ಯಕ್ಷಗಾನದಿಂದ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ

ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ; ಪ್ರಶಸ್ತಿ ಪ್ರದಾನ

Team Udayavani, May 23, 2019, 6:10 AM IST

2205MOOD2

ಮೂಡುಬಿದಿರೆ: ಯಕ್ಷ ಗಾನ ಜನರಲ್ಲಿ ಜೀವನ ಮೌಲ್ಯಗಳ ಅರಿವಿನೊಂದಿಗೆ ಸಂಸ್ಕಾರ ಮೂಡಿಸುತ್ತ ಬಂದಿದೆ. ಅದರಲ್ಲೂ ಮಕ್ಕಳಿಗೆ ಯಕ್ಷ ಗಾನದ ಬಗ್ಗೆ ಆಸಕ್ತಿ ಮೂಡಿಸಿದಲ್ಲಿ ಅವರು ಸಂಸ್ಕಾ ರವಂತರಾಗಿ ಬೆಳೆಯಲು ಸಾಧ್ಯ ಎಂದು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು.

ಯಕ್ಷಗಾನ ಕಲಾವಿದ ಮೂಡುಬಿದಿರೆ ಮಾಧವ ಶೆಟ್ಟಿ ಅವರ ಸಂಸ್ಮರಣೆ,ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಧವ ಶೆಟ್ಟಿ ಅವರಂತಹ ಹಿರಿಯ ಕಲಾವಿದರ ಕಲಾ ಸಾಧನೆ ಇಂದಿನ ಕಲಾವಿದರಿಗೆ ಮಾದರಿ ಎಂದರು.

ಯಕ್ಷ ಸಂಗಮದ ಸಂಚಾಲಕ ಎಂ.ಶಾಂತರಾಮ ಕುಡ್ವ ಅವರು ಮಾಧವ ಶೆಟ್ಟಿ ಅವರ ಸಂಸ್ಮರಣೆಗೈದರು. ಮಾಧವ ಶೆಟ್ಟಿ ಅವರು ಪುಂಡು ವೇಷ, ರಾಜ ವೇಷಗಳಿಂದ ತೊಡಗಿ ಎಲ್ಲ ಬಗೆಯ ವೇಷಧಾರಿಯಾಗಿ, ಸಮರ್ಥ ಅರ್ಥ ಧಾರಿ ಯಾಗಿ ಪ್ರಸಿದ್ಧರಾದವರು. ತುಳು ಪ್ರಸಂಗಗಳ ಪಾತ್ರಚಿತ್ರಣದಲ್ಲೂ ಮಿಂಚಿ ದವರು ಎಂದು ಅವರು ಬಣ್ಣಿಸಿದರು.

ಅನುಭವಿ ಕಲಾವಿದ
ಇರುವೈಲು ಮೇಳದ ಮಾಜಿ ಸಂಚಾಲಕ, ನಿವೃತ್ತ ಬ್ಯಾಂಕ್‌ ಅಧಿಕಾರಿ ಐ. ಕುಮಾರ ಶೆಟ್ಟಿ ಅವರು ತಮ್ಮ ಅಭಿನಂದನ ಭಾಷಣದಲ್ಲಿ “ರಂಗಸ್ಥಳದ ಗುರಿಕಾರ, ಅಭಿನವ ಕೋಟಿ ಬಿರುದಾಂಕಿತ ದಾಸಪ್ಪ ರೈ ಅವರು ವಹಿಸಿದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ಅಪರೂಪದ ಕಲಾವಿದರಲ್ಲಿ ಓರ್ವರು; ಯಕ್ಷಗಾನ ಕಲಾವಿದ, ಮೇಳಗಳ ಯಜಮಾನರಾಗಿ ಅನುಭವಿ’ ಎಂದು ಕೊಂಡಾಡಿದರು.

ಕಲಾ ಜೀವನದಲ್ಲಿ ಸಂತೃಪ್ತಿ
ಸಮ್ಮಾನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ದಾಸಪ್ಪ ರೈ ಅವರು, ಯಕ್ಷರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ತಮಗೆ ಯಕ್ಷಗಾನ ಬಯಲಾಟ ಅಕಾಡೆಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳೊಂದಿಗೆ ಪ್ರತಿಷ್ಠಿತ ಬೋಳಾರ ನಾರಾಯಣ ಶೆಟ್ಟಿ , ಅಳಿಕೆ ರಾಮಯ್ಯ ರೈ, ಪುಳಿಂಚ ರಾಮಯ್ಯ ರೈ, ಕರ್ನೂರು ಕೊರಗಪ್ಪ ರೈ ಇವರ ಹೆಸರಿನ ಪ್ರಶಸ್ತಿಗಳು ಲಭಿಸಿದ್ದು ಈಗ ತಮ್ಮ ಒಡನಾಡಿ ಹಿರಿಯ ಕಲಾವಿದ ಮಾಧವ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಒಲಿದು ಬಂದಿರುವುದು ತಮ್ಮ ಕಲಾಜೀವನದ ಸಂತೃಪ್ತಿಯ ಸಂಗತಿ ಎಂದು ಉದ್ಗರಿಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ದಿವಾಕರ ಶೆಟ್ಟಿ ಭಾಗವಹಿಸಿದ್ದರು.
ಮಾಧವ ಶೆಟ್ಟಿ ಅವರ ಪತ್ನಿ ಗುಲಾಬಿ ಶೆಟ್ಟಿ, ಮಕ್ಕಳಾದ ಜಯರಾಮ ಶೆಟ್ಟಿ,ಶಾರದಾ ಶೆಟ್ಟಿ, ವೇದಾವತಿ ಶೆಟ್ಟಿ, ಅಳಿಯ ನೀಲೇಶ್‌ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

ಮಾಧವ ಶೆಟ್ಟಿ ಅವರ ಮೊಮ್ಮಗ ವೇಣುಗೋಪಾಲ ಶೆಟ್ಟಿ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿ, ಸಮ್ಮಾನ ಪತ್ರ ವಾಚಿಸಿ ದರು. ಪ್ರೊ| ಸದಾಶಿವ ಶೆಟ್ಟಿಗಾರ್‌ ಕಾರ್ಯ  ಕ್ರಮ ನಿರೂಪಿಸಿ ದರು. ವಿನೋದ್‌ಕುಮಾರ್‌ ಶೆಟ್ಟಿ ವಂದಿಸಿದರು.ಬಳಿಕ, ಬೆಳ್ಮಣ್ಣು ಬಲ್ಲಿರೇನಯ್ಯ ಮಿತ್ರ ಮೇಳದಿಂದ
“ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನವಿತ್ತು.

ಪ್ರಶಸ್ತಿ ಪ್ರದಾನ
ಮೂಡುಬಿದಿರೆ ಮಾಧವ ಶೆಟ್ಟಿ ಸಂಸ್ಮರಣೆ ವೇದಿಕೆ, ಶಿಮಂತೂರು ಸಂಘಟ ನೆಯು ಯಕ್ಷ ಸಂಗಮದ ಆಶ್ರಯದಲ್ಲಿ, ಕಲಾವಿದ, “ಬಲ್ಲಿರೇನಯ್ಯ’ ಯಕ್ಷ ಮಾಸಿಕ ಸಂಪಾದಕ ತಾರಾನಾಥ ವರ್ಕಾಡಿ ಅವರ ವಿಶೇಷ ಸಹಕಾರದೊಂದಿಗೆ ಉದ್ಯಮಿ ಕೆ. ಶ್ರೀಪತಿ ಭಟ್‌ ಅವರ ಅಧ್ಯ ಕ್ಷತೆಯಲ್ಲಿ ಸಮಾಜ ಮಂದಿರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಲಾದ ಈ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೆ. ಎಚ್‌. ದಾಸಪ್ಪ ರೈ ಅವರಿಗೆ “ಮಾಧವ ಶೆಟ್ಟಿ ಪ್ರಶಸ್ತಿ’ ನೀಡಿ ಸಮ್ಮಾನಿಸಲಾಯಿತು.

ಟಾಪ್ ನ್ಯೂಸ್

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fwrrre

ಮಂಗಳೂರು: ಹಣಕ್ಕಾಗಿ ಜ್ಯೋತಿಷಿಯೊಬ್ಬರ ಹನಿ ಟ್ರ್ಯಾಪ್ ಮಾಡಿದ್ದ ದಂಪತಿಗಳ ಬಂಧನ 

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

Untitled-1

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ! 

Untitled-1

ಕೋವಿಡ್ ಪ್ರಕರಣ ಏರಿಕೆ: ದ.ಕ. ಜಿಲ್ಲೆಯ 5 ಶಾಲೆಗಳಿಗೆ ರಜೆ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

ಪಾಲಿಕೆ ವ್ಯಾಪ್ತಿಯಲ್ಲಿ  ಗುರಿ ತಲುಪುತ್ತಿಲ್ಲ ಲಸಿಕೆ ಅಭಿಯಾನ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ದ್ತಯುಇ9ಇಯತಗ್ಸದಷ

ಮೆಕ್ಕೆಜೋಳ ಇ-ಟೆಂಡರ್‌ಗೆ ಭರಪೂರ ಸ್ಪಂದನೆ

1-asasd

ಸುಲೇಮಾನ್ ಸ್ಟೋನ್ ಹೆಸರಿನಲ್ಲಿ ವಂಚನೆ :ಬಾಗಲಕೋಟೆಯಲ್ಲಿ 5 ಲಕ್ಷ ಜಪ್ತಿ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.