ನಗರದಲ್ಲಿ ಮಳೆಗಾಲ ಸಿದ್ಧತೆ ಕಾಮಗಾರಿ ಆರಂಭ

ಮನಾಪದಿಂದ ಚರಂಡಿ ಹೂಳೆತ್ತುವ ಕಾಮಗಾರಿ

Team Udayavani, Apr 15, 2019, 6:00 AM IST

ಮನಾಪದಿಂದ ಜಪ್ಪಿನಮೊಗರು ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ.

ಮಹಾನಗರ: ಕಳೆದ ಮೇ 29ರಂದು ಸುರಿದ ಬಾರಿ ಮಳೆಯಿಂದ ನಗರಾದ್ಯಂತ ಕೃತಕ ನೆರೆಯಿಂದ ಉಂಟಾದ ಅವಾಂತರ ಈ ಬಾರಿ ಮರಕಳಿಸದಂತೆ ತಡೆಯುವ ಉದ್ದೇಶದಿಂದ ಪಾಲಿಕೆ ಕಾಮಗಾರಿಗಳನ್ನು ಆರಂಭಿಸಿದೆ.

ಇದಕ್ಕಾಗಿ ಈಗಾಗಲೇ ಟೆಂಡರ್‌ ವಹಿಸಲಾಗಿದ್ದು, ಕಾಮಗಾರಿ ಆರಂಭ ಗೊಂಡಿದೆ. ಕಳೆದ ಬಾರಿ ಮಳೆಯಿಂದ ಹಾನಿಯುಂಟಾದ ಕಡೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದ್ದು, ಆ ಭಾಗಗಳಲ್ಲಿ ಮೊದಲಾಗಿ ಚರಂಡಿಯ ಹೂಳೆತ್ತುವ ಕಾಮಗಾರಿ ಸೇರಿದಂತೆ ಇತರ ಕಾಮಗಾರಿಗಳನ್ನು ಮಾಡಲಾಗುತ್ತಿದೆ.

ಮಹಾನಗರ ಪಾಲಿಕೆ ಆಡಳಿತಾವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಅಧಿಕಾರಿಗಳೇ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಅದರಲ್ಲಿ ಬಹುತೇಕ ಅಧಿಕಾರಿಗಳು ಲೋಕಸಭಾ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ. ಆ ಕಾರಣದಿಂದ ಕಳೆದ ಬಾರಿಯ ಮಳೆಗೆ ನಗರದಲ್ಲಿ ಉಂಟಾದ ಅವಾಂತರಗಳು ಮರುಕಳಿಸುವ ಆತಂಕದಲ್ಲಿ ಜನರಿದ್ದರು. ಸದ್ಯ ಆ ಚಿಂತೆ ದೂರವಾಗಿದ್ದು, ಕಾಮಗಾರಿಗಳು ಆರಂಭವಾಗಿವೆ.

ಪಟ್ಟಿ ಮಾಡಿ ಕಾಮಗಾರಿ
ಕೆಲವು ದಿನಗಳಿಂದ ಮಳೆಗಾಲದ ಮುಂಜಾಗೃತ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಮಗಾರಿಗಳು ನಡೆಯಬೇಕಾದ ಸ್ಥಳವನ್ನು ಮುಂಚಿತ ವಾಗಿ ಗುರುತಿಸ ಲಾಗಿತ್ತು. ಅದರಂತೆ ಅದನ್ನು ಪಟ್ಟಿ ಮಾಡಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.

ಈಗಾಗಲೇ ಬಂಗ್ರ ಕುಳೂರು, ಜೆಪ್ಪು ಸಹಿತ ಇತರ ಭಾಗಗಳಲ್ಲಿ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿವೆ.
ಚರಂಡಿ, ರಾಜಕಾಲುವೆಗಳ ಹೂಳೆತ್ತಲು ಪ್ರಾಮುಖ್ಯನಗರದ ಅತ್ತಾವರ, ಕಂಕನಾಡಿ,ಕುದ್ರೋಳಿ, ಬಲ್ಲಾಳ್‌ಬಾಗ್‌, ಜಪ್ಪಿನಮೊಗರು, ಪಂಪ್‌ವೆಲ್‌, ಕೊಟ್ಟಾರಚೌಕಿ, ಕೋಡಿಕಲ್‌, ಮಾಲೆಮಾರ್‌, ಉಜ್ಯೋಡಿ, ಜೆಪ್ಪು ಮಹಾಕಾಳಿ ಪಡು, ಕೊಂಚಾಡಿ, ಪಾಂಡೇಶ್ವರ ಸಹಿತ ಅನೇಕ ಕಡೆ ರಾಜಕಾಲುವೆಗಳಿವೆ. ಇದರ ಜತೆಗೆ ನಗರದಲ್ಲಿ ಹಲವಾರು ದೊಡ್ಡ, ಸಣ್ಣಗಾತ್ರದ ತೋಡುಗಳಿವೆ. ಇವು ಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಅಡಚಣೆಗಳು, ತೋಡುಗಳ ಒತ್ತುವರಿ, ರಸ್ತೆಗಳಲ್ಲಿ ತೆರವುಗೊಳಿಸದೆ ಇರುವ ಮಣ್ಣಿನ ತ್ಯಾಜ್ಯಗಳ ರಾಶಿಗಳನ್ನು ತೆಗೆಯುವ ಕಾಮಗಾರಿ ನಡೆಯುತ್ತಿವೆ.

ರಸ್ತೆಗಳಲ್ಲಿ ಮಳೆ ನೀರು ಹರಿಯದಿರಲಿ ಪ್ರತಿ ಮಳೆಗಾಲದಲ್ಲೂ ಮುಂಜಾಗೃತ ಕಾಮಗಾರಿ ಗಳನ್ನು ಕೈಗೊಂಡರೂ ಜ್ಯೋತಿವೃತ್ತ,ಬಂಟ್‌ಹಾಸ್ಟೇಲ್‌, ಕದ್ರಿ ಕಂಬಳ, ಬಿಜೈ, ಕೆ.ಎಸ್‌.ಆರ್‌.ರಾವ್‌ ರಸ್ತೆ,ಎಂ.ಜಿ. ರಸ್ತೆ ಮುಂತಾದೆಡೆಗಳಲ್ಲಿ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಸಂಚಾರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

 ಕಾಮಗಾರಿ ಪ್ರಗತಿಯಲ್ಲಿ
ಕಳೆದ ಮಳೆಗಾಲದಲ್ಲಿ ಉಂಟಾದ ಅವಾಂತರಗಳು ಈ ಬಾರಿ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಚುನಾವಣೆ ಬಳಿಕ ಕಾಮಗಾರಿಗಳನ್ನು ಸ್ವತಃ ನಾನೇ ಪರಿಶೀಲಿಸುತ್ತೇನೆ.
– ಶಶಿಕಾಂತ್‌ ಸೆಂಥಿಲ್‌,
ದ.ಕ. ಜಿಲ್ಲಾಧಿಕಾರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ