ಸರಣಿ ರಜೆ: ಮತದಾನದ ಮೇಲೆ ಪರಿಣಾಮ?


Team Udayavani, Mar 12, 2019, 1:00 AM IST

sarani-raje.jpg

ಮಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಅದೇ ಅವಧಿಯಲ್ಲಿ ಸಾಲು ಸಾಲು ರಜೆಗಳೂ ಇವೆ. ಮಕ್ಕಳಿಗೆ ಬೇಸಗೆ ರಜೆಯ ಅವಧಿ. ರಜೆಯ ಲೆಕ್ಕಾಚಾರದಲ್ಲಿ ಈಗಾಗಲೇ ಒಂದಷ್ಟು ಮಂದಿ ದೇಶ-ವಿದೇಶಗಳಿಗೆ ಪ್ರವಾಸ ಕೈಗೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಚುನಾವಣೆ ಬರುತ್ತಿರುವುದು ದೂರ ಪ್ರವಾಸಕ್ಕೆ ಅಣಿಯಾಗಿರುವ ಮತದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಅತಿದೊಡ್ಡ ಹಬ್ಬ ಚುನಾವಣೆ. ಮತದಾನ ಪ್ರತಿಯೊಬ್ಬ ಪ್ರಜ್ಞಾವಂತ ಮತದಾರನ ಆದ್ಯ ಕರ್ತವ್ಯ. ಈ ಅವಧಿಯಲ್ಲಿ ಪ್ರವಾಸ ಯೋಜನೆ ಹಾಕಿಕೊಂಡಿದ್ದರೆ ಅದನ್ನು ಮುಂದೂಡುವುದು ಅಥವಾ ರದ್ದುಗೊಳಿಸುವುದು ಅನಿವಾರ್ಯವಾಗುತ್ತದೆ. ಇನ್ನೊಂದೆಡೆ ಏನಾದರಾಗಲಿ ನಮಗೆ ಪ್ರವಾಸವೇ ಮುಖ್ಯ;
ಈಗಾಗಲೇ ಎಲ್ಲ ವ್ಯವಸ್ಥೆ ಮಾಡಿಕೊಂಡಿರುವು ದರಿಂದ ರದ್ದುಗೊಳಿಸುವುದು ಅಸಾಧ್ಯ ಎನ್ನುವ ವರೂ ಇದ್ದಾರೆ. ಈ ದಿಸೆಯಲ್ಲಿ ಯೋಚಿಸುವವರ ಸಂಖ್ಯೆ ಜಾಸ್ತಿಯಾದರೆ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯೂ ಇದೆ.

ರಾಜ್ಯದಲ್ಲಿ ಎರಡು ಹಂತಗ‌ಳಲ್ಲಿ (ಎ. 17 ಹಾಗೂ 23) ಚುನಾವಣೆ ನಡೆಯಲಿದೆ. ಅದೇ ಸಮಯದಲ್ಲಿ ಅಂದರೆ ಎ. 17ರಂದು ಮಹಾವೀರ ಜಯಂತಿ, ಎ. 19ರಂದು ಗುಡ್‌ಫ್ರೈಡೇ, ಎ. 20ರಂದು ಶನಿವಾರ, 21ರಂದು ರವಿವಾರ ಆಗಿರುತ್ತದೆ. ರಾಜ್ಯದ ಉಳಿದ 14 ಕ್ಷೇತ್ರಗಳಲ್ಲಿ 2ನೇ ಹಂತವಾಗಿ ಎ. 23ರಂದು ಮತದಾನ ನಡೆಯಲಿದ್ದು, ಆ ದಿನವೂ ಸಾರ್ವತ್ರಿಕ ರಜೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಎ. 21ರ ಬಳಿಕ ಬರುವ 22ಕ್ಕೆ ರಜೆ ಹಾಕಿದರೆ, ಮತ್ತೆ 23 ಹೇಗಿದ್ದರೂ ರಜಾ ದಿನ. ಅಂದರೆ, ಎ. 17ರಿಂದ 23ರ ವರೆಗಿನ ಒಟ್ಟು 7 ದಿನಗಳ ಅವಧಿಯಲ್ಲಿ ಎರಡು ದಿನ ಕಚೇರಿಗೆ ಹೋಗುವವರು ರಜೆ ಮಾಡಿದರೆ ಬಾಕಿ ಉಳಿದ ಐದು ದಿನಗಳು ರಜಾ ಇದ್ದು, ಕೆಲವರು ಆ ಲೆಕ್ಕಾಚಾರದಲ್ಲಿಯೂ ಮತದಾನ ಮಾಡುವುದರಿಂದ ದೂರ ಉಳಿಯುವ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದಾಗಿ ಮತದಾನದ ಪ್ರಮಾಣದ ಮೇಲೆ ರಜೆಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಎನ್ನುವ ಆತಂಕ ಇದೀಗ ಚುನಾವಣಾ ಆಯೋಜಕರನ್ನು ಕಾಡತೊಡಗಿದೆ.

ಇದು ದೇಶದ ಭವಿಷ್ಯ ರೂಪಿಸುವ ಚುನಾವಣೆ ಯಾದ್ದರಿಂದ ಈಗಿನ ಜನರಲ್ಲಿ ಚುನಾವಣೆಯ ಮಹತ್ವದ ಅರಿವು ಬಹಳಷ್ಟಿದೆ. ಹಾಗಾಗಿ ಮತದಾನದಿಂದ ಯಾರೂ ತಪ್ಪಿಸಿಕೊಳ್ಳಲಾರರು ಎನ್ನುತ್ತಾರೆ ಯುವ ಮತದಾರರು. 
ಬುಕ್ಕಿಂಗ್‌ ಹಿಂಪಡೆಯಲು ಅವಕಾಶ ಪ್ರವಾಸ ಹಮ್ಮಿಕೊಳ್ಳುವ ಟ್ರಾವೆಲ್‌ ಕೇಂದ್ರಗಳಲ್ಲಿ ತಿಂಗಳ ಮೊದಲೇ ಬುಕ್ಕಿಂಗ್‌ ಸಾಮಾನ್ಯ. ಆದರೆ ಮಂಗಳೂರಿನ ಪಂಚರತ್ನ ಹಾಲಿಡೇಸ್‌ ಚುನಾ ವಣೆ ಹಿನ್ನೆಲೆಯಲ್ಲಿ ಬುಕ್ಕಿಂಗ್‌ ಮಾಡಿದ್ದನ್ನು ಹಿಂಪಡೆಯುವ ಅವಕಾಶ ಕಲ್ಪಿಸಿದೆ. “ದೇಶದ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು.

ಇನ್ನು ಮುಂದಕ್ಕೆ ಚುನಾವಣೆ ದಿನಾಂಕದಂದು ಬುಕ್ಕಿಂಗ್‌ ಕೋರಿದವರಲ್ಲಿ ಪ್ರವಾಸಕ್ಕೆ ಬುಕ್ಕಿಂಗ್‌ ಮಾಡಬೇಡಿ ಎಂದು ನಾವೇ ಹೇಳುತ್ತೇವೆ. ಈಗಾಗಲೇ ಆ ದಿನಾಂಕದಂದು ಬುಕ್ಕಿಂಗ್‌ ಮಾಡಿದವರು ಅದನ್ನು ರದ್ದು ಮಾಡಿ ಚುನಾವಣೆಯಲ್ಲಿ ಭಾಗವಹಿಸಬಹುದು’ ಎಂದು ಪಂಚರತ್ನ ಹಾಲಿಡೇಸ್‌ನ ಮಾಲಕ ಮೂಲ್ಕಿ ನರಸಿಂಹ ಭಟ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನವೇ ಪ್ರವಾಸಿತಾಣಗಳಿಗೆ ರಜಾ ಅವಧಿಯಲ್ಲಿ ಕೆಲವರು ಬುಕ್‌ ಮಾಡಿದ್ದಾರೆ. ಆದರೆ ಎಷ್ಟು ಮಂದಿ ಎಂಬ ನಿಖರ ಸಂಖ್ಯೆ ನೀಡಲಾಗದು. ಚುನಾವಣೆ ಹಿನ್ನೆಲೆಯಲ್ಲಿ ಬುಕ್‌ ಮಾಡಿದ್ದನ್ನು ರದ್ದು ಮಾಡುವ ಬಗ್ಗೆ ತಿಳಿಯದು ಎನ್ನುತ್ತಾರೆ ನಿರ್ಮಲಾ ಟ್ರಾವೆಲ್ಸ್‌ನವರು.

ಶೇ. 92 ಮತದಾನ ಗುರಿ
ಕಳೆದ ಬಾರಿ ಶೇ. 77ರಷ್ಟು ಮತದಾನವಾಗಿದ್ದು, ನಿರೀಕ್ಷೆಯಷ್ಟು ಆಗಿಲ್ಲ. ಈ ಬಾರಿ ಜಿಲ್ಲೆಯಲ್ಲಿ ಶೇ. 92 ಮತ ದಾನ ಸಾಧನೆಯಾಗ ಬೇಕೆಂಬ ಗುರಿ ಇದೆ. ದೇಶದ ಭವಿಷ್ಯದ ದೃಷ್ಟಿಯಿಂದ ಯಾರೂ ಕೂಡ ಮತದಾನದಿಂದ ಹಿಂದುಳಿಯ ಬಾರದು. ರಜೆ ಎಂದು ಮತದಾನ ಮಾಡದೇ ಇರಬೇಡಿ. ಹಾಗಾಗದು ಎಂಬ ವಿಶ್ವಾಸವೂ ಇದೆ.
-ಡಾ| ಸೆಲ್ವಮಣಿ ಆರ್‌., ಜಿ.ಪಂ. ಸಿಇಒ

ಚುನಾವಣೆ ಹಬ್ಬದಲ್ಲಿ ಪಾಲ್ಗೊಳ್ಳಿ
ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಚುನಾವಣೆ ಎಂಬ ಹಬ್ಬ ಆರಂಭ ಆಗಲಿದೆ. ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲರೂ ಮತದಾನ ಮಾಡುವುದು ಅತೀ ಅವಶ್ಯ. ಸಾಲು ಸಾಲು ರಜೆಗಳಿವೆ ಎಂದು ಮಜಾ ಅನುಭವಿಸಲು ಹೋಗದೆ ದೇಶದ ಹಿತದೃಷ್ಟಿಯಿಂದ ಎಲ್ಲರೂ ಮತದಾನ ಮಾಡಿ ಚುನಾವಣಾ ಹಬ್ಬದಲ್ಲಿ ಪಾಲ್ಗೊಳ್ಳಬೇಕು.
-ಸಂದೇಶ್‌ ಮೆಲ್ಕಾರ್‌, ರಥಬೀದಿ ಸ.ಪ್ರ.ದ. ಕಾಲೇಜು ವಿದ್ಯಾರ್ಥಿ

ಹೆಮ್ಮೆಯಿಂದ ಮತ ಚಲಾಯಿಸೋಣ
ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿದರೆ, ನಮ್ಮ ಜಿಲ್ಲೆ, ರಾಷ್ಟ್ರ ಅಭಿವೃದ್ಧಿಯಾಗುತ್ತದೆ. ಮತದಾನ ನಮ್ಮೆಲ್ಲರ ಹಕ್ಕು. ಪ್ರಜಾಪ್ರಭುತ್ವದಲ್ಲಿ ನಮಗೆ ಸಿಕ್ಕಿರುವ ಮತದಾನದ ಅವಕಾಶವನ್ನು ಯುವಕರು ಸಹಿತ ಎಲ್ಲರೂ ಹೆಮ್ಮೆಯಿಂದ ಚಲಾಯಿಸಬೇಕು. ಆ ಮೂಲಕ ರಾಷ್ಟ್ರ ನಿರ್ಮಾಣದ ಪಾಲುದಾರರಾಗಬೇಕು.
-ವಿನಾಯಕ್‌ ಶೇಟ್‌, ಸಂತ ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿ

ಟಾಪ್ ನ್ಯೂಸ್

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆದು ಭಾಷಣ ಮಾಡಿದ ಗ್ರಹ ಸಚಿವ ಶಾ!

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

Untitled-1

ಬ್ಯಾಡಗಿ ಮೆಣಸಿನಕಾಯಿ ಬೆಳೆದ ಅಡಕೆ ಕೃಷಿಕ

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

Untitled-1

ಕಡಬ: ನೂಜಿಬಾಳ್ತಿಲ ಶಾಲೆಯಲ್ಲಿ ಗ್ಯಾಸ್ ಸೋರಿಕೆ; ತಪ್ಪಿದ ದುರಂತ

c-t-ravi

ಸಿಂದಗಿ ಜನರು ಕಾಂಗ್ರೆಸ್ ಕೋಣ, ಜೆಡಿಎಸ್ ಹಸು ಬಿಟ್ಟು ಬಿಜೆಪಿ ಎತ್ತು ಕಟ್ಟಿ : ಸಿ.ಟಿ.ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಇಂದಿನಿಂದ ಶಾಲೆಯಂಗಳದಲ್ಲಿ ಚಿಣ್ಣರ ಕಲರವ

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಪ್ರಾಯೋಗಿಕ “ಟ್ರಾಫಿಕ್‌ ಐಲ್ಯಾಂಡ್‌’ನಿಂದ ಸಂಚಾರ ಸಂಕಷ್ಟ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

MUST WATCH

udayavani youtube

ಶಾಲಾ ಪ್ರಾರಂಭೋತ್ಸವ : ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ

udayavani youtube

ಕಾಪು ಮತ್ತು ಕರಂದಾಡಿ ಶಾಲೆಯಲ್ಲಿ ಅದ್ದೂರಿಯ ಶಾಲಾ ಪ್ರಾರಂಭೋತ್ಸವ

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

ಹೊಸ ಸೇರ್ಪಡೆ

1-22f

ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆದು ಭಾಷಣ ಮಾಡಿದ ಗ್ರಹ ಸಚಿವ ಶಾ!

19ksrtc

ಕಾಗದ ರಹಿತ ಆಡಳಿತದತ್ತ ವಾಯವ್ಯ ಸಾರಿಗೆ ಸಂಸ್ಥೆ

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಬೆಳಗಾವಿಯಲ್ಲಿ ರಾಂಗ್ ರನ್ ವೇ ಮೇಲೆ ವಿಮಾನ ಲ್ಯಾಂಡ್: ತಪ್ಪಿದ ದುರಂತ

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

ಶಿವಮೊಗ್ಗ: ಮಕ್ಕಳು ಬಂದರೂ ಶಾಲೆಗೆ ಬಾರದ ಶಿಕ್ಷಕರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.