ಗಣೇಶ ಚತುರ್ಥಿ: ವಿಶೇಷ ರೈಲು

Team Udayavani, Jul 19, 2018, 2:48 PM IST

ಮಂಗಳೂರು/ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೇ ಮುಂಬಯಿ ಸೆಂಟ್ರಲ್‌/ ಬಾಂದ್ರಾ/ ಮಂಗಳೂರು ಜಂಕ್ಷನ್‌ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 09001 ಮುಂಬಯಿ ಸೆಂಟ್ರಲ್‌-ಮಂಗಳೂರು ಜಂಕ್ಷನ್‌ ವಿಶೇಷ ರೈಲು  ಸೆ. 12 ಮತ್ತು 19ರಂದು ಮುಂಬಯಿ ಸೆಂಟ್ರಲ್‌ನಿಂದ ರಾತ್ರಿ 11.50ಕ್ಕೆ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ.

ರೈಲು ಸಂಖ್ಯೆ 09002 ಮಂಗಳೂರು ಜಂಕ್ಷನ್‌-ಮುಂಬಯಿ ಸೆಂಟ್ರಲ್‌ ವಿಶೇಷ ರೈಲು ಸೆ. 13 ಮತ್ತು 20ರಂದು ಮಂಗಳೂರು ಜಂಕ್ಷನ್‌ನಿಂದ ರಾತ್ರಿ 11.10ಕ್ಕೆ ಹೊರಟು ಮರುದಿನ ರಾತ್ರಿ 7 ಗಂಟೆಗೆ ಮುಂಬಯಿ ಜಂಕ್ಷನ್‌ ತಲುಪಲಿದೆ. ರೈಲು ಸಂಖ್ಯೆ 09009 ಬಾಂದ್ರಾ- ಮಂಗಳೂರು ಜಂಕ್ಷನ್‌ ವಿಶೇಷ ರೈಲು ಸೆ. 11 ಮತ್ತು 18ರಂದು ಬಾಂದ್ರಾದಿಂದ ರಾತ್ರಿ 11.55ಕ್ಕೆ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ.
ರೈಲು ಸಂಖ್ಯೆ 09010 ಮಂಗಳೂರು ಜಂಕ್ಷನ್‌-ಬಾಂದ್ರಾ ವಿಶೇಷ ರೈಲು ಸೆ. 12 ಮತ್ತು 19ರಂದು ರಾತ್ರಿ 11.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ರಾತ್ರಿ 6.45ಕ್ಕೆ  ಬಾಂದ್ರಾ ತಲುಪಲಿದೆ.

ರೈಲು ಸಂಖ್ಯೆ 09011 ಬಾಂದ್ರಾ- ಮಂಗಳೂರು ಜಂಕ್ಷನ್‌ ಹವಾನಿಯಂತ್ರಿತ ವಿಶೇಷ ರೈಲು ಸೆ. 9, 16 ಮತ್ತು 23ರಂದು ರಾತ್ರಿ 11.55ಕ್ಕೆ ಬಾಂದ್ರಾದಿಂದ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ರೈಲು ಸಂಖ್ಯೆ 09012 ಮಂಗಳೂರು ಜಂಕ್ಷನ್‌-ಬಾಂದ್ರಾ ಹವಾ ನಿಯಂತ್ರಿತ ವಿಶೇಷ ರೈಲು ಸೆ. 10, 17 ಮತ್ತು 24ರಂದು ಮಂಗಳೂರು ಜಂಕ್ಷನ್‌ನಿಂದ ರಾತ್ರಿ 11.10ಕ್ಕೆ ಹೊರಟು ಮರುದಿನ ರಾತ್ರಿ 6.45ಕ್ಕೆ ಬಾಂದ್ರಾ ತಲುಪಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ