ನೀರಿನ ಅಭಾವ ಮನಗಂಡ ಸೊಸೈಟಿಯಿಂದ ಮಳೆಕೊಯ್ಲು


Team Udayavani, Sep 1, 2019, 5:02 AM IST

MALEKOILU

ಉದಯವಾಣಿ ಪತ್ರಿಕೆ ಹಾಗೂ ಮೂಲ್ಕಿ ಧರ್ಮಧಿಕಾರ ಪ್ರತಿಷ್ಠಾನ ರೇವ್‌ದಂಡ ಸಂಸ್ಥೆಯ ಪ್ರೇರಣೆಯಿಂದಾಗಿ ದಿ ಕರ್ನಾಟಕ ಕ್ರಿಶ್ಚಿಯನ್‌ ಎಜುಕೇಶನ್‌ ಸೊಸೈಟಿಯು ತನ್ನ ಸಂಸ್ಥೆಯ ಅಧೀನದ ಮೂರು ಕಟ್ಟಡಗಳಿಗೆ ಮಳೆಕೊಯ್ಲು ಹಾಗೂ ಒಂದು ಕಟ್ಟಡದ ಆವರಣದಲ್ಲಿ ಇಂಗು ಗುಂಡಿಗಳನ್ನು ಮಾಡಿದೆ.

ಬೇಸಗೆ ಕಾಲದಲ್ಲಿ ನೀರಿನ ಅಭಾವವನ್ನು ಮನಗಂಡ ಸೊಸೈಟಿ ಇದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಮಳೆಕೊಯ್ಲು ಅಳವಡಿಸಿದೆ. ಸೊಸೈಟಿಯ ಹಾಸ್ಟೆಲ್ನ ಟೆರೇಸ್‌ನಿಂದ ಸಮೀಪದಲ್ಲಿರುವ ಬಾವಿಗೆ ಮಳೆಕೊಯ್ಲು ಅಳವಡಿಸಿದೆ. ಸುಮಾರು 4,000 ಅಡಿ ಎತ್ತರದ ಪೈಪ್‌ ಅಳವಡಿಸಿ ಮಳೆ ನೀರನ್ನು ಫಿಲ್ಟರ್‌ ಮಾಡಿ ಬಾವಿಗೆ ಬಿಡಲಾಗಿದೆ. ಕರ್ನಾಟಕ ಕ್ರೈಸ್ತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೆವೆ. ಡಾ| ಹನಿಬಾಲ್ ಕಬ್ರಾಲ್ ಅವರ ಮನೆಗೂ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಇದರೊಂದಿಗೆ ನಿವೃತ್ತ ಧರ್ಮಗುರುಗಳ ಮನೆ ಸಂಜೀವನದಲ್ಲೂ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಸಹೋದಯ ಸಂಸ್ಥೆಯ ಆವರಣದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ.

ಮೂರು ಕಟ್ಟಡಗಳ ಟೆರೇಸ್‌ಗಳಿಗೆ ಪೈಪ್‌ ಅಳವಡಿಸಿ ಅಲ್ಲಿಂದ ಪೈಪ್‌ ಮೂಲಕ ಸಮೀಪದ ಬಾವಿಗೆ ಮಳೆ ನೀರು ಬಿಡುವ ಕೆಲಸ ಮಾಡಲಾಗಿದೆ. ಅದಕ್ಕೂ ಮೊದಲು ಟ್ಯಾಂಕ್‌ ಬಿಟ್ಟು ಫಿಲ್ಟರ್‌ ಮಾಡಲಾಗಿದೆ. ಮೂಲ್ಕಿ ಧರ್ಮಧಿಕಾರ ಪ್ರತಿಷ್ಠಾನದ ಸಂತೋಷ್‌, ರೆವೆ. ಶಶಿಕಲಾ ಅಂಚನ್‌ ಅವರ ಮಾರ್ಗದರ್ಶನದ ಮೇರೆಗೆ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಕ್ರೈಸ್ತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೆವೆ. ಡಾ| ಹನಿಬಾಲ್ ಕಬ್ರಾಲ್ ಹೇಳುತ್ತಾರೆ.

ಕರ್ನಾಟಕ ಕ್ರೈಸ್ತ ವಿದ್ಯಾಸಂಸ್ಥೆಯ ಖಜಾಂಚಿ ರೆವೆ. ಸಾಗರ್‌ ಸುಂದರ್‌ರಾಜ್‌, ವಿದ್ಯಾರ್ಥಿ ನಿಲಯದ ಪಾಲಕಖಜಾಂಚಿ ರೆವೆ. ಸಾಗರ್‌ ಸುಂದರ್‌ ರಾಜ್‌, ವಿದ್ಯಾರ್ಥಿ ನಿಲಯದ ಪಾಲಕ ರೆವೆ. ಪುನೀತ್‌, ಭಾಸ್ಕರ್‌, ವಿಜಯ್‌ ಅಮ್ಮನ್ನ ಸಹಕಾರ ನೀಡಿದ್ದರು.

ಸಂಘಟನಾತ್ಮಕ ಕೆಲಸ

ಜನಸಾಮಾನ್ಯರು ಎಲ್ಲ ಮನೆಗಳಲ್ಲಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಆದರೆ ಇದನ್ನು ಒಬ್ಬರು, ಇಬ್ಬರು ಮಾಡುವುದಲ್ಲ; ಬದಲಿಗೆ ಸಂಘಟನಾತ್ಮಕವಾಗಿ ಮಾಡಬೇಕು.
– ಕೃತಿ ಪಾಲಡ್ಕ, ಶಿಕ್ಷಕಿ

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.