Udayavni Special

ಶಿರಾಡಿ ಘಾಟಿ ರೈಲು ಮಾರ್ಗ: ಎರಡು ದಿನ ಸಂಚಾರ ಸ್ಥಗಿತ

ಅಪಾಯಕಾರಿ ಬಂಡೆ ತೆರವು ಕಾರ್ಯಾಚರಣೆ

Team Udayavani, Jul 21, 2019, 6:00 AM IST

200719KPN92

ಮಂಗಳೂರು/ ಸುಬ್ರಹ್ಮಣ್ಯ: ಶಿರಾಡಿ ಘಾಟಿಯ ಸಿರಿಬಾಗಿಲು ಬಳಿ ರೈಲು ಹಳಿಗೆ ಉರುಳುವ ಸ್ಥಿತಿಯಲ್ಲಿದ್ದ ಬೃಹತ್‌ ಬಂಡೆಯನ್ನು ತೆರವುಗೊಳಿಸುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ಮಧ್ಯೆ ರೈಲು ಸಂಚಾರವನ್ನು ಜುಲೈ 20ರಂದು ಸ್ಥಗಿತಗೊಳಿಸಲಾಗಿದ್ದು, ಸಂಚಾರ ರವಿವಾರವೂ ಇರುವುದಿಲ್ಲ.

ಘಾಟಿ ಪ್ರದೇಶದಲ್ಲಿ ಗುರುವಾರದಿಂದ ಭಾರೀ ಮಳೆಯಾಗುತ್ತಿದ್ದು, ಸಿರಿಬಾಗಿಲು ಬಳಿ ಹಳಿಗಳ ಮೇಲೆ ಮೇಲಿನ ಪ್ರದೇಶದಿಂದ ಕಲ್ಲು ಮಣ್ಣು ಬೀಳುತ್ತಿವೆ. ಮಣಿಬಂಡ ಎಂಬಲ್ಲಿ ಭಾರೀ ಗಾತ್ರದ ಬಂಡೆಯೊಂದು ಹಳಿಗಳ ಮೇಲೆ ಉರುಳಿ ಬೀಳುವ ಅಪಾಯವಿದ್ದು, ಇದನ್ನು ತೆರವುಗೊಳಿಸುವ ಕಾರ್ಯಾಚರಣೆ ರೈಲ್ವೇ ಸಿಬಂದಿಯಿಂದ ನಡೆಯುತ್ತಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷೆ ದೃಷ್ಟಿಯಿಂದ ಶನಿವಾರ ಮತ್ತು ರವಿವಾರ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.

ಬಂಡೆ ತೆರವು ಕಾರ್ಯಕ್ಕೆ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲ್ವೇ ವಿಭಾಗದ 80 ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ನಾಲ್ಕು ಹಿಟಾಚಿ ಮತ್ತು ಮೂರು ಕಂಪ್ರಸರ್‌ ಬಳಸಿ ಬಂಡೆಗಲ್ಲನ್ನು ಪುಡಿ ಮಾಡಿ ತೆರವುಗೊಳಿಸಲಾಗುತ್ತಿದೆ. ಸತತ ಮಳೆ ಸುಗಮ ಕಾಮಗಾರಿಗೆ ಅಡ್ಡಿಯಾಗಿದೆ. ಕಂಪ್ರಸರ್‌ ಬಳಸಿ ಬಂಡೆ ಪುಡಿ ಮಾಡುವಾಗ ಕಂಪನದಿಂದಲೂ ಗುಡ್ಡ ಜರಿಯುತ್ತಿದೆ.

ಮೈಸೂರು ವಿಭಾಗದ ಸೀನಿಯರ್‌ ಎಂಜಿನಿಯರ್‌ ರವಿಚಂದ್ರ ಧೀರೆದಾರ್‌, ಅಸಿಸ್ಟೆಂಟ್‌ ಎಂಜಿನಿಯರ್‌ ಜಬೆದಾರ್‌, ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌ ಕೆ.ಪಿ. ನಾಯ್ಡು, ಹಳಿ ಮೇಲ್ವಿಚಾರಕ ನಾಗಪ್ಪ ಕೇಶವಾರ್‌, ಗುತ್ತಿಗೆದಾರರಾದ
ಸಂತೋಷ್‌ ಕುಮಾರ್‌, ರಾಥೋಡ್‌ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಂಚಾರದಲ್ಲಿ ಬದಲಾವಣೆ
ರೈಲು ನಂ.16511/16513 ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್‌ ಸಂಚಾರವನ್ನು ಶನಿವಾರ ಜೋಲಾರ್‌ಪೇಟೆ, ಸೇಲಂ, ಪಾಲ್ಗಾಟ್‌, ಶೋರ್ನೂರು ಜಂಕ್ಷನ್‌ ಮೂಲಕ ಮತ್ತು ರೈಲು ನಂ.16518/16524 ಕಣ್ಣೂರು/ ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ನ ಸಂಚಾರವನ್ನು ಶೋರ್ನೂರು ಜಂಕ್ಷನ್‌, ಪಾಲಾ^ಟ್‌, ಸೇಲಂ, ಜೋಲಾರ್‌ಪೇಟೆ ಮಾರ್ಗದ ಮೂಲಕ ಬದಲಾಯಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಉದಯವಾಣಿ ಎಚ್ಚರಿಸಿತ್ತು
ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಿರಿಬಾಗಿಲು ಸಮೀಪ ಹಳಿಗೆ ಬೃಹತ್‌ ಬಂಡೆ ಉರುಳಿ ಬೀಳುವ ಅಪಾಯವಿದೆ ಎಂಬುದಾಗಿ ಜು. 19ರಂದು “ಹಳಿಗೆ ಉರುಳಲು ಸಿದ್ಧವಾಗಿದೆ ಬಂಡೆ!’ ಎಂಬ ಶೀರ್ಷಿಕೆಯ ವರದಿ ಮೂಲಕ ಉದಯವಾಣಿ ಗಮನ ಸೆಳೆದಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಅಬ್ಬಾ ಬಚಾವ್ !: ಕೋವಿಡ್ 19 ವೈರಸ್‌ ಗಾಳಿಯಿಂದ ಹರಡಲ್ಲ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಜೀವ ವಿಮಾ ಪಾಲಿಸಿದಾರರಿಗೆ ಪ್ರೀಮಿಯಂ ಹಣ ಪಾವತಿಸಲು ಹೆಚ್ಚುವರಿ ಕಾಲಾವಕಾಶ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಕೋವಿಡ್ ವೈರಸ್ ಗಿಲ್ಲ ತಡೆ ; ಸೌದಿಯಲ್ಲಿ ಕರ್ಫ್ಯೂ ವಿಸ್ತರಣೆ

ಭಾರತದಿಂದ ಔಷಧ ಕೋರಿದ ಅಮೆರಿಕ

ಭಾರತದಿಂದ ಔಷಧ ಕೋರಿದ ಅಮೆರಿಕ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಯಕ ನಿಷ್ಠೆ ಮೆರೆಯುತ್ತಿರುವ ವೈದ್ಯರು, ದಾದಿಯರು

ಕಾಯಕ ನಿಷ್ಠೆ ಮೆರೆಯುತ್ತಿರುವ ವೈದ್ಯರು, ದಾದಿಯರು

ಬಿಲ್‌ ಪಾವತಿಗೆ ಮೆಸ್ಕಾಂ ಸೂಚನೆ; 3 ತಿಂಗಳು ಅವಧಿ ವಿಸ್ತರಣೆ ಆದೇಶ ಬಂದಿಲ್ಲ

ಬಿಲ್‌ ಪಾವತಿಗೆ ಮೆಸ್ಕಾಂ ಸೂಚನೆ; 3 ತಿಂಗಳು ಅವಧಿ ವಿಸ್ತರಣೆ ಆದೇಶ ಬಂದಿಲ್ಲ

ಅಡಿಕೆ ಅಡಮಾನ ಸಾಲ: ಡಾ| ರಾಜೇಂದ್ರ ಕುಮಾರ್‌

ಅಡಿಕೆ ಅಡಮಾನ ಸಾಲ: ಡಾ| ರಾಜೇಂದ್ರ ಕುಮಾರ್‌

ಬೈಕಂಪಾಡಿಗೆ ತೆರಳಲು ವ್ಯಾಪಾರಸ್ಥರ ನಕಾರ

ಬೈಕಂಪಾಡಿಗೆ ತೆರಳಲು ವ್ಯಾಪಾರಸ್ಥರ ನಕಾರ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

ಕೋವಿಡ್ 19 ಲಾಕ್‌ಡೌನ್‌  ಬಳಿಕ ಟೋಲ್‌ ಹೆಚ್ಚಳ ಬಿಸಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

IPL-2020

ಮುಚ್ಚಿದ ಬಾಗಿಲಲ್ಲಿ ಐಪಿಎಲ್‌ಗೆ ಒತ್ತಡ!

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸ್ಪಷ್ಟನೆ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

ASIAN-CUP-TROPHY

ಎಎಫ್ ಸಿ ಏಶ್ಯನ್‌ ಕಪ್‌ ಆತಿಥ್ಯಕ್ಕೆ ಭಾರತ ಬಿಡ್‌

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’

ದೇವೇಗೌಡರ ಜತೆ ಮೋದಿ “ಫೋನ್‌ ಪೆ ಚರ್ಚಾ’