ದಾಖಲೆ ಪ್ರಮಾಣದ ಮತದಾನದ ಹಿಂದೆ “ಸ್ವೀಪ್‌’ ಪರಿಶ್ರಮ

ಕ್ಯಾಂಪಸ್‌ ರಾಯಭಾರಿಗಳ ಬಳಕೆ

Team Udayavani, Apr 20, 2019, 6:21 AM IST

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019ನೇ ಲೋಕಸಭಾ ಚುನಾವಣೆಯಲ್ಲಿ ಶೇ.77.90 ಮತದಾನ ವಾಗಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಾಗಿದೆ. ವಿಶೇಷವೆಂದರೆ, ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ವಾಗಿರುವುದರ ಹಿಂದೆ ಸ್ವೀಪ್‌ ಸಮಿತಿಯ ಶ್ರಮವಿದೆ.

ಪಾರದರ್ಶಕ, ನ್ಯಾಯಸಮ್ಮತ ಚುನಾವಣೆಯಲ್ಲಿ ಜನರು ಪಾಲ್ಗೊಳ್ಳು ವಂತಾಗಲು ಜಿಲ್ಲಾ ಸ್ವೀಪ್‌ ಸಮಿತಿಯು ವಿವಿಧ ಪ್ರಯತ್ನಗಳನ್ನು ನಡೆಸಿತ್ತು. ಶೇ. 90ರಷ್ಟು ಮತದಾನವಾಗುವ ಗುರಿ ಯೊಂದಿಗೆ ಸ್ವೀಪ್‌ ಕಾರ್ಯ ಯೋಜನೆ ರೂಪಿಸಿತ್ತು. ಆದರೆ ಎ. 18ರಂದು ನಡೆದ ಚುನಾವಣೆಯಲ್ಲಿ ಶೇ. 77.90 ಮತದಾನವಾಗುವುದರೊಂದಿಗೆ ಶೇ. 90ರ ಗುರಿ ಸಾಧನೆ ಸಾಧ್ಯವಾಗಿಲ್ಲ ವಾದರೂ ಈ ಪ್ರಯತ್ನ ಮುಂದಿನ ಚುನಾವಣೆಗಳಿಗೆ ವೇದಿಕೆ ಎಂಬುದು ಸ್ವೀಪ್‌ ಸಮಿತಿಯವರ ಮಾತು.

ಅನೇಕ ಜಾಗೃತಿ ಕಾರ್ಯಕ್ರಮ
ಸ್ವೀಪ್‌ ಸಮಿತಿಯು 230 ಗ್ರಾ.ಪಂ. ವ್ಯಾಪ್ತಿಯಲ್ಲಿ, 1,861 ಬೂತ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಜನರನ್ನು ಮತದಾನಕ್ಕೆ ಪ್ರೇರೇಪಿಸಿತ್ತು. ಸೈಕಲ್‌ ಜಾಥಾ, ಮ್ಯಾರಥಾನ್‌, ಕಡಲ ಕಿನಾರೆಯಲ್ಲಿ ಬೃಹತ್‌ ಮಾನವ ಸರಪಳಿ, “ಉದಯವಾಣಿ’ ಜತೆಗೂಡಿ ರಸಪ್ರಶ್ನೆ ಸ್ಪರ್ಧೆ, ಸರ್ಫಿಂಗ್‌, ಬೀದಿ ನಾಟಕದಂತಹ ಅನೇಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಏರ್ಪಡಿಸಿ ಜನರನ್ನು ಮತದಾನಕ್ಕೆ ಸೆಳೆಯುವ ಪ್ರಯತ್ನ ನಡೆದಿತ್ತು.

ವಿವಿಪ್ಯಾಟ್‌ ಬಳಕೆ ಪ್ರಾತ್ಯಕ್ಷಿಕೆ
ಬಹುತೇಕರಿಗೆ ವಿವಿಪ್ಯಾಟ್‌ನಲ್ಲಿ ಗುಂಡಿ ಒತ್ತುವ ಕುರಿತು ಗೊಂದಲಗಳಿರುತ್ತವೆ. ಈ ಗೊಂದಲ ನಿವಾರಿಸಲೆಂದೇ ವಿವಿಪ್ಯಾಟ್‌ ಬಳಕೆ ಕುರಿತು ಜನರಿಗೆ ಪ್ರಾತ್ಯಕ್ಷಿಕೆ ನಡೆಸಲಾಗಿತ್ತು. 1014 ಕೇಂದ್ರಗಳಲ್ಲಿ ಈ ಪ್ರಾತ್ಯಕ್ಷಿಕೆ ನಡೆದಿದ್ದು, 1,53,870 ಮಂದಿ ಆಗಮಿಸಿ ವಿವಿಪ್ಯಾಟ್‌ನಲ್ಲಿ ಮತದಾನ ಮಾಡುವ ಬಗ್ಗೆ ಪ್ರಾಯೋಗಿಕ ಅನುಭವ ಪಡೆದುಕೊಂಡಿದ್ದರು.

ಯುವ ಮತದಾರರ ಸೆಳೆತ
ಯುವ ಮತದಾರರನ್ನು ಸೆಳೆಯುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಪ್ರೌಢ/ ಪ.ಪೂ., ಪದವಿ ಕಾಲೇಜು, ವೈದ್ಯಕೀಯ, ಪಾಲಿ ಟೆಕ್ನಿಕ್‌ ಸಂಸ್ಥೆಗಳನ್ನು ಮತದಾರರ ಸಾಕ್ಷ ರತಾ ಸಂಘಗಳನ್ನು ಸ್ಥಾಪಿಸಲಾಗಿತ್ತು. ಅಲ್ಲದೆ, 40 ಸಪ್ರದ ಕಾಲೇಜುಗಳಿಂದ 80 ಮಂದಿ ಕ್ಯಾಂಪಸ್‌ ರಾಯಭಾರಿಗಳನ್ನು ನೇಮಕ ಮಾಡಿ ಗುರುತಿನ ಚೀಟಿ ಮಾಡಿ ಸುವುದು, ಮತದಾರರ ನೋಂದಣಿಗೆ ಜನ ರನ್ನು ಪ್ರೇರೇಪಿಸುವ ಕೆಲಸಗಳಿಗೆ ಬಳಸಿ ಕೊ ಳ್ಳಲಾಗಿತ್ತು. ಜಿಲ್ಲೆಯ 1,861 ಮತಗಟ್ಟೆಗಳಲ್ಲಿ ಚುನಾವ್‌ ಪಾಠಶಾಲಾ ತೆರೆದು ಜಾಗೃತಿ ಮೂಡಿಸುವ ಕೆಲಸ ನಡೆಸಲಾಗಿತ್ತು. ಸ್ವೀಪ್‌ನ ಈ ಪ್ರಯತ್ನದ ಭಾಗವಾಗಿ 21,321 ಮಂದಿ ಯುವ ಮತದಾರರು ಜಿಲ್ಲೆಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ಸಂಖ್ಯೆ ಯಲ್ಲಿ 18 ವರ್ಷ ತುಂಬಿದ ಬಳಿಕ ತಾವಾಗಿಯೇ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡವರೂ ಇದ್ದಾರೆ.

ಕಳೆದ ವರ್ಷ 42 ಮಂದಿ ಲಿಂಗತ್ವ ಅಲ್ಪ ಸಂಖ್ಯಾಕರು ಮತದಾನ ಮಾಡಿ ದ್ದರು. ಈ ಸಂಖ್ಯೆಯನ್ನು ಇನ್ನೂ ಹೆಚ್ಚಳ ಮಾಡಬೇಕೆಂಬ ನಿಟ್ಟಿನಲ್ಲಿ ಲಿಂಗತ್ವ ಅಲ್ಪ ಸಂಖ್ಯಾಕರನ್ನು ಸಂಪ ರ್ಕಿಸಿ ಮತ ದಾರರ ಪಟ್ಟಿಯಲ್ಲಿ ಹೆಸರು ಸೇರಿ ಸಲು ಅರಿವು ಮೂಡಿಸಲಾಗಿತ್ತು. ಇದರ ಭಾಗ ವಾಗಿ ಈ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಮಂದಿ ಲಿಂಗತ್ವ ಅಲ್ಪಸಂಖ್ಯಾಕರು ಮತ ದಾನ ಮಾಡಿದ್ದಾರೆ. ನಗರದಲ್ಲಿ ಐದು ಸಖೀ ಮತಗಟ್ಟೆಗಳನ್ನು ಅಲಂಕರಿಸಲಾಗಿತ್ತು. ಆಯ್ದ ಐದು ಮತಗಟ್ಟೆಗಳಿಗೆ ಪಾರಂಪರಿಕ ಸ್ಪರ್ಶ, ಮೂರು ಮತಗಟ್ಟೆಗಳನ್ನು ಅಂಗವಿ ಕಲರಿಗಾಗಿ ಮೀಸಲಿಡಲಾಗಿತ್ತು.

ಸಾಮಾಜಿಕ ತಾಣಗಳ ಸಮರ್ಥ ಬಳಕೆ
ವಿಶೇಷವೆಂದರೆ, ಸ್ವೀಪ್‌ ಸಮಿತಿಯು ಸಾಮಾಜಿಕ ತಾಣಗಳ ಮೂಲಕವೇ ಮತದಾನದ ಜಾಗೃತಿ ಕಾರ್ಯ ನಡೆಸಿದ್ದು, ಇದಕ್ಕೆ ಯುವ ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಟ್ವಿಟರ್‌, ವಾಟ್ಸಾಪ್‌ಗ್ಳಲ್ಲಿ ಮತದಾನದ ಮಹತ್ವದ ಬಗ್ಗೆ ಬರೆಹಗಳನ್ನು ಪ್ರಚುರಪಡಿಸಲಾಗಿತ್ತು. ಎ. 18ರಂದು ಸ್ವೀಪ್‌ನ ಫೇಸುºಕ್‌ ಪೇಜ್‌ನಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಮತದಾನ ಮಾಡಲು ಇರುವ ಸಮಯವನ್ನು ಪ್ರಕಟಿಸಿ ಯುವಕರನ್ನು ಮತದಾನಕ್ಕೆ ಶೀಘ್ರ ತೆರಳುವಂತೆ ಪ್ರೇರೇಪಿಸಲಾಗಿತ್ತು.

ಹೆಮ್ಮೆಯಾಗಿದೆ
ವಿದ್ಯಾರ್ಥಿ ಜೀವನದಲ್ಲಿ ಚುನಾವಣ ಕೆಲಸದಲ್ಲಿ ಭಾಗವಹಿಸಿದ್ದೆನೆ ಎಂಬುದು ಖುಷಿಯ ವಿಚಾರ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮತದಾನ ಅರಿವು ಮೂಡಿಸುವುದು, ಜತೆಗೆ ಬೀದಿ ನಾಟಕಗಳ ಮುಖಾಂತರ ಜನರಲ್ಲಿ ಮತದಾನ ಜಾಗೃತಿ ಮೂಡಿಸುವುದರಲ್ಲಿ ತೊಡಗಿ ಸಿಕೊಂಡಿದ್ದೇನೆ. ಜಿಲ್ಲಾ ಸ್ವೀಪ್‌ ಸಮಿತಿ, ಕ್ಯಾಂಪಸ್‌ ರಾಯಭಾರಿಗಳ ಪಾತ್ರ ಚುನಾ ವಣೆಯಲ್ಲಿ ಬಹಳ ಇದೆ ಎಂಬು ದಕ್ಕೆ ಈ ಬಾರಿ ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಳ ವಾಗಿರುವುದೇ ಸ್ಪಷ್ಟವಾದ ನಿದರ್ಶನ.
 - ಸುದೇಶ್‌ ಮಾಣಿಲ,
ಸ್ವೀಪ್‌ ಕ್ಯಾಂಪಸ್‌ ರಾಯಭಾರಿ, ಅಲೋಶಿಯಸ್‌ ಸಂಧ್ಯಾ ಕಾಲೇಜು ವಿದ್ಯಾರ್ಥಿ,

 ಪ್ರಯತ್ನದಿಂದ ಮತದಾನ ಹೆಚ್ಚಳ
ಸ್ವೀಪ್‌ ಸಮಿತಿಯು ಮತದಾರ ರನ್ನು ಸೆಳೆಯಲು ಶಕ್ತಿ ಮೀರಿ ಪ್ರಯತ್ನ ನಡೆಸಿದೆ. ಮತದಾನ ಜಾಗೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬಹುತೇಕ ಜನರನ್ನು ತಲುಪಲಾಗಿದೆ. ನಿಗದಿತ ಗುರಿ ತಲುಪಲು ಸಾಧ್ಯವಾಗದಿದ್ದರೂ ಈ ಪ್ರಯತ್ನವಾಗಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಿದೆ.
 - ಡಾ| ಸೆಲ್ವಮಣಿ ಆರ್‌.,
ಅಧ್ಯಕ್ಷರು, ದ.ಕ. ಜಿಲ್ಲಾ ಸ್ವೀಪ್‌ ಸಮಿತಿ

–  ಧನ್ಯಾ ಬಾಳೆಕಜೆ


ಈ ವಿಭಾಗದಿಂದ ಇನ್ನಷ್ಟು

 • ಏಟು ತಿಂದ ಬೋರ್‌ವೆಲ್‌ಮೇಲ್ವಿಚಾರಕ ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಬೋರ್‌ವೆಲ್‌ ಕಾಮಗಾರಿಯ ಮೇಲ್ವಿಚಾರಣೆ...

 • ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರವಿವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಗುಡುಗು ಸಹಿತ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಜಿಲ್ಲೆಯ...

 • ಕಟೀಲು: ಕಟೀಲು ದೇವಿಯ ಪುಣ್ಯ ಸನ್ನಿಧಿಯಲ್ಲಿ ರವಿವಾರ 71 ಜೋಡಿಗಳು ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬೆಳಗ್ಗೆ 8.45ರಿಂದ...

 • ಮಂಗಳೂರು: ರೇಷನಿಂಗ್‌ ಪ್ರಕಾರ ಸೋಮವಾರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರ ವರೆಗೆ ನಗರದಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಮೇ 16ರ ಬೆಳಗ್ಗೆ 6ರಿಂದ ಮೇ 20ರ...

 • ಮಹಾನಗರ: ನೀರಿನ ಕೊರತೆ ಇದೀಗ ಕರಾವಳಿಯ ಪ್ರತಿಷ್ಠಿತ ಉದ್ಯಮ ಎಂಆರ್‌ಪಿಎಲ್‌ಗ‌ೂ (ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌) ಬಹುವಾಗಿ ಕಾಡುತ್ತಿದೆ....

ಹೊಸ ಸೇರ್ಪಡೆ

 • ಗದಗ: ವಿಕಲಚೇತನರ ಪಾಲಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಓಡಿಸುವುದಕ್ಕಿಂತ ನಿಲ್ಲಿಸಿದಾಗ ತಿರುಗಿಸುವುದೇ ದೊಡ್ಡ ಸವಾಲು. ದಿವ್ಯಾಂಗರ ಈ ಸಮಸ್ಯೆಗೆ...

 • ಯಾದಗಿರಿ: ನಗರ ರೈಲ್ವೆ ನಿಲ್ದಾಣದಲ್ಲಿ ಶೌಚಾಲಯ ಮಲದ ಗುಂಡಿಗಿಳಿದು ಕಾರ್ಮಿಕನೊಬ್ಬ ಪೈಪ್‌ಲೈನ್‌ ಸ್ವಚ್ಛಗೊಳಿಸಿರುವ ಅಮಾನವೀಯ ವರದಿಯನ್ನು ಮಾರ್ಚ್‌ 27ರಂದು...

 • ಕೋಲಾರ: ವಿದ್ಯಾರ್ಥಿಗಳಿಗೆ ಉದ್ಯೋಗದ ಜೊತೆಗೆ ಸಾಧನೆ ಮಾಡಲು ಆತ್ಮವಿಶ್ವಾಸ ಬಹಳ ಮುಖ್ಯವಾಗಿದೆ ಎಂದು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ...

 • ಶಿರಹಟ್ಟಿ: ಸಮಾಜದ ಸ್ವಾಸ್ಥ್ಯ ಕಾಪಾಡಲು ಧರ್ಮ ಮತ್ತು ಮಠಮಾನ್ಯಗಳೇ ಕಾರಣವಾಗಿದ್ದು, ಸಮಾಜದ ಜನತೆ ಇದನ್ನೇ ನಂಬಿ ಮಠಗಳಿಗೆ ಗೌರವ ನೀಡುತ್ತಿವೆ. ಮಠಾಧಿಧೀಶರು...

 • ಕೋಲಾರ: ಕಂದಾಯ ಮತ್ತು ಸರ್ವೇ ಇಲಾಖೆ ರೈತರ ರಕ್ತ ಹೀರುತ್ತಿದ್ದು, ಇವೆರಡೂ ಇಲಾಖೆ ಸರಿಪಡಿಸಿದರೆ ಮಾತ್ರ ಭ್ರಷ್ಟಾಚಾರ ಎನ್ನುವುದು ಶೇ.5 ಹತೋಟಿಗೆ ಬಂದು ಜನಸಾಮಾನ್ಯರು...

 • ಏಟು ತಿಂದ ಬೋರ್‌ವೆಲ್‌ಮೇಲ್ವಿಚಾರಕ ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಹಂಡೇಲು ಶಾಲೆಯ ಬಳಿ ಸರಕಾರಿ ಜಾಗದಲ್ಲಿ ಬೋರ್‌ವೆಲ್‌ ಕಾಮಗಾರಿಯ ಮೇಲ್ವಿಚಾರಣೆ...