ಬೆಳ್ತಂಗಡಿ: ತಂದೆಯನ್ನು ಕೊಲೆ ಮಾಡಿ ಕೆಲಸಕ್ಕೆ ಸೇರಿದ್ದ ಮಗ ಪೊಲೀಸರ ವಶಕ್ಕೆ!
Team Udayavani, Aug 26, 2020, 11:02 PM IST
ಬೆಳ್ತಂಗಡಿ: ನಗರದ ಕುತ್ಯಾರು ರಸ್ತೆ ನಿವಾಸಿ ಹಿರಿಯ ಕಾರು ಚಲಕ ವಾಸು ಸಪಲ್ಯ(66) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಗ ದಯಾನಂದನ್ನು (32) ಪೊಲೀಸರು ಬುಧವಾರ ರಾತ್ರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದಿದ್ದಾರೆ.
ಆ.24 ರಂದು ವಾಸು ಸಪಲ್ಯ ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆಮಾಡಲಾಗಿತ್ತು.
ಕೃತ್ಯದ ಬಳಿಕ ಇವರ ಮೂರನೇ ಮಗ ದಯಾನಂದ ನಾಪತ್ತೆಯಾಗಿದ್ದ ಕಾರಣ, ಆತನೇ ಕೊಲೆ ನಡೆಸಿರಬಹುದು ಎಂಬ ಅನುಮಾನ ಪೊಲೀಸರಿಗೆ ದಟ್ಟವಾಗಿತ್ತು.
ಇದನ್ನೂ ಓದಿ: ಬೆಳ್ತಂಗಡಿ: ವಾಕಿಂಗ್ ಮಾಡುವಾಗ ಟ್ಯಾಕ್ಸಿ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಇತ್ತ ತನ್ನ ತಂದೆಯನ್ನೇ ನಡು ರಸ್ತೆಯಲ್ಲಿ ಕೊಲೆ ಮಾಡಿದ ಬಳಿಕ ದಯಾನಂದ ಮಂಗಳೂರಿನಲ್ಲಿ ಕದ್ರಿ ಕಂಬ್ಳದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ ಆ.26 ರಂದು ರಾತ್ರಿ ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದು ಕರೆತಂದಿದ್ದಾರೆ.
‘ತನ್ನನ್ನು ತಂದೆ ಬೈದ ಕಾರಣಕ್ಕೆ ನಾನೇ ಅವರ ಕೊಲೆ ನಡೆಸಿದೆ’ ಎಂಬುದಾಗಿ ದಯಾನಂದ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್