ನೆಹರೂ ಯುವಕೇಂದ್ರದ ಸ್ವಚ್ಛ ಭಾರತ್‌ ಇಂಟರ್ನ್ ಶಿಪ್ ಪ್ರೋಗಾಂ


Team Udayavani, May 29, 2018, 4:05 AM IST

internship-28-5.jpg

ಬಡಗನ್ನೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್‌ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಮ್ಮಿಕೊಂಡಿರುವ ಸ್ವಚ್ಛ ಭಾರತ್‌ ಸಮ್ಮರ್‌ ಇಂಟರ್ನ್ ಶಿಪ್ ಪ್ರೋಗ್ರಾಂಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್‌ ಯುವಕ ಮಂಡಲವು ಸಾಥ್‌ ನೀಡಿದ್ದು, ಮೇ 27ರಂದು ನನ್ಯ ಶಾಲಾ ಆವರಣ ಸ್ವತ್ಛತೆಯ ಮೂಲಕ 3 ತಿಂಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಸ್ವಚ್ಛ ಭಾರತ್‌ ಇಂಟರ್ನ್ ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲೂಕಿನಿಂದ ಮೊದಲ ತಂಡವಾಗಿ ಕಾವು ನನ್ಯ ತುಡರ್‌ ಯುವಕ ಮಂಡಲ ಮೇ 4ರಂದು ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿದೆ. ಮೂರು ತಿಂಗಳಲ್ಲಿ 100 ಗಂಟೆಗಳ ಕಾರ್ಯಕ್ರಮದ ರೂಪುರೇಷೆ ತಯಾರಿಸಿ, ಮೇ 27ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ನನ್ಯ ಶಾಲೆಯಲ್ಲಿ ಸ್ವಚ್ಛತೆ
ಯುವಕ ಮಂಡಲದ ನೂತನ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಚ್ಛತಾ ಕಾರ್ಯ ಉದ್ಘಾಟಿಸಿ, ಸ್ವಚ್ಛ ಭಾರತ್‌ ಇಂಟರ್ನ್ ಶಿಪ್ ಯೋಜನೆಯ ಮೊದಲನೇ ಕಾರ್ಯಕ್ರಮವಾಗಿ ತುಡರ್‌ ಯುವಕ ಮಂಡಲವು ಮಾಟ್ನೂರು ಗ್ರಾಮದ ನನ್ಯ ಸರಕಾರಿ ಹಿ.ಪ್ರಾ ಶಾಲೆಯ ವಠಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದೆ. ಮೇ 29ರಂದು ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಬಂದ ಮೊದಲ ದಿನವೇ ಶಾಲೆಯ ವಾತಾವರಣ ಖುಷಿ ಕೊಡುವಂತಿರಬೇಕು, ಶುಚಿಯಾಗಿರಬೇಕು, ಕಲಿಕೆಗೆ ಪೂರಕವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಮುಂಚಿತವಾಗಿಯೇ ಶಾಲಾ ವಠಾರ, ಕೊಠಡಿಗಳು, ಶೌಚಾಲಯಗಳನ್ನು ಸ್ವತ್ಛಗೊಳಿಸಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸಿ, ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.

ನನ್ಯ ಶಾಲಾ ಮುಖ್ಯಗುರು ನಾಗವೇಣಿ, ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಮಾಜಿ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ, ಪ್ರಧಾನ ಕಾರ್ಯದರ್ಶಿ ನವೀನ ನನ್ಯಪಟ್ಟಾಜೆ, ಉಪಾಧ್ಯಕ್ಷ ಜಗದೀಶ ನಾಯ್ಕ, ಜತೆ ಕಾರ್ಯದರ್ಶಿ ಶ್ರೀಕಾಂತ್‌ ಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಸಂದೇಶ್‌ ಚಾಕೋಟೆ, ಕೋಶಾ ಕಾರಿ ಸತೀಶ ಮದ್ಲ, ಸದಸ್ಯರಾದ ಶ್ರೀಕುಮಾರ್‌, ಸಂಕಪ್ಪ ಪೂಜಾರಿ, ರಾಮಣ್ಣ ನಾಯ್ಕ ಆಚಾರಿಮೂಲೆ, ಧನಂಜಯ ನಾಯ್ಕ ಕುಂಞಿಕುಮೇರು, ರಾಜೇಶ್‌ ಬಿ., ನಿರಂಜನ ಕಾವು, ಸುನೀಲ್‌ ನಿ ಮುಂಡ, ದಿನೇಶ್‌ ಮದ್ಲ, ಹರ್ಷ ಎ.ಆರ್‌., ಮೋನಪ್ಪ ಎಂ., ರಶ್ಮಿತ್‌ ಆಚಾರಮೂಲೆ ಪಾಲ್ಗೊಂಡಿದ್ದರು.


3 ತಿಂಗಳಲ್ಲಿ 100 ಗಂಟೆಯ ಕಾರ್ಯಕ್ರಮ

ಮೇ 1ರಿಂದ ಕಾವು ನನ್ಯ ತುಡರ್‌ ಯುವಕ ಮಂಡಲ ಕಾರ್ಯಕ್ರಮ ಆರಂಭಿಸಿದ್ದು, ಜುಲೈ 31ರ ವರೆಗೆ ನಡೆಯಲಿದೆ. ಒಟ್ಟು 3 ತಿಂಗಳಲ್ಲಿ 100 ಗಂಟೆಗಳ ಕಾರ್ಯಕ್ರಮ ನಡೆಸಬೇಕಿದೆ. ಆಯಾ ಕಾರ್ಯಕ್ರಮಗಳ ಫೋಟೋ, ವರದಿ, ಪೇಪರ್‌ ಕಟ್ಟಿಂಗ್‌, ವೀಡಿಯೋ ಕ್ಲಿಪಿಂಗ್‌ಗಳನ್ನು ಆನ್‌ಲೈನ್‌ ಮೂಲಕವೇ ಲಾಗ್‌ ಇನ್‌ ಆಗಿ ಆಯಾ ದಿನದ ಪೂರ್ಣ ವರದಿಯನ್ನು ಇಲಾಖೆಗೆ ನೀಡಬೇಕಿದೆ.

ಬಹುಮಾನವೂ ಇದೆ
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಪ್ರೋತ್ಸಾಹಕವಾಗಿ ನೆಹರೂ ಯುವ ಕೇಂದ್ರದ ಮೂಲಕ ಹಲವು ಬಹುಮಾನಗಳನ್ನು ಘೋಷಿಸಿದೆ. ಉತ್ತಮ ಕೆಲಸ ನಿರ್ವಹಿಸಿದ ಯುವ ಸಂಸ್ಥೆಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.

ಏನಿದು ಯೋಜನೆ?
ನೆಹರೂ ಯುವ ಕೇಂದ್ರದಲ್ಲಿ ನೋಂದಣಿಯಾಗಿರುವ ಯುವ ಸಂಸ್ಥೆಗಳ ಸದಸ್ಯರು ಈ ಯೋಜನೆಗೆ ಕೈಜೋಡಿಸಬಹುದು. ಗ್ರಾಮೀಣ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವುದು, ಆರೋಗ್ಯ ಜಾಗೃತಿ, ಸ್ವಚ್ಛತೆ ಬಗ್ಗೆ ಬೀದಿನಾಟಕ, ರ್ಯಾಲಿ, ಸಾಂಸ್ಕೃತಿಕ ಕಾರ್ಯಕ್ರಮ, ನೈರ್ಮಲ್ಯ ಪದ್ಧತಿ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ, ಘನ ತ್ಯಾಜ್ಯ ನಿರ್ವಹಣೆ, ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾ ಸಮಿತಿ ರಚನೆ, ಶೌಚಾಲಯ ನಿರ್ಮಾಣ ಇತ್ಯಾದಿ ಕಾರ್ಯಕ್ರಮ ನಡೆಸಬೇಕಿದೆ.

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.