ಉಳ್ಳಾಲ ಸಮುದ್ರ ತೀರದಲ್ಲಿ ದ.ಕ ಜಿಲ್ಲಾಡಳಿತ ನೇತೃತ್ವದಲ್ಲಿ ಅಣುಕು ರಕ್ಷಣಾ ಕಾರ್ಯಾಚರಣೆ

ಹಡಗಿನಿಂದ ತೈಲ ಸೋರಿಕೆಯಾದಲ್ಲಿ ಕೈಗೊಳ್ಳುವ ರಕ್ಷಣಾ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ

Team Udayavani, Jun 25, 2022, 10:46 PM IST

ಉಳ್ಳಾಲ ಸಮುದ್ರ ತೀರದಲ್ಲಿ ದ.ಕ ಜಿಲ್ಲಾಡಳಿತ ನೇತೃತ್ವದಲ್ಲಿ ಅಣುಕು ರಕ್ಷಣಾ ಕಾರ್ಯಾಚರಣೆ

ಉಳ್ಳಾಲ:  ಉಚ್ಚಿಲ ಸೋಮೇಶ್ವರ ಸಮುದ್ರ ತೀರದಲ್ಲಿ ಮುಳುಗಡೆಯಾಗಿರುವ ತೈಲ ಹೊತ್ತಿರುವ ಸಿರಿಯಾ ಹಡಗಿನಿಂದ  ತೈಲ ಸೋರಿಕೆಯಾದಲ್ಲಿ ಅಥವಾ ಸೋರಿಕೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ನಿದರ್ಶನದಲ್ಲಿ  ರಕ್ಷಣಾ ತಂಡಗಳ ನೇತೃತ್ವದಲ್ಲಿ ಉಳ್ಳಾಲ ಸಮುದ್ರ ತೀರದಲ್ಲಿ ಅಣುಕು ರಕ್ಷಣಾ ಕಾರ್ಯಾಚರಣೆ ಹಾಗೂ 160 ಮಂದಿ ಸಿಬ್ಬಂದಿಗೆ ತರಬೇತಿ ನಡೆಯಿತು.

ಅಣುಕು ಕಾರ್ಯಾಚರಣೆ ಪ್ರದೇಶಕ್ಕೆ ಭೇಟಿ ನೀಡಿದ  ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮಾತನಾಡಿ, ʻ ಜಿಲ್ಲೆಯ ವ್ಯಾಪ್ತಿಯ  ಸಮುದ್ರ ತೀರದಲ್ಲಿ  ತೈಲ ಹೊತ್ತಿರುವ ಸಿರಿಯಾ ಹಡಗು ಮುಳುಗಡೆ  ಹಿನ್ನೆಲೆಯಲ್ಲಿ  ರಕ್ಷಣಾ ತಂಡಗಳಿಂದ   ಅಣುಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಹಡಗಿನೊಳಗಡೆ 160 ಮೆಟ್ರಿಕ್‌ ಟನ್‌ ತೈಲ ದಾಸ್ತಾನು ಹಾಗೂ 60 ಮೆಟ್ರಿಕ್‌ ಟನ್‌ ಹಡಗಿನ ಇಂಜಿನ್‌ ಆಯಿಲ್‌ ಇದೆ.  ಈ ಕುರಿತು ಡಿ.ಜೆ ಶಿಪ್ಪಿಂಗ್‌, ಹಡಗು ಮಾಲೀಕರು ಹಾಗೂ ಪ್ರಾಡಕ್ಷನ್‌ ಆಂಡ್‌ ಎಂಡೆಮೆಟಿಕ್‌ ಕ್ಲಬ್‌ ಮುಖಾಂತರ  ತೈಲ ಸೋರಿಕೆಯಾಗದ ರೀತಿಯಲ್ಲಿ, ಸುಗಮವಾಗಿ ಹೊರತೆಗೆಯುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಇವರ ಜೊತೆಗೆ ಕೋಸ್ಟ್‌ ಗಾರ್ಡ್‌, ಕರ್ನಾಟಕ ಸರಕಾರ , ಜಿಲ್ಲಾಡಳಿತ ಸೇರಿದಂತೆ ಇಡೀ ರಕ್ಷಣಾ ತಂಡ  ಸಹಕರಿಸುತ್ತಿದೆ.

ಹಡಗು ತುಂಡಾಗಿ ತೈಲ ಸೋರಿಕೆಯಾದಲ್ಲಿ ಆಯಿಲ್‌ ಸ್ಪಿಲ್‌ ಕ್ರೈಸಿಸ್‌ ತಂಡ,  ತಾಂತ್ರಿಕ ತಜ್ಞರ ಮುಖೇನ ಸಲಹೆ ಪಡೆದು 140 ಮಂದಿಗೆ ತರಬೇತಿಯನ್ನು ನೀಡಲಾಗಿದೆ.  ತೈಲ ಸೋರಿಕೆಯಾದರೂ ಪರಿಸರ ನಾಶವಾಗದ ರೀತಿಯಲ್ಲಿ ಹಾಗೂ ಸೋರಿಕೆಯಾದ ಸಂದರ್ಭ  ಜನರಿಗೆ ಅರಿವು ಮೂಡಿಸುವ ಕೆಲಸವನ್ನು  ಇಂದಿನ ತರಬೇತಿಯಲ್ಲಿ ಮಾಡಲಾಗಿದೆ. ಹಡಗಿನೊಳಗಡೆ ಇದ್ದಂತಹ 15 ಸಿರಿಯನ್‌ ಗಳು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.  ಹಡಗಿನೊಳಗಡೆ ಇರುವಂತಹ ತೈಲವನ್ನು ಸುರಕ್ಷಿತವಾಗಿ ಹೊರತೆಗೆದ ನಂತರ  ಮುಳುಗಡೆಯ ತನಿಖೆ ನಡೆಯಲಿದೆ ಎಂದರು.

ಈ ಸಂದರ್ಭ ಎನ್‌ ಡಿಆರ್‌ ಎಫ್‌, ಎಸ್‌ ಡಿ ಆರ್‌ ಎಫ್‌, ಹೋಂ ಗಾರ್ಡ್,  ಕಾರವಳಿ ತಟ ರಕ್ಷಣಾ ಪಡೆ, ಕರಾವಳಿ ಕಾವಲು ಪಡೆ, ಉಳ್ಳಾಲ ಪೊಲೀಸ್‌ ತಂಡ ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ,  ಉಳ್ಳಾಲ ನಗರಸಭೆ ಕಮೀಷನರ್‌ ವಿದ್ಯಾ ಕಾಳೆ  ಸೇರಿದಂತೆ ರಕ್ಷಣಾ ತಂಡಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

politics siddaramayya

ಸದ್ಯದಲ್ಲೇ ‘ಬಸ್ ಯಾತ್ರೆ’ಗೆ ದಿನಾಂಕ ನಿಗದಿ: ಮಂಡ್ಯದಲ್ಲಿ ಸಿದ್ದರಾಮಯ್ಯ ಘೋಷಣೆ

shiralikoppa

ಶಿರಾಳಕೊಪ್ಪದಲ್ಲಿ ಭೂಕಂಪನದ ಅನುಭವ; ವೈರಲ್ ಆಯ್ತು ಸ್ಕ್ರೀನ್ ಶಾಟ್

ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭ: ರಾಹುಲ್ ಗೆ ಸಾಥ್ ನೀಡಿದ ಸೋನಿಯಾ

ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭ: ರಾಹುಲ್ ಗೆ ಸಾಥ್ ನೀಡಿದ ಸೋನಿಯಾ

48 ಕೋಟಿ ರೂ.ಗೆ ಅಪಾರ್ಟ್‌ಮೆಂಟ್‌ ಖರೀದಿಸಿದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌

48 ಕೋಟಿ ರೂ.ಗೆ ಅಪಾರ್ಟ್‌ಮೆಂಟ್‌ ಖರೀದಿಸಿದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌

thumb news 5 g lava

ದೀಪಾವಳಿಗೆ ಬರಲಿದೆ ಲಾವಾ ಬ್ಲೇಜ್‌ 5ಜಿ ; ಎರಡು ಬಣ್ಣಗಳ ಆಯ್ಕೆಯಿರುವ ಫೋನ್‌

thumb cricket t20

ಭಾರತದ ಮೀಸಲು ಪಡೆಗೆ ಹರಿಣಗಳ ಸವಾಲು; ಇಂದಿನಿಂದ ಏಕದಿನ ಸರಣಿ

1-sadsada

ಶಿವಸೇನೆ ಬಣಗಳ ದಸರಾ ರ‍್ಯಾಲಿ ಮೇಲಾಟ : ಶಿಂಧೆಗೆ ಕಟ್ಟಪ್ಪ ಎಂದ ಠಾಕ್ರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

ತ್ಯಾಜ್ಯ ಸಂಗ್ರಹಿಸುವ 12 ಕುಟುಂಬಗಳ ಸೂರಿಗೆ ಸೋಲಾರ್‌ ಲೈಟ್‌

ಕಾಂತಾರ-2 ದೈವೇಚ್ಛೆಗೆ ಬಿಟ್ಟದ್ದು: ನಟ,ನಿರ್ದೇಶಕ ರಿಷಬ್‌ ಶೆಟ್ಟಿ

ಕಾಂತಾರ-2 ದೈವೇಚ್ಛೆಗೆ ಬಿಟ್ಟದ್ದು: ನಟ,ನಿರ್ದೇಶಕ ರಿಷಬ್‌ ಶೆಟ್ಟಿ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಪ್ರಕಟ

ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಂಬಳ ವೇಳಾಪಟ್ಟಿ ಪ್ರಕಟ

MUST WATCH

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

ಹೊಸ ಸೇರ್ಪಡೆ

4

ಮತ್ತೆ ಚುನಾವಣೆ ಅಸ್ತ್ರವಾದ ಮೇಸ್ತ

politics siddaramayya

ಸದ್ಯದಲ್ಲೇ ‘ಬಸ್ ಯಾತ್ರೆ’ಗೆ ದಿನಾಂಕ ನಿಗದಿ: ಮಂಡ್ಯದಲ್ಲಿ ಸಿದ್ದರಾಮಯ್ಯ ಘೋಷಣೆ

3

ತಮ್ಮನಿಗೆ ಚಾಕುವಿನಿಂದ ಇರಿದ ಅಣ್ಣ

2

ತ್ಯಾಜ್ಯ ಸಂಗ್ರಹಿಸುವ 12 ಕುಟುಂಬಗಳ ಸೂರಿಗೆ ಸೋಲಾರ್‌ ಲೈಟ್‌

shiralikoppa

ಶಿರಾಳಕೊಪ್ಪದಲ್ಲಿ ಭೂಕಂಪನದ ಅನುಭವ; ವೈರಲ್ ಆಯ್ತು ಸ್ಕ್ರೀನ್ ಶಾಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.