ಓವರ್‌ ಡ್ರಾಫ್ಟ್‌ ಗುರಿ ಸಾಧನೆಯಲ್ಲಿ ಹಿನ್ನಡೆ: ಜಿ.ಪಂ.ಸಿಇಒ ಅಸಮಾಧಾನ

ಜಿಲ್ಲಾ ಬ್ಯಾಂಕಿಂಗ್‌ ಅಭಿವೃದ್ಧಿ ಜಿಲ್ಲಾ ಸಮಿತಿ ಪರಿಶೀಲನೆ ಸಭೆ

Team Udayavani, Jun 25, 2024, 12:53 AM IST

ಓವರ್‌ ಡ್ರಾಫ್ಟ್‌ ಗುರಿ ಸಾಧನೆಯಲ್ಲಿ ಹಿನ್ನಡೆ: ಜಿ.ಪಂ.ಸಿಇಒ ಅಸಮಾಧಾನ

ಮಂಗಳೂರು: ಜಿಲ್ಲೆಯ ಜನಧನ್‌ ಖಾತೆದಾರರಿಗೆ ಓವರ್‌ ಡ್ರಾಫ್ಟ್‌ (ಒ.ಡಿ.) ಖಾತೆ ಆರಂಭಿಸಲು ನೀಡಿರುವ ಗುರಿ ಸಾಧನೆಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಹಿನ್ನಡೆ ಅನುಭವಿಸಿರುವ ಬಗ್ಗೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಆನಂದ್‌ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣ ದಲ್ಲಿ ಸೋಮವಾರ ಜರಗಿದ ಜಿಲ್ಲಾ ಬ್ಯಾಂಕಿಂಗ್‌ ಅಭಿವೃದ್ಧಿ ಜಿಲ್ಲಾ ಸಮಿತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2023-24ನೇ ಸಾಲಿಗೆ ಒ.ಡಿ. ಖಾತೆ ತೆರೆಯುವುದಕ್ಕೆ ನೀಡಲಾಗಿದ್ದ ಗುರಿ ಸಾಧಿಸುವಲ್ಲಿ ವಿವಿಧ ಬ್ಯಾಂಕ್‌ಗಳು ವಿಫಲವಾಗಿವೆ. ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಜನಧನ್‌ ಖಾತೆ ಇದ್ದರೂ ಕೇವಲ 4,368 ಒ.ಡಿ. ತೆರೆದಿರುವುದು ಕಳಪೆ ಸಾಧನೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದರು.

ಜತೆಗೆ, ಅಟಲ್‌ ಪಿಂಚಣಿ ಯೋಜನೆ ಯಡಿ ಕೇವಲ 39,097 ಖಾತೆಗಳನ್ನು ಜಿಲ್ಲೆಯ ಬ್ಯಾಂಕ್‌ಗಳು ತೆರೆದಿವೆ. ಬ್ಯಾಂಕ್‌ಗಳಿಗೆ ನೀಡಿದ ಗುರಿಯ ಶೇ.76ರಷ್ಟು ಮಾತ್ರ ಪ್ರಗತಿಯಾಗಿದೆ. ಜನರಿಗೆ ಸಿಗಬೇಕಾದ ಸರಕಾರಿ ಸೌಲಭ್ಯ ಕೊಡಿಸುವಲ್ಲಿ ನಿರ್ಲಕ್ಷ್ಯ ಮಾಡುವುದು ಸಲ್ಲದು ಎಂದರು.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ರಾಷ್ಟ್ರೀಯ ಪಟ್ಟಣ ಜೀವನೋಪಾಯ ಯೋಜನೆ ಇತ್ಯಾದಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ಮೀನುಗಾರ ಮಹಿಳೆಯರಿಗೆ ನೀಡುವ ಗುಂಪು ಸಾಲದ ಬಡ್ಡಿಯನ್ನು ಮೀನುಗಾರಿಕೆ ಇಲಾಖೆ ಫಲಾನು ಭವಿಗಳಿಗೆ ಮರುಪಾವತಿಸುತ್ತದೆ. ಆದರೆ 2018ರಿಂದೀಚೆಗೆ ಯೋಜನೆ ಯಲ್ಲಿ ಬ್ಯಾಂಕ್‌ಗಳು ಕ್ಲೇಮುಗಳನ್ನು ಕಳುಹಿಸದೆ ಇರುವುದರಿಂದ ಬಾಕಿ ಉಳಿದಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ವ್ಯವಹಾರದಲ್ಲಿ ಪ್ರಗತಿ
ಜಿಲ್ಲೆಯಲ್ಲಿ ಕಳೆದ ಮಾರ್ಚ್‌ ಅಂತ್ಯಕ್ಕೆ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,21,618.98 ಕೋ. ರೂ. ಆಗಿದ್ದು ವರ್ಷದಿಂದ ವರ್ಷಕ್ಕೆ ಶೇ.15.80ರಷ್ಟು ಬೆಳವಣಿಗೆ ಸಾಧಿಸಿದೆ. ಬ್ಯಾಂಕ್‌ಗಳ ಒಟ್ಟು ಠೇವಣಿ 70,986.88 ಕೋ. ರೂ. ಆಗಿದ್ದು, ಶೇ.12.13ರಷ್ಟು ಬೆಳವಣಿಗೆ ಕಂಡಿದೆ. ಒಟ್ಟು ಸಾಲವು 30,632.10 ಕೋ. ರೂ. ಆಗಿದ್ದು, ಶೇ.21.38ರಷ್ಟು ಬೆಳವಣಿಗೆ ಸಾಧಿಸಿವೆ ಎಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಶೆಟ್ಟಿ ತಿಳಿಸಿದರು.

ಆದ್ಯತಾ ಮತ್ತು ಆದ್ಯತೇತರ ವಲಯಗಳಲ್ಲಿ 47,210.36 ಕೋ. ರೂ. ಸಾಲ ವಿತರಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ 14,710.45 ಕೋ. ರೂ. ಸಾಲ ವಿತರಿಸಿದ್ದು, ವಾರ್ಷಿಕ ಗುರಿಯಾದ 8,690.00 ಕೋ. ರೂ. ಮೀರಿ ಶೇ. 169.28ರಷ್ಟು ಸಾಧಿಸಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಯಡಿ 6,263.92 ಕೋ.ರೂ., ಶಿಕ್ಷಣಕ್ಕೆ 119.40 ಕೋ. ರೂ., ಗೃಹಸಾಲ ಕ್ಷೇತ್ರದಲ್ಲಿ 432.04 ಕೋ. ರೂ. ಸಾಲ ನೀಡಿದ್ದು, ವಾರ್ಷಿಕ ಗುರಿ ಯಾದ 1,462.50 ಕೋ. ರೂ.ಯ ಶೇ.29.54ರಷ್ಟು ನಿರ್ವಹಣೆ ತೋರಿದೆ ಎಂದು ಹೇಳಿದರು.

ಕೃಷಿ ಸಾಲದ ಅರ್ಜಿ ತಿರಸ್ಕರಿಸಬೇಡಿ: ಆರ್‌ಬಿಐ ಅಧಿಕಾರಿ
ಕೃಷಿ ಸಾಲ ಪಡೆಯುವ ರೈತರ ಅರ್ಜಿಯನ್ನು ತಿರಸ್ಕರಿಸಬೇಡಿ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮ್ಯಾನೇಜರ್‌ ವೆಂಕಟರಾಮಯ್ಯ ಟಿ.ಎನ್‌. ಅವರು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು. ರೈತರ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಇದು ಅತ್ಯಗತ್ಯ. ರೈತರು ಖಾಸಗಿ ಲೇವಾದೇವಿ ದಾರರಿಂದ ಅಧಿಕ ಬಡ್ಡಿದರಕ್ಕೆ ಸಾಲ ಪಡೆದು ಮರುಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಬಹಳಷ್ಟು ಉದಾಹರಣೆಗಳಿವೆ. ಡಿಸೆಂಬರ್‌ ಅಂತ್ಯದವರೆಗಿನ ವರದಿ ಪ್ರಕಾರ, ರಾಜ್ಯದಲ್ಲಿ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ 354 ಮಂದಿಯ ಕುಟುಂಬಗಳಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದವರು ಬ್ಯಾಂಕ್‌ಗಳಿಂದ ಸಾಲ ಪಡೆದಿಲ್ಲ ಎಂಬ ಕಾರಣಕ್ಕೆ ಪರಿಹಾರವೇ ದೊರೆತಿಲ್ಲ. ಬ್ಯಾಂಕ್‌ಗಳು ರೈತರಿಗೆ ಆದ್ಯತೆ ನೆಲೆಯಲ್ಲಿ ಸಾಲ ನೀಡಬೇಕು ಎಂದರು.

 

ಟಾಪ್ ನ್ಯೂಸ್

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

ಹುಟ್ಟುಹಬ್ಬಕ್ಕೆ ಗ್ಯಾಂಗ್‌ಸ್ಟರ್‌ ಆಗಿ ಬಂದ ಸೂರ್ಯ; ʼSuriya 44ʼ ಸ್ಪೆಷೆಲ್‌ ಟೀಸರ್‌ ಔಟ್

Belagavi: ಹಲವು ವರ್ಷಗಳಿಂದ ಇತ್ಯರ್ಥವಾಗದ ಜಮೀನು ವಿವಾದ ಸಹೋದರರ ಸಾವಿನಲ್ಲಿ ಅಂತ್ಯ

Belagavi: ಹಲವು ವರ್ಷಗಳಿಂದ ಇತ್ಯರ್ಥವಾಗದ ಜಮೀನು ವಿವಾದ ಸಹೋದರರ ಸಾವಿನಲ್ಲಿ ಅಂತ್ಯ

Supreme court: ಹಲ್ಲೆ ಪ್ರಕರಣ- ಮಾಜಿ ಶಾಸಕನ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

Supreme court: ಹಲ್ಲೆ ಪ್ರಕರಣ- ಮಾಜಿ ಶಾಸಕನ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

chidambaram (2)

Budget; ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪ್ರಣಾಳಿಕೆ ಓದಿರುವುದು ಸಂತಸ ತಂದಿದೆ: ಚಿದಂಬರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mng

Mangaluru: ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ ಯತ್ನ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆಗೆ ವಿರೋಧಿಸಿ ಪ್ರತಿಭಟನೆ

Mangaluru: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ವಿರೋಧಿಸಿ ಪ್ರತಿಭಟನೆ

Yuva Nidhi Scheme: “ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

Yuva Nidhi Scheme: “ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

ಚಿಕ್ಕಮಗಳೂರು: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

Chikkamagaluru: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

Budget: ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಸಮಿಶ್ರ ಸರಕಾರದ ಛಾಯೇ ಪ್ರತಿಫಲನ!

Budget: ಈ ಬಾರಿಯ ಕೇಂದ್ರ ಬಜೆಟ್‌ ನಲ್ಲಿ ಸಮಿಶ್ರ ಸರಕಾರದ ಛಾಯೇ ಪ್ರತಿಫಲನ!

4-

Mahalingpur: ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.