ಸುರತ್ಕಲ್:ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭ
Team Udayavani, Mar 22, 2018, 11:04 AM IST
ಸುರತ್ಕಲ್: ಇಲ್ಲಿ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗಾಗಿ ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭಿಸಲಾಗಿದೆ.
ಗುರುವಾರ ಪೊಲೀಸ್ ಬಿಗಿಭದ್ರತೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಪಾಲಿಕೆ ಕಂದಾಯ ಡಿ ಸಿ ಗಾಯತ್ರಿ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾಮಾಗಾರಿ ಆರಂಭದ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಮೊಯಿದೀನ್ ಬಾವಾ ಬಂದ ಸಂದರ್ಭ ವ್ಯಾಪಾರಿಗಳ ತೀವ್ರ ಆಕ್ರೋಶ ಹೊರ ಹಾಕಿದರು.
ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರು ಕಾಮಗಾರಿ ಆರಂಭದ ವೇಳೆ ಹಾಜರಿದ್ದರು.