ಕಾನೂನು ಸಮರದ ನಡುವೆ ಯಶಸ್ವಿ ಕಂಬಳ


Team Udayavani, Mar 8, 2019, 12:30 AM IST

0503mlr17-kambla.jpg

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನ ಕಂಬಳ ಮಾ.16ಕ್ಕೆ ಮುಕ್ತಾಯವಾಗಲಿದೆ. ನಾನಾ ರೀತಿಯ ಅಡೆತಡೆ, ಕಾನೂನು ಸಮರದ ನಡುವೆಯೂ ಕಂಬಳ ಈ ಬಾರಿ ನಿರ್ವಿಘ್ನವಾಗಿ ಮುಕ್ತಾಯಗೊಳ್ಳುತ್ತಿರುವುದು ಅಭಿಮಾನಿಗಳು ಹಾಗೂ ಆಯೋಜಕರಲ್ಲಿ ಸಮಾಧಾನ ಮೂಡಿಸಿದೆ. 

ಈ ಋತುವಿನ ಕಂಬಳ ನವೆಂಬರ್‌ನಲ್ಲಿ ಆರಂಭಗೊಂಡಿದ್ದು, ಇನ್ನು ಬಂಗಾಡಿ ಹಾಗೂ ವೇಣೂರು ಕಂಬಳ ಮಾತ್ರ ಬಾಕಿ ಉಳಿದಿವೆ. ಮಾ. 9ರಂದು ಬಂಗಾಡಿಯಲ್ಲಿ ಹಾಗೂ ಮಾ.16ರಂದು ವೇಣೂರಿನಲ್ಲಿ ನಿಗದಿಯಾಗಿವೆ. ಆರು ತಿಂಗಳ ಬಳಿಕ ಮತ್ತೆ ನವೆಂಬರ್‌ನಲ್ಲಿ ಮುಂದಿನ ಕಂಬಳ ಋತು ಆರಂಭಗೊಳ್ಳಲಿದೆ.

ಜಲ್ಲಿಕಟ್ಟು ಹಾಗೂ ಕಂಬಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಚಾರಣೆಗೆ ಸಂವಿಧಾನ ಪೀಠಕ್ಕೆ ವರ್ಗಾವಣೆಗೊಂಡಿವೆ. ಆದರೆ ನ್ಯಾಯಾಲಯ ಇದರಲ್ಲಿ ಕಂಬಳ ಅರ್ಜಿಯನ್ನು ಮಾತ್ರ ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸಿ ಹಿಂದಿನ ನಿಗದಿತ ದಿನಾಂಕದ ಬದಲು ಮುಂಚಿತವಾಗಿಯೇ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಜ.25ಕ್ಕೆ ಅಂದಾಜು ದಿನಾಂಕ ಗೊತ್ತು ಮಾಡಿತ್ತು. ಆದರೆ ಸದ್ಯಕ್ಕೆ ಆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ.

ಮುಂದುವರಿದ ಕಾನೂನು ಸಮರ
ಈ ನಡುವೆ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಕಾನೂನು ಜಾರಿಗೊಂಡಿದ್ದರೂ ಕಂಬಳ ವಿರುದ್ಧ ಪ್ರಾಣಿದಯಾ ಸಂಘಟನೆಗಳಿಂದ ಒಂದಲ್ಲ ಒಂದು ರೀತಿಯ ಕಾನೂನು ಸಮರ ಮುಂದುವರಿದಿದೆ. ಇದರಿಂದಾಗಿ, ಕಂಬಳ ಕ್ರೀಡೆ ಮೇಲೆ ಇರುವ ಆತಂಕದ ಕರಿಛಾಯೆ ಇನ್ನೂ ಪೂರ್ಣ ವಾಗಿ ನಿವಾರಣೆಯಾಗಿಲ್ಲ. ಕಂಬಳಕ್ಕೆ ತಡೆ ಕೋರಿ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ  ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಾಕಿ ಇದೆ.ಮಾ.16ರ ವೇಳೆಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. 

ಬೆತ್ತ ಬಳಸದ ಪ್ರಯೋಗ
ಕಂಬಳದಲ್ಲಿ ಪ್ರಾಣಿಹಿಂಸೆ ಮಾಡಲಾಗುತ್ತಿದೆ ಎಂಬ ಪೆಟಾದ ಆರೋಪಗಳ ಹಿನ್ನೆಲೆಯಲ್ಲಿ ಬೆತ್ತ ಹಿಡಿ ಯದೆ ಕೋಣಗಳನ್ನು ಓಡಿಸುವ ಪ್ರಯೋಗವೊಂದನ್ನು ಈ ಕಂಬಳ ಋತುವಿನಲ್ಲಿ ಮಾಡಲಾಗಿದೆ.ಮೂಡುಬಿದಿರೆ, ಕಕ್ಕೆಪದವು ಹಾಗೂ ಪೈವಳಿಕೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುವಾಗ ಬೆತ್ತ ಬಳಕೆ ಮಾಡಿರಲಿಲ್ಲ. ಸುಮಾರು 4 ವರ್ಷಗಳ ಹಿಂದೆ ಕಟಪಾಡಿ ಕಂಬಳದಲ್ಲಿ ಈ ರೀತಿಯ ಪ್ರಯೋಗ ನಡೆದಿತ್ತು. ಸ್ಪಂಜ್‌ನಿಂದ ಆವರಿಸಿದ ಬೆತ್ತ  ರೂಪಿಸಿದ್ದರೂ ಇದನ್ನು ಕೋಣಗಳ ಮೇಲೆ ಸವರಿದಾಗ ದೊಡ್ಡ ಶಬ್ದ ಬರುವುದರಿಂದ ಬಳಕೆ ಮಾಡಿರಲಿಲ್ಲ. 

ಈ ಋತುವಿನ ಕಂಬಳಗಳು ನಿರಾತಂಕವಾಗಿ ನಡೆಯುತ್ತ ಬಂದಿದ್ದು,ಇನ್ನೆರಡು ಕಂಬಳಗಳು ಬಾಕಿ ಇವೆ.ಮಾ.16ಕ್ಕೆ ವೇಣೂರು ಕಂಬಳದೊಂದಿಗೆ ಈ ಋತು ಮುಕ್ತಾಯವಾಗಲಿದೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳ ಯಾವುದೇ ಅಡೆತಡೆ ಇಲ್ಲದೆ ಮಂದುವರಿಯಲಿದೆ ಎಂಬ ದೃಢ ವಿಶ್ವಾಸ ನಮ್ಮದು.
– ಪಿ.ಆರ್‌. ಶೆಟ್ಟಿ 
ಜಿಲ್ಲಾ  ಕಂಬಳ ಸಮಿತಿ ಅಧ್ಯಕ್ಷರು

ಟಾಪ್ ನ್ಯೂಸ್

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

ಪ್ರಾಕೃತಿಕ ವಿಕೋಪಗಳ ಅತೀ ಅಪಾಯಕಾರಿ ವಲಯದಲ್ಲಿ ಕರ್ನಾಟಕ

ಪ್ರಾಕೃತಿಕ ವಿಕೋಪಗಳ ಅತೀ ಅಪಾಯಕಾರಿ ವಲಯದಲ್ಲಿ ಕರ್ನಾಟಕ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಮಕ್ಕಳಿಗೆ ಲಸಿಕೆ ಸುರಕ್ಷಿತವೇ? ಅನುಮಾನಕ್ಕೆ ಪರಿಹಾರ

ಹೊರ ರಾಜ್ಯ, ದೇಶದಲ್ಲಿರುವ ಕನ್ನಡ ಪೀಠಕ್ಕೆ ಬೇಕಿದೆ ನೆರವು

ಹೊರ ರಾಜ್ಯ, ದೇಶದಲ್ಲಿರುವ ಕನ್ನಡ ಪೀಠಕ್ಕೆ ಬೇಕಿದೆ ನೆರವು

ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್‌?

ಬಾಂಗ್ಲಾವನ್ನು ಬಲೆಗೆ ಬೀಳಿಸೀತೇ ಇಂಗ್ಲೆಂಡ್‌?

ನ. 27ರಿಂದ ಕೆಪಿಎಸ್‌ಸಿ ಪರೀಕ್ಷೆ

ನ. 27ರಿಂದ ಕೆಪಿಎಸ್‌ಸಿ ಪರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಬಂಧನ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು; ಮರಳಿ ಸಮುದ್ರಕ್ಕೆ ಬಿಟ್ಟ ಮೀನುಗಾರರು

ಕರಾವಳಿಯ ಶಾಲೆಗಳಲ್ಲಿ ಮರುಕಳಿಸಿದ ಸಂಭ್ರಮ

ಕರಾವಳಿಯ ಶಾಲೆಗಳಲ್ಲಿ ಮರುಕಳಿಸಿದ ಸಂಭ್ರಮ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ಮೊದಲ ಸ್ಟ್ಯಾಂಪ್ ಗೆ 62 ಕೋಟಿ ರೂ!

ಮೊದಲ ಸ್ಟ್ಯಾಂಪ್ ಗೆ 62 ಕೋಟಿ ರೂ!

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

ಇಂದು ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

100 ಶಾಸಕರಿಗಿಲ್ಲ ಟಿಕೆಟ್‌? ಬಿಜೆಪಿಯಲ್ಲೂ ಆಮೂಲಾಗ್ರ ಬದಲಾವಣೆ ಸಾಧ್ಯತೆ

ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ದ್ರಾವಿಡ್‌ ಅರ್ಜಿ

ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ದ್ರಾವಿಡ್‌ ಅರ್ಜಿ

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.