Coastal ಮಳೆ: ಕಳೆದ ವರ್ಷ ಇಳಿಕೆ,ಈ ವರ್ಷ ಏರಿಕೆ

ಕರಾವಳಿಯಲ್ಲಿ ಇದುವರೆಗೆ ವಾಡಿಕೆಗಿಂತ ಶೇ. 30ರಷ್ಟು ಮಳೆ ಹೆಚ್ಚಳ

Team Udayavani, Aug 12, 2024, 6:55 AM IST

Coastal ಮಳೆ: ಕಳೆದ ವರ್ಷ ಇಳಿಕೆ,ಈ ವರ್ಷ ಏರಿಕೆ

ಮಂಗಳೂರು: ಮುಂಗಾರು ಅವಧಿ ಮುಗಿಯಲು ಇನ್ನೂ ಒಂದೂವರೆ ತಿಂಗಳು ಬಾಕಿ ಇರುವಾಗಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸುರಿದ ಮಳೆ ವಾಡಿಕೆಯ ಗುರಿ ಸನಿಹಕ್ಕೆ ತಲುಪುತ್ತಿದೆ.

ಕರಾವಳಿಯಲ್ಲಿ ಜೂನ್‌ ತಿಂಗಳಿನಿಂದ ಸೆಪ್ಟಂಬರ್‌ ಅಂತ್ಯದ ವರೆಗೆ ಮುಂಗಾರು ಋತುವಿನಲ್ಲಿ 3,101 ಮಿ.ಮೀ. ಮಳೆಯಾಗಬೇಕು. ಆದರೆ ಆಗಸ್ಟ್‌ 9 ಆಗುವಷ್ಟರಲ್ಲೇ 2,939 ಮಿ.ಮೀ. ಮಳೆ ಸುರಿದಿದೆ. ಮುಂಗಾರು ಪೂರ್ಣಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಸದ್ಯ ದ.ಕ. ಜಿಲ್ಲೆಯಲ್ಲಿ ಶೇ.17, ಉಡುಪಿಯಲ್ಲಿ ಶೇ.20 ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ ಶೇ.42ರಷ್ಟು ಹೆಚ್ಚು ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದಲ್ಲಿ ಈ ವರೆಗೆ 2,268 ಮಿ.ಮೀ. ವಾಡಿಕೆ ಮಳೆಯಲ್ಲಿ 2939 ಮಿ.ಮೀ. ಮಳೆಯಾಗಿ ಶೇ.30ರಷ್ಟು ಅಧಿಕ ಸುರಿದಿದೆ.

ಕೇರಳ ಕರಾವಳಿ ತೀರಕ್ಕೆ ಮೇ 30ರಂದು ಪ್ರವೇಶಿಸಿದ ಮುಂಗಾರು ಜೂ.2ರಂದು ರಾಜ್ಯದ ಕರಾವಳಿ ಭಾಗಕ್ಕೆ ಅಪ್ಪಳಿಸಿತ್ತು. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜೂನ್‌ ಮಧ್ಯಭಾಗದವರೆಗೆ ಮಳೆಗಾಲದ ಯಾವುದೇ ಲಕ್ಷಣ ಕಾಣಿಸಿರಲಿಲ್ಲ. ಸಾಮಾನ್ಯವಾಗಿ ಮುಂಗಾರು ಆಗಮನದ ವೇಳೆ ಕೆಲವು ದಿನ ಮೋಡದ ವಾತಾವರಣ, ಗಾಳಿ ಸಹಿತ ಬಿರುಸಿನ ಮಳೆಯಾಗುತ್ತದೆ. ಆದರೆ ಎರಡರಿಂದ ಮೂರು ವಾರಗಳ ಕಾಲ ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಸುರಿದಿಲ್ಲ. ಜುಲೈಯಿಂದೀಚಿಗೆ ಕರಾವಳಿಯಲ್ಲಿ ಭಾರೀ ವರ್ಷಧಾರೆಯಾಗಿ ವಾಡಿಕೆಗಿಂತ ಶೇಕಡಾವಾರು ಹೆಚ್ಚಾಗಿದೆ.

ಯಾವ ತಾಲೂಕಿನಲ್ಲಿ ಎಷ್ಟು ಮಳೆ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ.16ರಷ್ಟು ಹೆಚ್ಚಳ, ಬಂಟ್ವಾಳ-ಶೇ.10, ಮಂಗಳೂರು-ಶೇ.14, ಪುತ್ತೂರು-ಶೇ.2, ಸುಳ್ಯ-ಶೇ.25, ಮೂಡುಬಿದಿರೆ-ಶೇ.26, ಕಡಬ-ಶೇ.14, ಮೂಲ್ಕಿ-ಶೇ.14, ಉಳ್ಳಾಲ-ಶೇ.4, ಉಡುಪಿ ಜಿಲ್ಲೆಯ ಕಾರ್ಕಳ-ಶೇ.14, ಕುಂದಾಪುರ-ಶೇ.57, ಉಡುಪಿ-ಶೇ.19, ಬೈಂದೂರು-ಶೇ.26, ಬ್ರಹ್ಮಾವರ-ಶೇ.29 ಮತ್ತು ಹೆಬ್ರಿಯಲ್ಲಿ ಶೇ.17ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿದೆ.

ಕಳೆದ ವರ್ಷ ಕಡಿಮೆ, ಈ ವರ್ಷ ಅಧಿಕ
ಕಳೆದ ವರ್ಷ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ಇತ್ತು. ಒಟ್ಟಾರೆ ಋತುವಿನಲ್ಲಿ ಕರಾವಳಿಯಲ್ಲಿ ಶೇ.19ರಷ್ಟು ಮಳೆ ಕೊರತೆ ಉಂಟಾಗಿತ್ತು. 2023ರಲ್ಲಿ ಆ.9ರ ವರೆಗೆ ಶೇ.15ರಷ್ಟು ಮಳೆ ಕಡಿಮೆ ಸುರಿದಿತ್ತು. ಆದರೆ ಈ ಬಾರಿ ಶೇ.30ರಷ್ಟು ಹೆಚ್ಚಾಗಿದೆ.

ಟಾಪ್ ನ್ಯೂಸ್

Mangaluru: ಶ್ರೀ ಶಾರದಾ ಮಹೋತ್ಸವ ಸಮಿತಿ: ಮಂಗಳೂರು ಶಾರದೋತ್ಸವ ಆರಂಭ

Mangaluru: ಶ್ರೀ ಶಾರದಾ ಮಹೋತ್ಸವ ಸಮಿತಿ: ಮಂಗಳೂರು ಶಾರದೋತ್ಸವ ಆರಂಭ

Congress: ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವು ಖಚಿತ

Congress: ವಿಧಾನಪರಿಷತ್‌ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವು ಖಚಿತ

CAA: ಪೌರತ್ವಕ್ಕಾಗಿ ಅರ್ಜಿ ; ಇಬ್ಬರಿಗೆ ಭಾರತದ ಪೌರತ್ವ ಅನುಮೋದನೆ

CAA: ಪೌರತ್ವಕ್ಕಾಗಿ ಅರ್ಜಿ ; ಇಬ್ಬರಿಗೆ ಭಾರತದ ಪೌರತ್ವ ಅನುಮೋದನೆ

Kasaragod: ಯುವಕನ ಕೊ*ಲೆ : ಜೀವಾವಧಿ ಸಜೆ, 3 ಲಕ್ಷ ರೂ. ದಂಡ

Kasaragod: ಯುವಕನ ಕೊ*ಲೆ : ಜೀವಾವಧಿ ಸಜೆ, 3 ಲಕ್ಷ ರೂ. ದಂಡ

Uppunda: ಪಟಾಕಿ ಅಕ್ರಮ ದಾಸ್ತಾನು ಪ್ರಕರಣ ದಾಖಲು

Uppunda: ಪಟಾಕಿ ಅಕ್ರಮ ದಾಸ್ತಾನು ಪ್ರಕರಣ ದಾಖಲು

Bantwal: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಜೀಪು ಢಿಕ್ಕಿ; ಪಾರಾದ ಮಕ್ಕಳು

Bantwal: ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಜೀಪು ಢಿಕ್ಕಿ; ಪಾರಾದ ಮಕ್ಕಳು

ನಮ್ಮ ವರದಿ ಜಾರಿಗೊಳಿಸುವ ವಿಶ್ವಾಸವಿದೆ: ಜಯಪ್ರಕಾಶ್‌ ಹೆಗ್ಡೆ

Government; ನಮ್ಮ ವರದಿ ಜಾರಿಗೊಳಿಸುವ ವಿಶ್ವಾಸವಿದೆ: ಜಯಪ್ರಕಾಶ್‌ ಹೆಗ್ಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಶ್ರೀ ಶಾರದಾ ಮಹೋತ್ಸವ ಸಮಿತಿ: ಮಂಗಳೂರು ಶಾರದೋತ್ಸವ ಆರಂಭ

Mangaluru: ಶ್ರೀ ಶಾರದಾ ಮಹೋತ್ಸವ ಸಮಿತಿ: ಮಂಗಳೂರು ಶಾರದೋತ್ಸವ ಆರಂಭ

CAA: ಪೌರತ್ವಕ್ಕಾಗಿ ಅರ್ಜಿ ; ಇಬ್ಬರಿಗೆ ಭಾರತದ ಪೌರತ್ವ ಅನುಮೋದನೆ

CAA: ಪೌರತ್ವಕ್ಕಾಗಿ ಅರ್ಜಿ ; ಇಬ್ಬರಿಗೆ ಭಾರತದ ಪೌರತ್ವ ಅನುಮೋದನೆ

ಕಾಂಗ್ರೆಸ್‌ಗೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಬೆಂಬಲ ಖಚಿತ

Mangaluru: ಕಾಂಗ್ರೆಸ್‌ಗೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಬೆಂಬಲ ಖಚಿತ

arrest

Mangaluru: ಆಲ್ವಿನ್‌ ಡಿ’ಸೋಜ ಮೇಲೆ ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

accident

Bajpe: ಪೊರ್ಕೋಡಿ ದ್ವಾರದ ಬಳಿ ಹೈಮಾಸ್ಟ್‌ ದೀಪದ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಶ್ರೀ ಶಾರದಾ ಮಹೋತ್ಸವ ಸಮಿತಿ: ಮಂಗಳೂರು ಶಾರದೋತ್ಸವ ಆರಂಭ

Mangaluru: ಶ್ರೀ ಶಾರದಾ ಮಹೋತ್ಸವ ಸಮಿತಿ: ಮಂಗಳೂರು ಶಾರದೋತ್ಸವ ಆರಂಭ

Udupi: ಎದೆನೋವು; ಅಕೌಂಟೆಂಟ್‌ ಸಾವು

Udupi: ಎದೆನೋವು; ಅಕೌಂಟೆಂಟ್‌ ಸಾವು

Congress: ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವು ಖಚಿತ

Congress: ವಿಧಾನಪರಿಷತ್‌ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗೆ ಗೆಲುವು ಖಚಿತ

CAA: ಪೌರತ್ವಕ್ಕಾಗಿ ಅರ್ಜಿ ; ಇಬ್ಬರಿಗೆ ಭಾರತದ ಪೌರತ್ವ ಅನುಮೋದನೆ

CAA: ಪೌರತ್ವಕ್ಕಾಗಿ ಅರ್ಜಿ ; ಇಬ್ಬರಿಗೆ ಭಾರತದ ಪೌರತ್ವ ಅನುಮೋದನೆ

Kasaragod: ಬೈಕ್‌ – ಸ್ಕೂಟರ್‌ ಢಿಕ್ಕಿ: ಯುವಕನ ಸಾವು

Kasaragod: ಬೈಕ್‌ – ಸ್ಕೂಟರ್‌ ಢಿಕ್ಕಿ: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.