ಗ್ರಾಮೀಣ ಶಿಕ್ಷಣ ಕ್ರಾಂತಿ: ಆ. 14 – ಶೀಂಟೂರು ಸ್ಮೃತಿ


Team Udayavani, Aug 11, 2017, 6:05 AM IST

shintoor-smruthi.jpg

ಮಂಗಳೂರು: ಕೆ. ಸೀತಾರಾಮ ರೈ ಸವಣೂರು ಅವರು ಸ್ಥಾಪಕ – ಸಂಚಾಲಕರಾಗಿರುವ ಪುತ್ತೂರು ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ಥಾಪಕರ ದಿನಾಚರಣೆ – ಶೀಂಟೂರು ಸ್ಮೃತಿ 2017- ಸಂಸ್ಥೆಯ ಕ್ಯಾಂಪಸ್‌ನಲ್ಲಿ ಆ. 14ರಂದು ನಡೆಯಲಿದೆ. ಈ ಬಾರಿಯ ಶೀಂಟೂರು ಸಮ್ಮಾನವನ್ನು ಮಂಗಳೂರಿನ ಮಣಿಪಾಲ ವಿ.ವಿ. ಹಾಸ್ಟೆಲ್‌ಗ‌ಳ ಪ್ರಧಾನ ನಿಲಯಪಾಲಕ ಕರ್ನಲ್‌ ಪ್ರೇಮ್‌ಕುಮಾರ್‌ ಶೆಟ್ಟಿ ಅವರಿಗೆ ಅಂದು ನೀಡಲಾಗುತ್ತದೆ.
ಎಸ್‌.ಎನ್‌.ಆರ್‌. ರೂರಲ್‌ ಎಜುಕೇಶನ್‌ ಟ್ರಸ್ಟ್‌ ವತಿಯಿಂದ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳನ್ನು ಸೀತಾರಾಮ ರೈ ಅವರು ಸವಣೂರು ಎಂಬ ಪುಟ್ಟ ಹಳ್ಳಿಯಲ್ಲಿ 2001ರಲ್ಲಿ ಸ್ಥಾಪಿಸಿದರು. ಈಗ ಈ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಎಲ್‌ಕೆಜಿಯಿಂದ ಪದವಿಯವರೆಗೆ 1,000 ಮಂದಿ ವಿದ್ಯಾರ್ಥಿಗಳಿದ್ದಾರೆ. 250 ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ವಸತಿನಿಲಯಗಳಲ್ಲಿದ್ದಾರೆ. ಪಿಯುಸಿ ಮತ್ತು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜುಗಳ ಪ್ರತ್ಯೇಕ ಕ್ಯಾಂಪಸ್‌ ಹೊಂದಿದ್ದು, ತಲಾ 200 ಮೀ. ಓಟದ ಟ್ರಾÂಕ್‌ಗಳ ಎರಡು ಮೈದಾನಗ‌ಳಿವೆ.

ಸ್ಮಾರ್ಟ್‌ ಕ್ಲಾಸ್‌ ಆಧಾರಿತ ಬೋಧನೆ ಲಭ್ಯವಿದೆ. ಗ್ರಾಮೀಣ ಪರಿಸರದ ಸರ್ವ ಸಜ್ಜಿತ ಶಿಕ್ಷಣ ಸಂಸ್ಥೆಗಳೆಂಬ ಮನ್ನಣೆಗೆ ಪಾತ್ರವಾಗಿದೆ.

ಶೈಕ್ಷಣಿಕ ಕ್ರಾಂತಿ
ತಂದೆ ಶೀಂಟೂರು ನಾರಾಯಣ ಶೆಟ್ಟಿ ಅವರ ಕನಸನ್ನು ನನಸಾಗಿಸಲು ನಾನು ಈ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದೆ ಎಂದು ಸವಣೂರು ಸೀತಾರಾಮ ರೈ ಅವರು ಗುರುವಾರ ವಿದ್ಯಾಗಂಗೋತ್ರಿ ಕ್ಯಾಂಪಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 10ನೇ ತರಗತಿಯಲ್ಲಿ 9 ಬಾರಿ, ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಿರಂತರವಾಗಿ, ವಿಜ್ಞಾನ
ದಲ್ಲಿ 2 ಬಾರಿ ಶೇ. 100 ಫಲಿತಾಂಶ ಸಾಧ್ಯವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯವಿದೆ.

ಸ್ಕೌಟ್ಸ್‌ ಗೈಡ್ಸ್‌ ಘಟಕ, ಅತ್ಯಾಕರ್ಷಕ ನಿಸರ್ಗ ಸೌಂದರ್ಯ, ಹೈನುಗಾರಿಕೆ ವೀಕ್ಷಣೆ, ಚಾರಣ, ಕಂಪ್ಯೂಟರ್‌ ಬಳಕೆ, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಗುಮ್ಮಟ ರಚನೆಯ ಕಟ್ಟಡ, ವಿದ್ಯಾರ್ಥಿಗಳ ಸುರಕ್ಷತೆಗೆ ಮೊಬೈಲ್‌ ಮೂಲಕ ಸಂದೇಶ ರವಾನೆ ಮುಂತಾದ ವಿಶೇಷಗಳಿವೆ.

ಸಮೂಹದ ಆಡಳಿತಗಾರ ಅಶ್ವಿ‌ನ್‌ ಎಲ್‌. ಶೆಟ್ಟಿ, ಪೋಷಕ ಎನ್‌. ಸುಂದರ ರೈ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷಿ$¾à ಎಸ್‌. ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಉಪಸ್ಥಿತರಿದ್ದರು.

25 ಎಕರೆ ಕ್ಯಾಂಪಸ್‌
ವಿದ್ಯಾರಶ್ಮಿ ಸಂಸ್ಥೆಗಳು 25 ಎಕರೆಯಷ್ಟು ಕ್ಯಾಂಪಸ್‌ನಲ್ಲಿದೆ. ಇಲ್ಲಿ ಶಿಕ್ಷಣ ಪಡೆದವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆಂದು ಸೀತಾರಾಮ ರೈ ವಿವರಿಸಿದರು. ವಿದ್ಯಾರಶ್ಮಿ ಫಿಟ್‌ನೆಸ್‌ ಸೆಂಟರ್‌ ಆ. 18ರಂದು ಉದ್ಘಾಟನೆಯಾಗಲಿದೆ.

ರೈ: ಬಹುಮುಖೀ ಸಾಧಕ
ಸವಣೂರು ಸೀತಾರಾಮ ರೈ ಅವರು ಸವಣೂರು ಎಂಬ ಪುಟ್ಟ ಹಳ್ಳಿಯ ಸರ್ವತೋಮುಖ ಅಭಿವೃದ್ಧಿಗೆ ಸ್ಫೂರ್ತಿಯಾಗಿದ್ದಾರೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಸಹಕಾರಿಯಾಗಿ ಅನೇಕ ಕೊಡುಗೆಗಳು, ಸವಣೂರಿನಲ್ಲಿ ವಾಣಿಜ್ಯ ಸಂಕೀರ್ಣ, ಹೈನುಗಾರಿಕೆ, ಪೆಟ್ರೋಲ್‌ ಬಂಕ್‌ ಸ್ಥಾಪನೆ, ಪುತ್ತೂರು ತಾಲೂಕಿನ ಸರಕಾರಿ ಶಾಲೆಗಳಿಗೆ ಕೊಡುಗೆ, ಧಾರ್ಮಿಕ ಮುಂದಾಳು ವಾಗಿ ವಿವಿಧ ಯೋಜನೆ, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪನೆ, ಸಾಮಾಜಿಕ ಚಟುವಟಿಕೆ, ಪುತ್ತೂರಿನ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ಸೇವೆ, ಕಲೆ-ಸಾಹಿತ್ಯ ಸಂಘಟನೆ, ವೈಯಕ್ತಿಕವಾಗಿ ಅಡಿಕೆ – ಭತ್ತ, ರಬ್ಬರ್‌, ತೆಂಗು ಕೃಷಿ- ಹೀಗೆ ಬಹುಮುಖೀ ಸಾಧನೆ. ತಂದೆ ದಿ| ಶೀಂಟೂರು ನಾರಾಯಣ ರೈ ಅವರು 2ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮಾದಲ್ಲಿ ಸೇವಾನಿರತರಾಗಿದ್ದರು.

ಟಾಪ್ ನ್ಯೂಸ್

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

6dharmasthala

ಧರ್ಮಸ್ಥಳದ ಧರ್ಮಾಧಿಕಾರಿ ಕಾರ್ಯ ಮಾದರಿ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

cracker

ಹೊರಬೀಳದ ಆದೇಶ, ಮುಗಿಯದ ಆತಂಕ

5kasapa

ಸಾಮೂಹಿಕ ನಾಯಕತ್ವದಲ್ಲಿ ಕಸಾಪ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.