ಕರಾವಳಿಯಲ್ಲಿ ಇನ್ನೂ ಅನುಷ್ಠಾನಕ್ಕೆ ಬಾರದ ಸೈರನ್ ಟವರ್‌ಗಳು
ಚಂಡಮಾರುತ, ಸುನಾಮಿ ಮುನ್ನೆಚ್ಚರಿಕೆ, ಕ್ಷಿಪ್ರ ಕಾರ್ಯಾಚರಣೆಗೆ ಪೂರಕ
Team Udayavani, Jun 28, 2022, 7:45 AM IST
ಮಂಗಳೂರು: ಚಂಡ ಮಾರುತ, ಸುನಾಮಿ ಸಂದರ್ಭದಲ್ಲಿ ತುರ್ತು ಮುನ್ನೆಚ್ಚರಿಕೆ ನೀಡಿ ಕ್ಷಿಪ್ರಗತಿಯಲ್ಲಿ ಪರಿಹಾರ ಕಾರ್ಯಾಚರಣೆಗೆ ಪೂರಕವಾಗಿ ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸೈರನ್ ಟವರ್ ಯೋಜನೆ ಮಂಜೂರುಗೊಂಡು ನಾಲ್ಕು ವರ್ಷಗಳು ಸಂದರೂ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.
ನ್ಯಾಶನಲ್ ಸೈಕ್ಲೋನ್ ರೆಸಿಸ್ಟ್ ಮಿಟಿಗೇಶನ್ ಪ್ರೊಜೆಕ್ಟ್ (ರಾಷ್ಟ್ರೀಯ ಚಂಡಮಾರುತ ಅಪಾಯ ಮುನ್ಸೂ ಚನೆ, ಉಪಶಮನ ಯೋಜನೆ -ಎನ್‌ಸಿಆರ್‌ಎಂಪಿ) ವತಿಯಿಂದ 26.92 ಕೋ.ರೂ. ವೆಚ್ಚದಲ್ಲಿ 26 ಸೈರನ್ ಟವರ್‌ಗಳನ್ನು ಅಳವಡಿಸುವ ಯೋಜನೆ ಇದಾಗಿದೆ.
ಅರಬಿ ಸಮುದ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಾಗ ವಾಯುಭಾರ ಕುಸಿತದಿಂದ ಚಂಡಮಾರುತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕಾರ್ಯಾಚರಣೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿ ಸಂಭಾವ್ಯ ಅನಾಹುತಗಳನ್ನು ಕನಿಷ್ಠಗೊಳಿಸಲು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುನ್ನಚ್ಚರಿಕೆ ಹಾಗೂ ಪ್ರಸರಣ ವ್ಯವಸ್ಥೆಗೆ ಸೈರನ್ ಟವರ್ (ಎಚ್ಚರಿಕೆ ಗೋಪುರ) ನಿರ್ಮಾಣ ಯೋಜನೆಯನ್ನು 4 ವರ್ಷಗಳ ಹಿಂದೆ ಎನ್‌ಸಿಆರ್‌ಎಂಪಿ ರೂಪಿಸಿತ್ತು. ಸ್ಥಳ ಸಮೀಕ್ಷೆ ನಡೆಸಿ ಒಟ್ಟು 26 ಕಡೆಗಳಲ್ಲಿ ಸ್ಥಳ ಆಯ್ಕೆ ಮಾಡ ಲಾಗಿತ್ತು.
ಆಯ್ಕೆಯಾಗಿರುವ ತಾಣಗಳು
ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ 8 ಹಾಗೂ ಉತ್ತರ ಕನ್ನಡದಲ್ಲಿ 10 ಪ್ರದೇಶಗಳನ್ನು ಸೈರನ್ ಟವರ್‌ಗೆ ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡದಲ್ಲಿ ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು ಬೀಚ್‌ಗಳು ಹಾಗೂ ಹೊಸಬೆಟ್ಟು, ಉಡುಪಿಯಲ್ಲಿ ಪಡುಬಿದ್ರಿ, ಕಾಪು, ಮಲ್ಪೆ, ಕೋಡಿ, ಮಟ್ಟು, ಮರವಂತೆ, ಶಿರೂರು ಬೀಚ್‌ಗಳ ಬಳಿ ಹಾಗೂ ತೆಕ್ಟಟ್ಟೆ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಉತ್ತರ ಕನ್ನಡದಲ್ಲಿ ಮುರುಡೇಶ್ವರ ಬೀಚ್, ಎಕೋ ಬೀಚ್ ಪಾರ್ಕ್, ಓಂ ಮತ್ತು ಕುಡ್ಲೆ ಬೀಚ್ ನಡುವಣ ಪ್ರದೇಶ, ಗೋಕರ್ಣ ಬೀಚ್, ಆರ್.ಟಿ. ಬೀಚ್, ಮಂಕಿ, ಬೇಲೆಕೇರಿ, ಪುಜಾಗೇರಿ ಕಾಲೇಜು ಆವರಣ, ಶಿರಾಲಿ, ಚಿಟ್ಟಕುಳ ಗ್ರಾಮ ಪ್ರದೇಶ ಆಯ್ಕೆಯಾಗಿವೆ.
ಪ್ರಕೃತಿ ವಿಕೋಪಗಳ ಸಂದರ್ಭ ತುರ್ತು ಆಶ್ರಯಕ್ಕಾಗಿ ದ. ಕನ್ನಡ ದಲ್ಲಿ ಉಳ್ಳಾಲ ಹಾಗೂ ಹೊಸಬೆಟ್ಟುವಿ ನಲ್ಲಿ ಬಹುಉದ್ದೇಶ ಆಶ್ರಯ ತಾಣಗಳನ್ನು ಈಗಾಗಲೇ ನಿರ್ಮಿಸ ಲಾಗಿದೆ. ಉಡುಪಿ ಜಿಲ್ಲೆಯ ತೆಕ್ಕಟ್ಟೆ ಮತ್ತು ಕಾಪುವಿನಲ್ಲಿ ಆಶ್ರಯತಾಣ ನಿರ್ಮಿಸಲಾಗಿದೆ. ತಲಾ ಸುಮಾರು 1,000 ಜನರಿಗೆ ಆಶ್ರಯ ಸಾಮರ್ಥ್ಯ ವನ್ನು ಇದು ಹೊಂದಿದೆ. ಇದರ ಜತೆಗೆ ತ್ವರಿತ ಕಾರ್ಯಾ ಚರಣೆಗೆ ನೆರವಾಗುವಂತೆ ಈ ಯೋಜನೆಯಲ್ಲಿ ಕರಾವಳಿ ತೀರದಲ್ಲಿ ಸೇತುವೆ ಹಾಗೂ ರಸ್ತೆಗಳನ್ನು ಕೂಡ ನಿರ್ಮಿಸಲಾಗಿದೆ.
ಸೈರನ್ ಮೂಲಕ ಎಚ್ಚರಿಕೆ
ಸಂಭಾವ್ಯ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ಹವಾಮಾನ ಇಲಾಖೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ಲಭ್ಯವಾದ ಕೂಡಲೇ ಎಚ್ಚರಿಕೆ ಹಾಗೂ ಸಂದೇಶವನ್ನು ಈ ಮೆಗಾ ಟವರ್‌ಗಳಿಗೆ ರವಾನಿಸಲಾಗುತ್ತದೆ. ಸೈರನ್ ಟವರ್ ಮೂಲಕ ಸುತ್ತಲಿನ 10 ಕಿ.ಮೀ. ವರೆಗೆ ಸಂಭಾವ್ಯ ಅಪಾಯದ ಮುನ್ನೆಚರಿಕೆ ನೀಡಲಾಗುತ್ತದೆ. ಇದು ಸ್ಥಳೀಯವಾಗಿ ತ್ವರಿತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪರಿಹಾರ ತಂಡಗಳಿಗೆ ಸೂಕ್ತ ಪರಿಹಾರ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ನೆರವಾಗುತ್ತದೆ.
– ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತೊಕ್ಕೊಟ್ಟು: ಬೈಕ್ -ಕಾರು ಢಿಕ್ಕಿ; ಇಬ್ಬರಿಗೆ ಗಾಯ
ಚಪ್ಪಲಿಯಲ್ಲಿ ಮರೆ ಮಾಚಿ ಅಕ್ರಮ ಸಾಗಾಟ; 17 ಲಕ್ಷ ರೂ. ಮೌಲ್ಯದ ಚಿನ್ನ ವಶ
ಹರ್ ಘರ್ ತಿರಂಗಾ ಅಭಿಯಾನ : ಮಕ್ಕಳಿಂದ ಪಾಲಕ, ಪೋಷಕರಿಗೆ ಪತ್ರ!
ಫಾಝಿಲ್ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ
ಸೋದರತ್ತೆ ಸಹಿತ ನಾಲ್ವರ ಹಂತಕ ಪ್ರವೀಣ್ ಬಿಡುಗಡೆಗೆ ವಿರೋಧ: ಆತ ಜೈಲಿನಲ್ಲೇ ಇರಲಿ
MUST WATCH
3 ವರ್ಷಗಳ ಬಳಿಕ ಕೆಆರ್ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ಪ್ರವೀಣ್ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಧಮ್ ಇದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ : ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಅಶೋಕ್
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ
ಹೊಸ ಸೇರ್ಪಡೆ
ಸತ್ಯ ಏನೆಂದು ನನಗೆ ಗೊತ್ತು, ನನ್ನ ನಿರ್ಣಯಗಳು ಗಟ್ಟಿಯಾಗಿದೆ: ಬದಲಾವಣೆ ವದಂತಿ ಬಗ್ಗೆ ಸಿಎಂ
ಧರ್ಮಸ್ಥಳದಲ್ಲಿ ರಾಜ್ಯಸಭಾ ಸದಸ್ಯರ ಅಧಿಕೃತ ಕಾರ್ಯಾಲಯ ಉದ್ಘಾಟನೆ
ಮಾರಾಟದಲ್ಲಿ ಕುಸಿತ: ಬೃಹತ್ ಇ-ವಾಣಿಜ್ಯ ಕಂಪನಿ ಅಲಿಬಾಬಾದಿಂದ 10 ಸಾವಿರ ಉದ್ಯೋಗಿಗಳ ವಜಾ
ಪ್ರವೀಣ್ ನೆಟ್ಟಾರ್ ಹತ್ಯೆ ಮಾಡಿದ್ದ ಮೂವರು ಪ್ರಮುಖ ಆರೋಪಿಗಳ ಬಂಧನ
ಪಶ್ಚಿಮಬಂಗಾಳ; ಮಹಿಳೆಯರು, ಮಕ್ಕಳು ಸೇರಿ ನಾಲ್ವರ ಬರ್ಬರ ಹತ್ಯೆ: ಆರೋಪಿ ಸೆರೆ