ಸೆ. 29-ಅ. 9: ನವರಾತ್ರಿ ಮಹೋತ್ಸವಕ್ಕೆ ಭರದ ಸಿದ್ಧತೆ

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ

Team Udayavani, Sep 24, 2019, 5:20 AM IST

ಮಹಾನಗರ: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾ ದೇವಿ ದೇವಸ್ಥಾನದ ನವರಾತ್ರಿ ಮಹೋ ತ್ಸವವು ಸೆ. 29ರಿಂದ ಅ. 9ರ ವರಗೆ ವಿಜೃಂಭ ಣೆಯಿಂದ ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಸಾವಿರಾರು ವರ್ಷಗಳ ಇತಿಹಾಸ ವಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬವನ್ನು ಒಂಬತ್ತು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ.

ದೇವಸ್ಥಾನದ ಹಿನ್ನೆಲೆ
ಈ ದೇವಸ್ಥಾನವು ದಿಲ್ಲಿಯ ಪ್ರಾಚ್ಯ ವಸ್ತು ಸಂಶೋಧನ ಇಲಾಖೆಯ ಮೇಲ್ವಿಚಾ ರಣೆಗೊಳಪಟ್ಟಿದೆ. ಇಲ್ಲಿನ ವಿಶೇಷವೆಂದರೆ ಪುರಾತನ ಕಾಲದ ಬಿಂಬರೂಪದ ಲಿಂಗ. ಇದರಲ್ಲಿನ ಆಕೃತಿಯು ಸ್ತ್ರೀ ರೂಪವನ್ನು ಹೋಲುತ್ತಿದ್ದು, ಶಿವಶಕ್ತಿ ರೂಪದ ಲಿಂಗ ವೆಂದು ಆರಾಧಿಸಲ್ಪಡುತ್ತಿದೆ. ಲಿಂಗದ ಮೇಲ್ಭಾಗದಲ್ಲಿ ಧಾರಾಪಾತ್ರೆ ಇರುವುದು ಇಲ್ಲಿನ ಮತ್ತೂಂದು ವಿಶೇಷ. ಯಾವುದೇ ದೇವಸ್ಥಾನಗಳಲ್ಲೂ ಶಿವನ ಲಿಂಗದ ಮೇಲೆ ಧಾರಾ ಪಾತ್ರೆ ಇಡುವುದು ಕ್ರಮವಾದರೆ, ಇಲ್ಲಿ ದೇವಿಯ ಬಿಂಬದ ಮೇಲೆ ಧಾರಾಪಾತ್ರೆ ಇರುವುದು ಪೌರಾಣಿಕ ಹಿನ್ನೆಲೆಗೆ ಪುಷ್ಟಿ ನೀಡುತ್ತದೆ. ಗರ್ಭಗುಡಿಯು ಪೂರ್ವಕ್ಕೆ ಮುಖ ಮಾಡಿದ್ದು, ಬಲಕ್ಕೆ ವಿN°àಶ್ವರನ ಗುಡಿಯಿದೆ. ರಕ್ತೇಶ್ವರಿ, ನಂದಿಕೋಣ, ಗುಳಿಗ ಈ ಕ್ಷೇತ್ರದ ಮೂರು ಆರಾಧ್ಯ ದೈವಗಳಾಗಿವೆ. ರಕ್ತೇಶ್ವರಿ ದೇವಿಯ ಶಕ್ತಿಯಾಗಿದ್ದರೆ, ನಂದಿಕೋಣ, ಗುಳಿಗ ಇವು ಈಶ್ವರನ ಶಕ್ತಿ ದೈವಗಳು.

ವರ್ಷಂಪ್ರತಿ ಈ ದೈವಗಳಿಗೆ ನೇಮ ಜರಗುವುದು. ಇಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನ ಇರುವುದರಿಂದಲೇ ನಗರಕ್ಕೆ ಮಂಗಳೂರು ಎಂದು ಹೆಸರು ಬಂತು ಎನ್ನುವ ಪ್ರತೀತಿ ಇದೆ. ಈ ಪ್ರಮುಖ ದೇವಾಲಯವು ಇಲ್ಲಿನ ಸಂಸ್ಕೃತಿಯ ಸೊಬಗನ್ನು ದಕ್ಷಿಣ ಕನ್ನಡಾದ್ಯಂತ ಪಸರಿಸಿದೆ. ಇಲ್ಲಿನ ಮಾತೆ ಶ್ರೀ ಮಂಗಳಾದೇವಿಯು ತನ್ನನ್ನು ತ್ರಿಕರ್ಣ ಪೂರಕ ಆರಾ ಧಿಸಿದ ಭಕ್ತರ ಕೂಗಿಗೆ ಸದಾ ಸ್ಪಂದಿಸುತ್ತಾ, ಎಲ್ಲರ ಆರಾಧ್ಯದೇವರಾಗಿ ಮಂಗಳೂರಿನ ಪ್ರತಿಷ್ಠೆ ಹೆಚ್ಚಿಸಿದ್ದಾಳೆ.

ವೈಶಿಷ್ಟ 
ಕಂಕಣ ಬಲ ಕೂಡಿ ಬರದ ಕನ್ಯೆ ವೃತ್ತದಲ್ಲಿದ್ದು, ಶ್ರೀದೇವಿಯ ಸನ್ನಿಧಿಯಲ್ಲಿ ಸ್ವಯಂವರ ಪಾರ್ವತಿ ವ್ರತವನ್ನಾಚರಿಸಿದರೆ ಆಕೆಗೆ ಯೋಗ್ಯ ವರನು ಲಭಿಸಿ, ಸಂಸಾರ ಸುಖಕರವಾಗುವುದು. ಈ ಸ್ವಯಂವರ ಪೂಜೆಯು ರಾತ್ರಿ ಮಹಾಪೂಜೆಯಂದು ದಿನ ನಡೆಯುವುದು. ಅಲ್ಲದೆ ಕ್ಷೇತ್ರ ದಲ್ಲಿ ವಿವಾಹವಾದರೆ ಅವರ ಜೀವನ ಸುಖವಾಗಿರುವುದು ಎನ್ನುವ ಪ್ರತೀತಿಯಿದೆ.

ಸೆ. 29ರಂದು ಉತ್ಸವಕ್ಕೆ ಚಾಲನೆ
ಸೆ. 29ರಂದು ಪೊಲೀಸ್‌ ಆಯುಕ್ತ ಡಾ| ಹರ್ಷ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್‌ ಕುಮಾರ್‌ ಚಾಲನೆ ನೀಡಲಿರುವರು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಸಾವಿರಾರು ಕಲಾ ಭಿಮಾನಿಗಳು ಭಾಗವಹಿಸಲಿದ್ದಾರೆ. ಪ್ರತಿ ದಿನ ಸಂಜೆ ವಿವಿಧ ಸಂಘ – ಸಂಸ್ಥೆಗಳಿಂದ ಭಜನೆ ನಡೆಯಲಿದೆ.

ವಿಜಯ ದಶಮಿಯಂದು ತೆನೆ ಹಬ್ಬ
ವಿಜಯ ದಶಮಿಯಂದು ಬೆಳಗ್ಗೆ ತೆನೆ ಹಬ್ಬ 8 ಗ್ರಾಮದ ಜನರಿಗೆ ತೆನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ತದನಂತರ ತುಲಾಭಾರ ಸೇವೆ, ಮಧ್ಯಾಹ್ನ ರಥಾರೋಹೊಣವಾಗಿ ರಾತ್ರಿ ಗಂಟೆ 7.30ಕ್ಕೆ ರಥೋತ್ಸವ ಕಾರ್ಯಕ್ರಮ ಜರಗುತ್ತದೆ. 15ಕ್ಕೂ ಮಿಕ್ಕಿ ಹುಲಿವೇಷ ತಂಡಗಳು,
20ಕ್ಕೂ ಮಿಕ್ಕಿ ವಿವಿಧ ಶಬ್ಧ ಚಿತ್ರಗಳನ್ನು ಒಳಗೊಂಡ ಟ್ಯಾಬ್ಲೋಗಳೊಂದಿಗೆ ಮಂಗಳಾದೇವಿಯ ಮಹಾನ್‌ ರಥೋತ್ಸವ ಕಾರ್ಯಕ್ರಮ ಜರಗುತ್ತದೆ.

ವಿಶೇಷ ಅಲಂಕಾರ
ನವರಾತ್ರಿ ಸಂದರ್ಭ ದೇವರಿಗೆ 10 ದಿನಗಳಲ್ಲಿ ವಿಶೇಷ ಅಲಂಕಾರವಾಗಿ ದುರ್ಗಾದೇವಿ, ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷ ಮ ರ್ದಿನಿ, ಚಂಡಿಕೆ, ಸರಸ್ವತಿ, ವಾಗೀಶ್ವರಿ, ಮಂಗಳಾದೇವಿಯ ಅಲಂಕಾರ ಗಳೊಂಡಿರುತ್ತದೆ.ಅ. 9ರಂದು ಅವಭೃಥ ಮಂಗಳ ಸ್ನಾನ ದೊಂದಿಗೆ ನವರಾತ್ರಿ ಮಹೋತ್ಸವ ಸಂಪನಗೊಳ್ಳುತ್ತದೆ. ಪ್ರತೀದಿನ ಮಧ್ಯಾಹ್ನ ಮಹಾಪೂಜೆಯ ಅನಂತರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ