Udayavni Special

ಡೋರ್‌-ಟು-ಡೋರ್‌ ತ್ಯಾಜ್ಯ ಸಂಗ್ರಹಕ್ಕೂ ಹಿನ್ನಡೆ

Team Udayavani, May 26, 2018, 5:30 AM IST

garbage-vehicle-25-5.jpg

ನಗರ : ತ್ಯಾಜ್ಯ ಸಂಗ್ರಹದ ಹೊಸ ಪದ್ಧತಿಯೂ ಹಳ್ಳ ಹಿಡಿಯುವ ಲಕ್ಷಣ ಗೋಚರವಾಗುತ್ತಿದೆ. 2018ರ ಮೇ 24ರಂದು ಜಾರಿಗೆ ಬಂದ ಈ ಹೊಸ ಪದ್ಧತಿಗೆ ಇದೀಗ ಪೌರಕಾರ್ಮಿಕರ ಕೊರತೆ ಕಾಡುತ್ತಿದೆ. ಘನತ್ಯಾಜ್ಯ ವಿಲೇವಾರಿ ಪುತ್ತೂರು ನಗರಸಭೆಗೆ ದೊಡ್ಡ ತಲೆನೋವು. ಹಾಗೆಂದು ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಹಿಂದೆ ಸ್ವಸಹಾಯ ಸಂಘಗಳ ಮೂಲಕ ಡೋರ್‌ – ಟು – ಡೋರ್‌ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿತ್ತು. ಇದು ಪುತ್ತೂರು ಪೇಟೆಯ ಎರಡು ರಸ್ತೆಗಷ್ಟೇ ಸೀಮಿತವಾಗಿತ್ತು. ಇದನ್ನು ತೆಗೆದುಹಾಕಿ, ಇದೀಗ ಹೊಸ ಪದ್ಧತಿಯನ್ನು ಪರಿಚಯಿಸಲಾಗಿದೆ. 7 ಲಾರಿಗಳನ್ನು ಟೆಂಡರ್‌ ಗೆ ತೆಗೆದುಕೊಂಡು, ನಗರಸಭೆಯ ಪೌರಕಾರ್ಮಿಕರನ್ನು ಬಳಸಿಕೊಂಡು ತ್ಯಾಜ್ಯ ಸಂಗ್ರಹ ಮಾಡುವುದು ಇದರ ಉದ್ದೇಶ.

700 ಮನೆಗಳಿಂದ ಸಂಗ್ರಹ
ಪುತ್ತೂರು ನಗರಸಭೆಯಲ್ಲಿ ಸದ್ಯ 14 ಪೌರಕಾರ್ಮಿಕರಿದ್ದಾರೆ. ಎರಡು 407 ವಾಹನಕ್ಕೆ ತಲಾ ಇಬ್ಬರಂತೆ ಹಾಗೂ ಐದು ಪಿಕಪ್‌ ವಾಹನಗಳಿಗೆ 10 ಮಂದಿಯನ್ನು ಹಂಚಿ ಹಾಕಲಾಗಿದೆ. ಚಾಲಕ ಹೊರತು ಪಡಿಸಿ ಒಂದು ವಾಹನದಲ್ಲಿ 2 ಕಾರ್ಮಿಕರು ತೆರಳಬೇಕು. ಸರಕಾರದ ಆದೇಶ ಪ್ರಕಾರ ದಿನಕ್ಕೆ 1,800 ಮನೆ ಅಥವಾ ಅಂಗಡಿ ಬಾಗಿಲುಗಳಿಂದ ತ್ಯಾಜ್ಯ ಸಂಗ್ರಹ ಮಾಡಬೇಕು. ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಮಾತು. ದಿನಕ್ಕೆ ಹೆಚ್ಚೆಂದರೆ 700ರಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹವಷ್ಟೇ ಸಾಧ್ಯ ಎನ್ನುತ್ತಾರೆ ಪೌರಕಾರ್ಮಿಕರು.

ಪೌರಕಾರ್ಮಿಕರು ಹೇಳುವಂತೆ ಪುತ್ತೂರು ನಗರಸಭೆಯ 27 ವಾರ್ಡ್‌ಗಳ 14,948 ಮನೆ, 5,136 ವಾಣಿಜ್ಯ ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸಬೇಕಾದರೆ ಕನಿಷ್ಠ 12 ವಾಹನ ಬೇಕು. ಇದಕ್ಕೆ ತಲಾ ಮೂವರಂತೆ ಒಟ್ಟು 36 ಪೌರಕಾರ್ಮಿಕರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಪೌರಕಾರ್ಮಿಕರ ಹೊಸ ನೇಮಕಾತಿ ಮಾಡದಂತೆ ಸರಕಾರ ಆದೇಶ ಹೊರಡಿಸಿದೆ. ಇರುವ ಪೌರಕಾರ್ಮಿಕರನ್ನೇ ಬಳಸಿಕೊಳ್ಳುವಂತೆ ಸೂಚಿಸಿದೆ. ಇದು ಪುತ್ತೂರು ನಗರಸಭೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ತೆರಿಗೆಯಲ್ಲೇ ಹಣ ಸಂಗ್ರಹ
ತ್ಯಾಜ್ಯ ಸಂಗ್ರಹದ ಹಣವನ್ನು ಈ ಮೊದಲು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿತ್ತು. ಕೆಲವು ಮನೆ, ಅಂಗಡಿಗಳ ಮಂದಿ ಶುಲ್ಕ ನೀಡಲು ಹಿಂದೇಟು ಹಾಕುತ್ತಿದ್ದರು. ಇದು ವ್ಯವಸ್ಥೆಗೆ ಪೆಟ್ಟು ನೀಡಿತು. ಆದ್ದರಿಂದ ಇದೀಗ ತೆರಿಗೆಯ ಜತೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ.  500 ಚದರ ಅಡಿಯ ಮನೆಗೆ ವಾರ್ಷಿಕ 180 ರೂ., 1,000 ಚ.ಅ. ಮನೆಗೆ 360 ರೂ., 1,000-1,500 ಚ.ಅ. ಮನೆಗೆ 540 ರೂ., 2,000 ವರೆಗಿನ ಚ.ಅ. ಮನೆಗೆ 720 ರೂ., 2,000 ಚ.ಅ.ಗಿಂತ ಹೆಚ್ಚಿನ ಮನೆಗಳಿಗೆ 900 ರೂ. ಸಂಗ್ರಹ ಮಾಡಲಾಗುತ್ತಿದೆ. ವಾಣಿಜ್ಯ ಅಂಗಡಿಗಳಿಗೆ ಬೇರೆಯೇ ಮಾನದಂಡದಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ತಿಂಗಳಿಗೆ ಟ್ರೇಡ್‌ ಲೈಸನ್ಸ್‌ನ ಶೇ. 10ರಷ್ಟು ಮೊತ್ತು. ಅಂದರೆ 1 ಸಾವಿರ ರೂ. ಟ್ರೇಡ್‌ ಲೈಸನ್ಸ್‌ಗೆ ಪಾವತಿ ಮಾಡುತ್ತಿದ್ದರೆ, ತಿಂಗಳಿಗೆ 100 ರೂ. ವಾರ್ಷಿಕ 1,200 ರೂ. ಪಾವತಿ ಮಾಡಬೇಕು.

ಕೈಮೀರಿದೆ
ಒಂದು ತಿಂಗಳಿನಿಂದ ತ್ಯಾಜ್ಯ ಸಂಗ್ರಹದ ಸಮಸ್ಯೆ ಕೈಮೀರಿ ಹೋಗಿದೆ. ನಗರಸಭೆ ಮೂಲಗಳ ಪ್ರಕಾರ 25 ವಾರ್ಡ್‌ಗಳಿಂದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಆದರೆ ಪೇಟೆಯ ಪರಿಸ್ಥಿತಿ ನೋಡಿದರೆ, 10 ದಿನಗಳಿಂದ ತ್ಯಾಜ್ಯ ಸಂಗ್ರಹ ಆದಂತೆ ಕಾಣುತ್ತಿಲ್ಲ. ಶುಕ್ರವಾರ ಪುತ್ತೂರು ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಪಿಕಪ್‌ ವಾಹನದ ಮೇಲೆ ವಿಪರೀತ ತ್ಯಾಜ್ಯ ಹೇರಲಾಗಿತ್ತು. ಇಷ್ಟಿದ್ದರೂ, ಕೆಲ ಅಂಗಡಿಗಳ ಮಂದಿ ಹೊರಗೆ ಬಂದು, ತ್ಯಾಜ್ಯ ಕೊಂಡೊಯ್ಯುವಂತೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು.

ಕಸ ನೀಡದವರಿಗೆ ನೋಟಿಸ್‌
ತ್ಯಾಜ್ಯ ಸಂಗ್ರಹ ದೊಡ್ಡ ಸಮಸ್ಯೆ ಆಗುತ್ತಿದ್ದರಿಂದ ಶುಕ್ರವಾರ ಬೆಳಗ್ಗೆ ತ್ಯಾಜ್ಯ ಸಂಗ್ರಹ ಮಾಡುವವರ ಜತೆಗೆ ಹೋಗಿದ್ದೆ. ಕೂರ್ನಡ್ಕದ ಒಂದು ಮನೆಯವರು ತ್ಯಾಜ್ಯ ನೀಡುತ್ತಿರಲಿಲ್ಲ. ವಿಚಾರಿಸಿದಾಗ ಹಸಿ ಕಸವನ್ನು ಗಿಡದ ಬುಡಕ್ಕೆ ಹಾಕುತ್ತಿದ್ದರಂತೆ. ಪ್ಲಾಸ್ಟಿಕ್‌ ಮೊದಲಾದ ಒಣ ಕಸವನ್ನು ಉರಿಸುತ್ತಾರಂತೆ. ಇದರ ದುಷ್ಪರಿಣಾಮದ ಬಗ್ಗೆ ತಿಳಿಸಿದರೂ ತ್ಯಾಜ್ಯ ನೀಡಲು ಒಪ್ಪಿಕೊಂಡಿಲ್ಲ. ಇವರಿಗೆ ನಗರಸಭೆಯಿಂದ ನೋಟಿಸ್‌ ನೀಡಲಾಗುವುದು. ಎಲ್ಲ ಮನೆ, ಅಂಗಡಿಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹವಾದರೆ, ತ್ಯಾಜ್ಯ ವಿಲೇವಾರಿ ನಗರಸಭೆಗೆ ಹೊರೆ ಆಗದು. ಇದರ ಜತೆಗೆ ಪೌರಕಾರ್ಮಿಕರು ಅಗತ್ಯದಷ್ಟು ಬೇಕು.
– ಶ್ವೇತಾ ಕಿರಣ್‌, ಆರೋಗ್ಯ ನಿರೀಕ್ಷಕಿ, ಪುತ್ತೂರು ನಗರಸಭೆ

ಹಿಂದಿನ ತಂಡ ಬಳಕೆ
ಹಿಂದಿನ ಸ್ವಸಹಾಯ ತಂಡದಲ್ಲಿ ಕೆಲಸ ಮಾಡುತ್ತಿದ್ದ ಸೀತಾ, ಸರಸ್ವತಿ, ಅಣ್ಣಪ್ಪ ಅವರನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಕೆ ಮಾಡಲು ನಗರಸಭೆ ಮುಂದಾಗಿದೆ. ಹೆಚ್ಚು ಕಡಿಮೆ ತ್ಯಾಜ್ಯ ಸಂಗ್ರಹದ ಮಾಹಿತಿ ಇರುವುದರಿಂದ, ಹೊಸ ತಂಡಕ್ಕೂ ಸುಲಭವಾಗಲಿದೆ ಎನ್ನುವುದು ಚಿಂತನೆ. ಈ ಮೂವರಿಗೆ ಒಂದೊಂದು ರಸ್ತೆಗಳನ್ನು ನೀಡಲಾಗಿದೆ.

— ಗಣೇಶ್‌ ಎನ್‌. ಕಲ್ಲರ್ಪೆ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿಗೆ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿಗೆ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

‘ಉಪಕದನ’ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್

‘ಉಪಕದನ’ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿಲು ಸಂಪುಟ ಸಭೆಯಲ್ಲಿ ತೀರ್ಮಾನ

ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿಲು ಸಂಪುಟ ಸಭೆಯಲ್ಲಿ ತೀರ್ಮಾನ

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು

ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ

ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆ; 4 ವೆಂಟಿಲೇಟರ್‌ ಸೌಕರ್ಯ; ಪೂರಕ ಸೌಲಭ್ಯಕ್ಕೆ ಬೇಡಿಕೆ

ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆ; 4 ವೆಂಟಿಲೇಟರ್‌ ಸೌಕರ್ಯ; ಪೂರಕ ಸೌಲಭ್ಯಕ್ಕೆ ಬೇಡಿಕೆ

ಕೋವಿಡ್‌ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ: ಹರೀಶ್‌ ಪೂಂಜ

ಕೋವಿಡ್‌ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ: ಹರೀಶ್‌ ಪೂಂಜ

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಕಟ

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಕಟ

ಪ್ರತೀ ಠಾಣೆ ವ್ಯಾಪ್ತಿಯಲ್ಲಿ ನೂರು ಪ್ರಕರಣ ದಾಖಲು: ಡಾ| ರಾಜೇಂದ್ರ

ಪ್ರತೀ ಠಾಣೆ ವ್ಯಾಪ್ತಿಯಲ್ಲಿ ನೂರು ಪ್ರಕರಣ ದಾಖಲು: ಡಾ| ರಾಜೇಂದ್ರ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

MUST WATCH

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆಹೊಸ ಸೇರ್ಪಡೆ

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿಗೆ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿಗೆ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ

ಟಿಇಟಿ ಪರೀಕ್ಷೆ : ಸೋಂಕಿತರಿಗೂ ಪ್ರತ್ಯೇಕ ಅವಕಾಶ

ಟಿಇಟಿ ಪರೀಕ್ಷೆ : ಸೋಂಕಿತರಿಗೂ ಪ್ರತ್ಯೇಕ ಅವಕಾಶ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ

kadugolla

ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಚಿಂತನೆ

‘ಉಪಕದನ’ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್

‘ಉಪಕದನ’ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.