Udayavni Special

ನಗರದಲ್ಲಿ ಪ್ರತಿ ದಿನದ ಕಸ ಸಂಗ್ರಹದಲ್ಲಿ 70 ಟನ್‌ ಇಳಿಕೆ!


Team Udayavani, May 6, 2021, 4:40 AM IST

ನಗರದಲ್ಲಿ ಪ್ರತಿ ದಿನದ ಕಸ ಸಂಗ್ರಹದಲ್ಲಿ 70 ಟನ್‌ ಇಳಿಕೆ!

ಮಹಾನಗರ: ರಾಜ್ಯಾದ್ಯಂತ ಈಗಾಗಲೇ ಲಾಕ್‌ಡೌನ್‌ ಮಾದರಿ ಕರ್ಫ್ಯೂ ಘೋಷಣೆ ಮಾಡಲಾಗಿದ್ದು, ಒಂದು ವಾರದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹದಲ್ಲಿ ಇಳಿಕೆ ಕಂಡಿದೆ. ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದರೆ ಮಂಗಳೂರಿನಲ್ಲಿ ಸುಮಾರು 70ರಿಂದ 80 ಟನ್‌ ಕಸ ಸಂಗ್ರಹ ಕಡಿಮೆಯಾಗಿದೆ.

ಲಾಕ್‌ಡೌನ್‌ ಪರಿಣಾಮವಾಗಿ ನಗರದಲ್ಲಿ ಬಹುತೇಕ ಅಂಗಡಿಗಳು ಬಂದ್‌ ಆಗಿವೆ. ಮಾಲ್‌ಗ‌ಳು, ವಾಣಿಜ್ಯ ಕಟ್ಟಡಗಳು, ಕೆಲವೊಂದು ಹೊಟೇಲ್‌ಗ‌ಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಕಲ್ಯಾಣ ಮಂಟಪ ಸಹಿತ ವಿವಿಧ ವಲಯಗಳು ಮುಚ್ಚಿವೆ. ಸಾಮಾನ್ಯವಾಗಿ ಈ ವಲಯಗಳಿಂದ ಹೆಚ್ಚಾಗಿ ಕಸ ಉತ್ಪಾದನೆಯಾಗುತ್ತದೆ. ಇದೀಗ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡ ಪರಿಣಾಮ ಕಸ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ನಗರದಲ್ಲಿ ಸಾರ್ವಜನಿಕ ಸಂಚಾರ ಕಡಿಮೆಯಾಗಿದೆ. ಇದೇ ಕಾರಣಕ್ಕೆ ನಗರದ ಬಹುತೇಕ ಅಂಗಡಿಗಳಲ್ಲಿ ವ್ಯಾಪಾರವಿಲ್ಲ. ಹಾಸ್ಟೆಲ್‌ ಅಥವಾ ಪೇಯಿಂಗ್‌ ಗೆಸ್ಟ್‌ಗಳಲ್ಲಿ ವಾಸಿಸುವ ಬಹುತೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ಮನೆಗಳಿಗೆ ತೆರಳಿದ್ದಾರೆ. ಇದೂ ಕೂಡ ಕಸ ಸಂಗ್ರಹ ಇಳಿಕೆಗೆ ಕಾರಣ ಎನ್ನಬಹುದು.

ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆ ಯಲ್ಲಿ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ರಾಶಿಗಟ್ಟಲೆ ಕಸ ಇಲ್ಲಿ ಬಿದ್ದಿರುತ್ತದೆ. ಆದರೆ ಜಿಲ್ಲಾಧಿಕಾರಿಗಳ ಆದೇಶದಂತೆ ಸೆಂಟ್ರಲ್‌ ಮಾರುಕಟ್ಟೆ ವ್ಯಾಪಾರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಅಲ್ಲಿ ಯಾವುದೇ ರೀತಿಯ ವ್ಯಾಪಾರ- ವಹಿವಾಟು ನಡೆಯುತ್ತಿಲ್ಲ. ಇದೇ ಕಾರಣಕ್ಕೆ ಇಲ್ಲಿ ಉತ್ಪತ್ತಿಯಾಗುತ್ತಿರುವ ಕಸ ಸಂಗ್ರಹದಲ್ಲಿ ವ್ಯತ್ಯಯ ಉಂಟಾಗಿದೆ.

ಕರ್ಫ್ಯೂ ಇದ್ದರೂ ಮನೆ ಮನೆಗೆ ಕಸ ಸಂಗ್ರಹಕ್ಕೆ ಬರುವ ಸ್ವತ್ಛತ ಕಾರ್ಮಿಕರು ಪ್ರತೀ ದಿನ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ದಿನ ಬೆಳಗ್ಗೆ ನಗರದ ಪ್ರತೀ ಮನೆಗಳಿಗೆ ತೆರಳಿ ಎಂದಿನಂತೆ ಕಸ ಸಂಗ್ರಹ ನಡೆಯುತ್ತಿದೆ. ಪ್ರತೀ ದಿನ ಸಣ್ಣ ಗಾಡಿಗಳೆಲ್ಲ ಕರ್ತವ್ಯಕ್ಕೆ ಹೋಗುತ್ತಿದ್ದು, ಚಾಲಕರು ಕೂಡ ಕೆಲಸಕ್ಕೆ ಬರುತ್ತಿದ್ದಾರೆ. ಆದರೆ ಕಸ ಸಂಗ್ರಹ ಕಡಿಮೆ ಪರಿಣಾಮ 3ರಿಂದ 4 ದೊಡ್ಡ ಗಾಡಿಗಳು ನಿಂತಿವೆ. ಕೆಲವು ದಿನಗಳಿಂದ ಮನೆಗಳಲ್ಲಿ ಸಂಗ್ರಹವಾಗುವ ಪ್ರಮಾಣ ಏರಿಕೆಯಾಗಿದೆ ಎನ್ನುತ್ತಾರೆ ಸ್ವತ್ಛತ ಕಾರ್ಮಿಕರು.

ಕಸ ವಿಂಗಡಣೆಗೆ ಡೆಡ್‌ಲೈನ್‌ :

ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ವಿಂಗ ಡಿಸಿ ಮೂಲದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಕೆಲವೊಂದು ಸಂಸ್ಥೆಗಳಲ್ಲಿ ಮಾತ್ರ ಘಟಕ ಸ್ಥಾಪಿಸಿ ತ್ಯಾಜ್ಯ ಸಂಸ್ಕರಣೆಗೊಳಿ ಸಲಾಗುತ್ತಿದೆ. ಉಳಿದಂತೆ ಬೃಹತ್‌ ತ್ಯಾಜ್ಯ ಉತ್ಪಾದಕರು ಪಾಲಿಕೆಯ ಸೂಚನೆ ಪಾಲನೆ ಮಾಡಿರುವುದಿಲ್ಲ. ಮೇ 15ರೊಳಗೆ ಕಡ್ಡಾಯ ವಾಗಿ ಅನುಷ್ಠಾನಗೊಳಿಸಬೇಕು ಎಂದು ಪಾಲಿಕೆ ಈಗಾಗಲೇ ಸಂಬಧಂಪಟ್ಟವರಿಗೆ ಸೂಚನೆ ನೀಡಿದೆ.

ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದರೆ ಲಾಕ್‌ಡೌನ್‌ ಮಾದರಿ ಕರ್ಫ್ಯೂ ಹೇರಿಕೆಯಾದಾಗಿನಿಂದ ಮಂಗಳೂರಿನ ಕಸ ಸಂಗ್ರಹದಲ್ಲಿ ಇಳಿಕೆ ಕಂಡಿದೆ. ನಗರದ ಮಾಲ್‌ಗ‌ಳು, ಕೆಲವೊಂದು ಹೊಟೇಲ್‌ಗ‌ಳು, ವಾಣಿಜ್ಯ ಕಟ್ಟಡಗಳು ಬಂದ್‌ ಆಗಿದ್ದು, ಈ ಪರಿಣಾಮ ಕಸ ಸಂಗ್ರಹ ಕಡಿಮೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಸುಮಾರು 320ರಿಂದ 340 ಟನ್‌ ಸಂಗ್ರಹವಾಗುತ್ತಿದ್ದು, ಸದ್ಯ ಸುಮಾರು ಸರಾಸರಿ 225 ಟನ್‌ ಸಂಗ್ರಹವಾಗುತ್ತಿದೆ.  ಪ್ರೇಮಾನಂದ ಶೆಟ್ಟಿ,   ಪಾಲಿಕೆ ಮೇಯರ್‌

ಟಾಪ್ ನ್ಯೂಸ್

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಇದನ್ನೂ ಓದಿ  ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಇದನ್ನೂ ಓದಿ ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

2022ಕ್ಕೆ ಎಲ್ಲಾ 36 ರಫೇಲ್‌ ಭಾರತಕ್ಕೆ : ಭಾರತೀಯ ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

2022ಕ್ಕೆ ಎಲ್ಲಾ ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ : ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ, ಪಾಸಿಟಿವಿಟಿ ದರ ಹೆಚ್ಚಾಗಿಲ್ಲ: ಡಿಸಿ

ದ.ಕ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ, ಪಾಸಿಟಿವಿಟಿ ದರ ಹೆಚ್ಚಾಗಿಲ್ಲ: ಡಿಸಿ

ಕರಾವಳಿ: ಪೆಟ್ರೋಲ್‌ ಶತಕ : ದ.ಕ., ಉಡುಪಿಯ ಕೆಲವೆಡೆ ಲೀ.ಗೆ 100 ರೂ.

ದ.ಕ. ಜಿಲ್ಲೆಯಲ್ಲಿ 1006 ಮಂದಿಗೆ ಕೋವಿಡ್ ದೃಢ; ದಾಖಲೆಯ 15 ಮಂದಿ ಸಾವು

ದ.ಕ. ಜಿಲ್ಲೆಯಲ್ಲಿ 1006 ಮಂದಿಗೆ ಕೋವಿಡ್ ದೃಢ; ದಾಖಲೆಯ 15 ಮಂದಿ ಸಾವು

ಎಸೆಸೆಲ್ಸಿ ಪರೀಕ್ಷಾ ಕೇಂದ್ರ ಹೆಚ್ಚಳ : ಕಳೆದ ವರ್ಷ 145; ಈ ವರ್ಷ 256

ಎಸೆಸೆಲ್ಸಿ ಪರೀಕ್ಷಾ ಕೇಂದ್ರ ಹೆಚ್ಚಳ : ಕಳೆದ ವರ್ಷ 145; ಈ ವರ್ಷ 256

banking frauds

“ಬ್ಯಾಂಕ್‌ ಖಾತೆ ಬ್ಲಾಕ್‌’ ಸಂದೇಶ: ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಹಣ ದೋಚುವ ವಂಚಕರು!

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

ಕಾಶ್ಮೀರಕ್ಕೆ ಮತ್ತೆ ರಾಜ್ಯ ಗೌರವ? 24ಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ

The floating library

ತೇಲುವ ಗ್ರಂಥಾಲಯದೊಳಗೆ  ವಿಶಾಲ ಜಗತ್ತಿನ ದರ್ಶನ

desiswara

ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!

Points of Light Award

ಯೋಗ ಪ್ರೋಡೈಜಿ ಈಶ್ವರ್‌ ಶರ್ಮಾಗೆ ಪಾಯಿಂಟ್ಸ್‌ ಆಫ್ ಲೈಟ್‌ ಪ್ರಶಸ್ತಿ

desiswara

ಯಾರು ಬೇಕಾದರೂ ಕತೆಗಾರ,  ವಿನ್ಯಾಸಗಾರರಾಗಬಹುದು: ನಾಗರಾಜ್‌ ವಸ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.