ಸುಳ್ಯ: ಮನೆ ಕುಸಿತ; ದಂಪತಿಗೆ ಗಾಯ
Team Udayavani, May 29, 2018, 12:31 PM IST
ಸುಳ್ಯ: ನಗರದ ಹೊರವಲಯದ ಕೊಡಿಯಾಲಬೈಲಿನಲ್ಲಿ ರವಿವಾರ ರಾತ್ರಿ ಸುರಿದ ಮಳೆಗೆ ಕೆಂಚ ಅವರ ಮನೆ ಪೂರ್ಣ ಧರಾಶಾಯಿಯಾಗಿದೆ. ಕೆಂಚ ಮತ್ತು ಪತ್ನಿ ಕಮಲಾ ಅವರಿಗೆ ಗಾಯಗಳಾಗಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಅವಿನ್ ಕುಮಾರ್ ಭೇಟಿ ನೀಡಿದರು.