ಸುರತ್ಕಲ್: ಡಾ| ಭರತ್ ಶೆಟ್ಟಿ ಹಲವೆಡೆ ಪ್ರಚಾರ
Team Udayavani, Apr 29, 2018, 12:35 PM IST
ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಭರತ್ ಶೆಟ್ಟಿ ಅವರು ಶನಿವಾರ ಮತ ಪ್ರಚಾರ ಮಾಡಿದರು.
ಸುರತ್ಕಲ್ ಸದಾಶಿವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅನಂತರ ಕಾಶಿಮಠ, ದುರ್ಗ ದೇವಸ್ಥಾನ, ಕುಚ್ಚೆಗಿಡ್ಡೆ ಕೊಡ್ದಬ್ಬು ದೈವಸ್ಥಾನ, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಕೋಡಿಕೆರೆ ನಾಗ ಬನ ಎಂಎಸ್ಸಿ ಜೆಡ್ ಕಾಲನಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಹೊಸಬೆಟ್ಟುವಿನಲ್ಲಿ ಭರತ್ ಶೆಟ್ಟಿ ಪ್ರಚಾರಕ್ಕೆ ಮಂಗಳೂರಿನ ದಂತವೈದ್ಯರ ಬಳಗ ಸಾಥ್ ನೀಡಿತು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆಯಾಗಿತ್ತು. ಕಾಂಗ್ರೆಸ್ ದುರಾಡಳಿತ ಹಾಗೂ ಅನಾಚಾರಗಳನ್ನ ಮಟ್ಟ ಹಾಕಲು ಬಿಜೆಪಿಗೆ ಮತನೀಡಿ ಗೆಲ್ಲಿಸುವಂತೆ ಮನವಿ ಮಾಡಲಾಯಿತು.
ಡಾ| ಗಣೇಶ್ ಪ್ರಸಾದ್, ಡಾ| ಶರಣ್, ಡಾ| ಗಿರೀಶ್, ಡಾ| ಕಿರಣ್, ಡಾ| ನೇಹಾ, ಡಾ| ಮಿಥುನ್, ಡಾ| ಹರಿಪ್ರಸಾದ್, ಡಾ| ಆರತಿ, ಡಾ| ಮೆಲ್ಬಾ, ಡಾ| ಆಶೀಶ್, ಡಾ| ರಶ್ಮಿ , ಡಾ| ಸ್ವಾತಿ ಭರತ್ ಶೆಟ್ಟಿ ಪರ ಮತಯಾಚನೆ ಮಾಡಿದರು.