ವಿದ್ಯಾರ್ಥಿಗಳು – ಶಿಕ್ಷಕರಿಗೆ ತಲೆನೋವಾಗುತ್ತಿರುವ ಶಾಲೆಗಳ ನೀರು ಸಮಸ್ಯೆ

Team Udayavani, Jun 1, 2019, 6:00 AM IST

ಮಹಾನಗರ: ನಗರದ ಬಹು ತೇಕ ಶಾಲಾ – ಕಾಲೇಜುಗಳಲ್ಲಿ ನೀರಿನ ಅಭಾವದಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೈರಾಣಾಗಿದ್ದಾರೆ. ನೀರಿಲ್ಲದ ಕಾರಣ ನಗರದ ಖಾಸಗಿ ಶಿಕ್ಷಣ ಸಂಸ್ಥೆ ಯೊಂದು ಶುಕ್ರವಾರ ಮಧ್ಯಾಹ್ನದ ಬಳಿಕ ವಿದ್ಯಾರ್ಥಿ ಗಳಿಗೆ ರಜೆ ನೀಡಿತ್ತು.

ನಗರದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸತೊಡಗಿದೆ. ಶಾಲಾ-ಕಾಲೇಜುಗಳಲ್ಲಿ ನೀರಿನ ಸಮಸ್ಯೆ ತುಸು ಹೆಚ್ಚೇ ಇದೆ. ಕೆಲವು ದಿನಗಳ ಹಿಂದಷ್ಟೇ ಪಪೂ ಕಾಲೇಜುಗಳು ಆರಂಭವಾಗಿವೆ. ಮೇ 29ರಂದು ಸರಕಾರಿ, ಅನುದಾನಿತ ಶಾಲೆಗಳೂ ಕಾರ್ಯಾರಂಭಗೊಂಡಿವೆ. ಆದರೆ, ಶಾಲೆ- ಕಾಲೇಜು ಆರಂಭವಾಗುತ್ತಲೇ ವಿದ್ಯಾರ್ಥಿ- ಶಿಕ್ಷಕರಿಗೆ ನೀರಿನ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಕೆಲವು ಶಾಲೆಗಳಲ್ಲಿ ಶಾಲಾ ರಂಭದ ದಿನದಿಂದಲೇ ಟ್ಯಾಂಕರ್‌ ಮೂಲಕ ನೀರು ತರಿಸಿದರೆ, ಇನ್ನು ಕೆಲವೆಡೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಶಿಕ್ಷಕರಿದ್ದಾರೆ.

ಗಾಂಧಿನಗರ ಸ. ಶಾಲೆಯಲ್ಲಿ ಶಾಲಾ ರಂಭದ ದಿನವೇ ಟ್ಯಾಂಕರ್‌ ಮುಖಾಂತರ ನೀರು ತರಿಸಲಾಗಿದೆ. ಲೇಡಿಹಿಲ್ ವಿಕ್ಟೋ ರಿಯಾ ಆಂ.ಮಾ.ಶಾಲೆ ನೀರಿನ ವಿಪರೀತ ಸಮಸ್ಯೆ ಇದ್ದ ಕಾರಣ ಮಕ್ಕಳ ಹಿತದೃಷ್ಟಿಯಿಂದ ಶುಕ್ರವಾರ ಮಧ್ಯಾಹ್ನದ ಬಳಿಕ ಶಾಲೆಗೆ ರಜೆ ನೀಡಿತ್ತು. ಶನಿವಾರ ಮಧ್ಯಾಹ್ನದ ತನಕ ಶಾಲೆ ಇರುವುದರಿಂದ ನೀರಿನ ಸಮಸ್ಯೆಯಿದ್ದರೂ ತರಗತಿಗಳು ನಡೆಯಲಿವೆ. ಆದರೆ, ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಹೇಗೆ ತರಗತಿ ನಡೆಸುವುದು ತಿಳಿಯದಾಗಿದೆ ಎನ್ನುತ್ತಾರೆ ಈ ಶಾಲೆಯ ಶಿಕ್ಷಕರು.

ಬಿಕರ್ನಕಟ್ಟೆ: ಹೆಚ್ಚಿದ ಸಮಸ್ಯೆ
ಬಿಕರ್ನಕಟ್ಟೆ ಸ. ಶಾಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿತ್ತು. ಆದರೆ, ಸನಿಹದ ಫ್ಲಾ ್ಯಟ್ ನಲ್ಲಿ ಬೋರ್‌ವೆಲ್ ಇರುವುದರಿಂದ ಮಕ್ಕಳ ಆವಶ್ಯಕತೆಗೆ ನೀರು ನೀಡುವಂತೆ ಸಂಸ್ಥೆ ಯವರು ಮನವಿ ಮಾಡಿದ್ದರಿಂದ ನೀರು ದೊರಕಿದೆ. ಅಲ್ಲದೆ, ಮಳೆ ಬರುವ ವರೆಗೂ ನೀರು ಪಡೆದುಕೊಳ್ಳಲು ಅವರು ಹೇಳಿರುವುದಾಗಿ ಶಾಲಾ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ಬಲ್ಮಠ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಥಮಿಕ ವಿಭಾಗ ಶಾಲೆಯಲ್ಲಿ ಶಾಲಾರಂಭದ ಮುನ್ನಾ ದಿನವೇ ಅಂದರೆ ಮೇ 28ರಂದು ಸಿಂಟೆಕ್ಸ್‌ನಲ್ಲಿ ನೀರು ತುಂಬಿಸಿಡಲಾಗಿದ್ದು, ಎರಡು ದಿನಗಳ ಕಾಲ ಅದೇ ನೀರನ್ನು ಬಳಸಲಾಗಿದೆ. ಶುಕ್ರವಾರ ಪಾಲಿಕೆ ನೀರು ಸರಬರಾಜಾಗಿರುವುದರಿಂದ ಸಮಸ್ಯೆ ಆಗಿಲ್ಲ. ಆದರೆ, ನೀರಿನ ಸಮಸ್ಯೆ ಶಾಲೆಯಲ್ಲಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಸೀತಮ್ಮ ಜೆ.

ನಾಲ್ಯಪದವು ಸರಕಾರಿ ಶಾಲೆಯಲ್ಲಿ ನೀರಿನ ಸಮಸ್ಯೆ ಇದೆ. ಆದರೆ, ನೀರು ಕಡಿಮೆ ಯಾದ ಪಾಲಿಕೆಯ ಅಭಿಯಂತರರಿಗೆ ಕರೆ ಮಾಡಿ ತಿಳಿಸಿದರೆ ತತ್‌ಕ್ಷಣ ಟ್ಯಾಂಕರ್‌ ನೀರು ಕಳುಹಿಸುತ್ತಾರೆ. ಹಾಗಾಗಿ ಸಮಸ್ಯೆ ಬಿಗಡಾಯಿಸಿಲ್ಲ ಎಂದು ಪ್ರಭಾರ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಹೇಳಿದ್ದಾರೆ.

ಸೈಂಟ್ ಅಲೋಶಿಯಸ್‌, ಕಪಿತಾನಿಯೋ ಶಾಲೆ, ರೊಸಾರಿಯೋ ಶಾಲೆ, ಶಾರದಾ ವಿದ್ಯಾಲಯ, ಬೆಂದೂರ್‌ ಸೈಂಟ್ ಆ್ಯಗ್ನೆಸ್‌ ಶಾಲೆ ಮುಂತಾದೆಡೆ ನೀರಿನ ಸಮಸ್ಯೆ ಇಲ್ಲಿವರೆಗೆ ಎದುರಾಗಿಲ್ಲ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಕೈ ತೊಳೆಯಲೂ ನೀರಿಲ್ಲ!
ಮುಡಿಪು ಸ.ಪ.ಪೂ. ಕಾಲೇಜಿನಲ್ಲಿ ಕೈ ತೊಳೆಯಲೂ ನೀರಿಲ್ಲ. ಟಿಫಿನ್‌ ಬಾಕ್ಸ್‌ನ್ನುತೊಳೆಯದೇ ಮನೆಗೊಯ್ಯಬೇಕಾದ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡಿದ್ದಾರೆ.

ಮಾಹಿತಿ ಬಂದಿಲ್ಲ

ನಗರದಲ್ಲಿ ನೀರಿನ ಸಮಸ್ಯೆ ಇರುವ ಶಾಲೆಗಳಿಗೆ ಮಧ್ಯಾಹ್ನದ ಬಳಿಕ ರಜೆ ನೀಡುವ ನಿಟ್ಟಿನಲ್ಲಿ ಈವರೆಗೆ ಯಾವುದೇ ನಿರ್ದೇಶಗಳು ಬಂದಿಲ್ಲ. ಈ ಬಗ್ಗೆ ಮಾಹಿತಿ ಬಂದಲ್ಲಿ ತಿಳಿಸಲಾಗುವುದು.
– ಲೋಕೇಶ್‌, ಮಂಗಳೂರು ದ. ವಲಯ ಕ್ಷೇತ್ರ ಶಿಕ್ಷಣಾಧಿಕಾರಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ