ಆಸರೆ ವಂಚಿತ ಬಡ ಕುಟುಂಬಕ್ಕಿಲ್ಲ ಮತದಾನದ ಹಕ್ಕು

ಶಿರ್ಲಾಲು: ಟಾರ್ಪಾಲು ಕೆಳಗೆ ಶೋಚನೀಯ ಬದುಕು

Team Udayavani, Mar 25, 2019, 11:36 AM IST

25-March-4

ವಾಸು ಮೊಗೇರ ಕುಟುಂಬ ವಾಸಿಸುತ್ತಿರುವ ಟಾರ್ಪಾಲು ಗುಡಿಸಲು.

ಬೆಳ್ತಂಗಡಿ : ಮೂವತ್ತು ವರ್ಷಗಳಿಂದ ಪುಟ್ಟ ಮನೆಯಲ್ಲಿ ವಾಸವಾಗಿದ್ದ ಬಡ ಕುಟುಂಬವೊಂದು ಮಳೆಯಿಂದ ಮನೆ ಕಳೆದುಕೊಂಡು ಒಂದೂವರೆ ವರ್ಷದಿಂದ ಟಾರ್ಪಾಲು ಕೆಳಗೆ ನರಕ ಯಾತನೆ ಅನುಭವಿಸುತ್ತಿದೆ. ಜತೆಗೆ ಈ ಕುಟುಂಬಕ್ಕೆ ಮತದಾನದ ಹಕ್ಕೂ ಇಲ್ಲ !
ಬೆಳ್ತಂಗಡಿ ತಾ| ಶಿರ್ಲಾಲು ಗ್ರಾಮದ ವಾಸು ಮೊಗೇರ-ಉಷಾ ದಂಪತಿ ಹಾಗೂ ನಾಲ್ಕು ಮಕ್ಕಳು ಮನೆ ಕಳೆದುಕೊಂಡು ಶೋಚನೀಯ ಬದುಕು ಸಾಗಿಸುತ್ತಿದ್ದಾರೆ. ಮಳೆಗೆ ಮಣ್ಣಿನ ಗೋಡೆಯ ಮನೆ ಧರಾಶಾಯಿಯಾಗಿದ್ದು ಪಕ್ಕದಲ್ಲೇ ತಾತ್ಕಾಲಿಕ ಟಾರ್ಪಾಲಿನ ಹೊದಿಕೆಯ ಗುಡಿಸಲಿನಲ್ಲೇ ನರಕಸದೃಶ ಜೀವನ ನಡೆಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳಾಗಲೀ ಸ್ಥಳೀಯ ಪಂ. ಆಗಲೀ ಈ ಕುರಿತು ಗಮನ ಹರಿಸದೇ ಇರುವುದು ವಿಷಾದನೀಯ.
 ಮಕ್ಕಳಲ್ಲಿ ಅಪೌಷ್ಠಿಕತೆ
ಇಬ್ಬರು ಮಕ್ಕಳಾದ ಅನುಷಾ (6), ಆಶ್ವಿ‌ತಾ (7) ಸವ ಣಾಲು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮತ್ತಿಬ್ಬರು ಅಶ್ವತ್ಥ್ (2) ಸುಮನಾ (4) ಸ್ಥಳೀಯ ಅಂಗನವಾಡಿ ತೆರಳುತ್ತಿದ್ದು, ಒಂದು ಮಗು ಅಪೌಷ್ಠಿಕತೆಯಿಂದ ಬಳಲುತ್ತಿದೆ ಎಂಬುದನ್ನು ಸ್ಥಳೀಯ ಗ್ರಾ.ಪಂ. ಪಿಡಿಒ ತಿಳಿಸಿದ್ದಾರೆ. ಈಗಾಗಲೇ ಆಶ್ರಯವಂಚಿತ ಮಕ್ಕಳು ಶಿಕ್ಷಣದಿಂದಲೂ ವಿಮುಖ ರಾಗುವ ಆತಂಕದಲ್ಲಿದ್ದಾರೆ.
 ಅಸುರಕ್ಷಿತ ಗುಡಿಸಲು
100 ಚದರಡಿಯಲ್ಲಿ ಟಾರ್ಪಾಲು ಹೊದಿಕೆ ಹಾಕಿ 6 ಮಂದಿ ವಾಸವಾಗಿದ್ದು, ಬಾಗಿಲು ಇಲ್ಲದೆ ಬದುಕು ಅಸುರಕ್ಷಿತವಾಗಿದೆ.
ಅಪಾಯದ ಜೀವನ
ನೆಲದಲ್ಲೇ ನಿದ್ರಿಸುತ್ತಿದ್ದು, ಪಕ್ಕ ದಲ್ಲೇ ಅಡುಗೆ ಮಾಡುತ್ತಿದ್ದಾರೆ. ರಾತ್ರಿ ಸೀಮೆಎಣ್ಣೆ ದೀಪದಲ್ಲೇ ಬದುಕು ಸಾಗಿಸುತ್ತಿದ್ದು, ಅನಾಹುತ ಸಾಧ್ಯತೆ ಇದೆ. ಕಳೆದ 30 ವರ್ಷಗಳಿಂದ ಸ್ಥಳೀಯ ಫಲ್ಗುಣಿ ನದಿ ನೀರಿನ ಆಶ್ರಯ ಪಡೆಯುತ್ತಿದ್ದು, ಬೇಸಗೆಯಲ್ಲಿ ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾ.ಪಂ. ನೀರಿನ ಸೌಲಭ್ಯ ಕಲ್ಪಿಸಿಲ್ಲ.
ಆಧಾರ್‌ ಕಾರ್ಡ್‌, ಪಡಿತರ ಚೀಟಿ ಇಲ್ಲ
ವಾಸು ಬಳಿ 20 ವರ್ಷಗಳ ಹಿಂದಿನ ಪಡಿತರ ಚೀಟಿಯಿದೆ. ಆದರೆ ವಾಸು, ಪತ್ನಿ ಮಕ್ಕಳ ಹೆಸರಲ್ಲಿ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಇಲ್ಲ. ಕಳೆದ 10 ವರ್ಷಗಳಿಂದ ಯಾವುದೇ ಚುನಾವಣೆಯಲ್ಲಿ ಈ ದಂಪತಿ ಮತದಾನ ಮಾಡಿಲ್ಲ.
ಗುಡಿಸಲೇ ನಮಗೆ ಗತಿ
ನಾನು ಕೂಲಿ ಕೆಲಸ ಮಾಡುತ್ತಿದ್ದು, ಮನೆ ನಿರ್ಮಿಸಲು ದುಡ್ಡಿಲ್ಲ. ಇದರ ಜತೆಗೆ ಮಕ್ಕಳನ್ನೂ ಸಾಕಬೇಕು. ಹೀಗಾಗಿ ಗುಡಿಸಲೇ ನಮಗೆ ಗತಿಯಾಗಿದೆ. ನೀರಿನ ವ್ಯವಸ್ಥೆ, ವಿದ್ಯುತ್‌ ಸಂಪರ್ಕವೂ ಸಮರ್ಪಕವಾಗಿಲ್ಲ.
– ವಾಸು ಮೊಗೇರ, ಸಂತ್ರಸ್ತರು
ಶೀಘ್ರದಲ್ಲಿ ಶೆಡ್‌ ನಿರ್ಮಾಣ
ಮಾಹಿತಿ ತಿಳಿದು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪಂ. ವತಿಯಿಂದ ತಾತ್ಕಾಲಿಕ ವಾಸ್ತವ್ಯಕ್ಕಾಗಿ ಸಿಮೆಂಟ್‌ ಗೋಡೆಯ ಶೆಡ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ.ಜಾ./ಪ.ಪಂ. ಅನುದಾನದಲ್ಲಿ ಸಾಧ್ಯವಾದಷ್ಟು ಸಹಾಯ ಕಲ್ಪಿಸಲು ಚಿಂತಿಸಲಾಗಿದೆ. ಚುನಾವಣೆ ಬಳಿಕ ಕುಟುಂಬಕ್ಕೆ ಆಧಾರ್‌, ಮತದಾರರ ಚೀಟಿ, ಪಡಿತರ ಚೀಟಿ ಕೊಡಿಸುವ ಜವಾಬ್ದಾರಿ ವಹಿಸಿದ್ದೇನೆ.
 - ರಾಜು, ಪಿಡಿಒ, ಶಿರ್ಲಾಲು ಗ್ರಾ.ಪಂ.

ಟಾಪ್ ನ್ಯೂಸ್

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.