕೋ.ರೂ. ಉದ್ದಿಮೆ ನಷ್ಟವಾಗಿದೆ. ಯುಪಿಎ ಅವಧಿಯಲ್ಲಿ ಎಚ್‌ಎಎಲ್‌ ಮತ್ತು ಡಸಾಲ್ಟ್ ಏವಿಯೇಷನ್‌ ಸಂಸ್ಥೆಗಳು 36,000 ಕೋ.ರೂ. ಗುತ್ತಿಗೆಯ ಒಪ್ಪಂದಕ್ಕೆ ಬಂದಿದ್ದವು ಎಂದರು.
ಎಐಸಿಸಿ ಮಾಧ್ಯಮ ಸಂಚಾಲಕ ಸಂಜಯ ಸಿಂಗ್‌, ಡಿಸಿಸಿ ವಕ್ತಾರ ಎ.ಸಿ. ವಿನಯರಾಜ್‌, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ, ಕಾರ್ಯ ದರ್ಶಿಗಳಾದ ಟಿ.ಕೆ. ಸುಧೀರ್‌, ನೀರಜ್‌ಪಾಲ್‌, ನಜೀರ್‌ ಬಜಾಲ್‌ ಉಪಸ್ಥಿತರಿದ್ದರು.

– ದೇಶದ ಬೊಕ್ಕಸಕ್ಕೆ 41,205 ಕೋ.ರೂ. ನ‌ಷ್ಟ 
– ರಾಜ್ಯಕ್ಕೆ ಕೈತಪ್ಪಿದ 130,000 ಕೋ.ರೂ. ಉದ್ದಿಮೆ

ಪೊಲಿಟಿಕಲ್‌ ಲಾಲಿಪಪ್‌
ಪ್ರಧಾನಿ ಮೋದಿಯವರ ಏಕಕಾಲದಲ್ಲಿ ಚುನಾವಣೆ ಪ್ರಸ್ತಾವ ‘ಪೊಲಿಟಿಕಲ್‌ ಲಾಲಿಪಪ್‌’ ಎಂದು ಬಣ್ಣಿಸಿದ ಜೈವೀರ್‌ ಶೆರ್ಗಿಲ್‌, ಏಕಕಾಲದಲ್ಲಿ ಚುನಾವಣೆ ಸಾಧ್ಯವಾಗದ ಮಾತು ಎಂದು ಚುನಾವಣಾ ಆಯೋಗ ಹೇಳಿದೆ. ಇವಿಎಂ ಹಾಗೂ ಬ್ಯಾಲೆಟ್‌ ಪೇಪರ್‌ ಪೈಕಿ ಯಾವುದು ಉತ್ತಮ ಎಂಬ ಬಗ್ಗೆ ಒಂದು ರಾಷ್ಟ್ರೀಯ ಚರ್ಚೆ ನಡೆಯುವುದು ಆಗತ್ಯ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

suresh-anagadi

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

HUNDI

ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ

manday

ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು

KG-Halli-DJ-Halli

ಬೆಂಗಳೂರು ಗಲಭೆಯ ಪ್ರಮುಖ ಸೂತ್ರಧಾರಿ ಸಾದಿಕ್ ಆಲಿಯನ್ನು ಬಂಧಿಸಿದ NIA

crime

ಚಿಕ್ಕಮಗಳೂರು: ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನದ ಸರ ದೋಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ

ಮಾಸ್ಕ್ ಕಡ್ಡಾಯ; ಧರಿಸದಿದ್ದರೆ ದಂಡ: ಡಿಸಿ

ಮಾಸ್ಕ್ ಕಡ್ಡಾಯ; ಧರಿಸದಿದ್ದರೆ ದಂಡ: ಡಿಸಿ

ಮಂಗಳೂರು ಪಾಲಿಕೆಗೆ 725 ಕೋ.ರೂ. ಸಾಲದ ಹೊರೆ !

ಮಂಗಳೂರು ಪಾಲಿಕೆಗೆ 725 ಕೋ.ರೂ. ಸಾಲದ ಹೊರೆ !

“ಕ್ಲಾಕ್‌ ಟವರ್‌’ ವೃತ್ತದ ವಿಸ್ತರಣೆಗೆ ತಾತ್ಕಾಲಿಕ ತಡೆ

“ಕ್ಲಾಕ್‌ ಟವರ್‌’ ವೃತ್ತದ ವಿಸ್ತರಣೆಗೆ ತಾತ್ಕಾಲಿಕ ತಡೆ

Permit trading on Sunday also: Manohar Shetty

ರವಿವಾರವೂ ಸಂತೆ ವ್ಯಾಪಾರಕ್ಕೆ ಅನುಮತಿ ನೀಡಿ: ಮನೋಹರ್‌ ಶೆಟ್ಟಿ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

suresh-anagadi

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಕ್ರಿಕೆಟ್‌ ಆಟಗಾರರಿಗೆ ಸ್ಕಾಲರ್‌ಶಿಪ್‌: ಪಂಡಿತ್‌

ಕ್ರಿಕೆಟ್‌ ಆಟಗಾರರಿಗೆ ಸ್ಕಾಲರ್‌ಶಿಪ್‌: ಪಂಡಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.