ಮಕ್ಕಳಲ್ಲಿ ತರಕಾರಿ ಬಿತ್ತನೆ ಆಸಕ್ತಿ ಮೂಡಿಸಿದ ಶಿಕ್ಷಕರು


Team Udayavani, Nov 11, 2018, 10:47 AM IST

11-november-4.gif

ಕುಂಟಾರು: ಕುಂಟಾರು ಎ.ಯು.ಪಿ. ಶಾಲಾ ಮಕ್ಕಳಿಗೆ ಪಾಠದ ಜತೆಗೆ ತರಕಾರಿ ಬಿತ್ತನೆಯ ಬೋಧನೆಯೂ ಸಿಕ್ಕಿದೆ. ಇಂತಹ ಪ್ರಯೋಗಕ್ಕೆ ಮುಂದಾಗಿದ್ದು ಕುಂಟಾರು ಶಾಲಾ ಶಿಕ್ಷಕ – ಶಿಕ್ಷಕಿಯರು. ಮಕ್ಕಳಲ್ಲಿ ವಿಶಿಷ್ಟ ಅಭಿರುಚಿಯನ್ನು ಮೂಡಿಸಲು ಶಾಲಾ ವಠಾರದಲ್ಲಿ ತರಕಾರಿ ತೋಟವನ್ನು ನಿರ್ಮಾಣ ಮಾಡಲಾಗಿದೆ.

ಶಾಲೆಗೆ ಮೀಸಲಾಗಿರುವ ಸುಮಾರು 50 ಸೆಂಟ್ಸ್‌ ಜಾಗದಲ್ಲಿ ಈ ತರಕಾರಿ ತೋಟವನ್ನು ನಿರ್ಮಿಸಲಾಗಿದೆ. ಕಾರಡ್ಕ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಕೆಲಸವನ್ನು ಶಾಲೆಯ ಅಭಿವೃದ್ಧಿ ಕೆಲಸಕ್ಕೆ ಮೀಸಲಿಟ್ಟಿತ್ತು. ಈ ಮೂಲಕ ತರಕಾರಿ ತೋಟದ ಯೋಜನೆ ರೂಪುಗೊಂಡಿತು.

ತಡೆಬೇಲಿಯೂ ನಿರ್ಮಾಣ
ಉದ್ಯೋಗ ಖಾತರಿ ಯೋಜನೆಯ 100 ದಿನಗಳ ಕೆಲಸದಲ್ಲಿ ಶಾಲೆಯ ತರಕಾರಿ ತೋಟಕ್ಕೆ ಬೇಕಾದ ಸ್ಥಳವನ್ನು ಸಮತಟ್ಟು ಮಾಡಿ ಹದಗೊಳಿಸಲಾಯಿತು. ತರಕಾರಿ ಬೀಜಗಳನ್ನು ನೆಡಲು ಸಾಲುಗಳಲ್ಲಿ ಸಣ್ಣ ಗುಂಡಿಗಳನ್ನು ಮಾಡಿ ವ್ಯವಸ್ಥಿತವಾಗಿ ನಿರ್ಮಿಸಲಾಯಿತು. ತೋಟದ ಸುತ್ತ ಪ್ರಾಣಿಗಳ ಹಾವಳಿ ತಪ್ಪಿಸಲು ಬೇಲಿ ಹಾಕಲಾಯಿತು.

ಇಲಾಖೆಯಿಂದ ಸಹಾಯಧನ
ಕೃಷಿ ಇಲಾಖೆಯಿಂದ 5,000 ರೂ. ಸಹಾಯಧನದ ಜತೆಗೆ ತೋಟಕ್ಕೆ ಬೇಕಾದ ಟೊಮೆಟೊ, ಬದನೆಕಾಯಿ, ಮೆಣಸು, ಬೆಂಡೆಕಾಯಿ ಲಭಿಸಿತು. ಇತರ ಬೀಜಗಳನ್ನು ಗ್ರಾಮಸ್ಥರಿಂದ ಸಂಗ್ರಹಿಸಲಾಯಿತು. ಜುಲೈ ತಿಂಗಳ ಕೊನೆ ವಾರದಲ್ಲಿ ಶಾಲಾ ಮಕ್ಕಳಿಂದ ಬೀಜ ಬಿತ್ತನೆ ಕಾರ್ಯ ನಡೆಸಲಾಯಿತು.

ಉತ್ತಮ ಫ‌ಸಲು
ಬೀಜ ಬಿತ್ತನೆ ಅನಂತರ ತೋಟಕ್ಕೆ ಸೊಪ್ಪು, ಹಟ್ಟಿ ಗೊಬ್ಬರ ವನ್ನು ಗ್ರಾಮಸ್ಥರು ಸಹಿತ ಶಾಲಾ ಮಕ್ಕಳು, ಸಿಬಂದಿ ಹಾಕಿದರು. ದಿನನಿತ್ಯ ನೀರು ಹಾಕುತ್ತಿದ್ದುದರಿಂದ ತರಕಾರಿ ಗಿಡಗಳು ಉತ್ತಮವಾಗಿ ಬೆಳೆದವು. ಅಷ್ಟರಲ್ಲಿ ರೋಗ ಬಾಧೆ ಎದುರಾದ ಕಾರಣ ಅನಿವಾರ್ಯವಾಗಿ ಔಷಧ ಸಿಂಪಡಿಸಲಾಯಿತು. ರೋಗ ಹತೋಟಿಗೆ ಬಂದಾಗ, ಮತ್ತೆ ಕೋಳಿ ಗೊಬ್ಬರವನ್ನು ತೋಟಕ್ಕೆ ಹಾಕಲಾಯಿತು. ಚಿಗುರೊಡೆದ ಗಿಡಗಳು ಮತ್ತಷ್ಟು ಹುಲುಸಾಗಿ ಬೆಳೆದವು. ಪ್ರಸ್ತುತ ಉತ್ತಮ ಫ‌ಸಲು ಲಭಿಸುತ್ತಿದೆ.

ಬಾಳೆ ಫ‌ಸಲು ನಿರೀಕ್ಷೆಯಲ್ಲಿ
ತರಕಾರಿ ತೋಟದಲ್ಲಿ ತರಕಾರಿ ಮಾತ್ರವಲ್ಲದೆ ಬಾಳೆಗಿಡಗಳನ್ನು ಕೂಡ ಬೆಳೆಯಲಾಗುತ್ತಿದೆ. ಸುಮಾರು 50 ಬಾಳೆ ಗಿಡಗಳನ್ನು ನೆಡಲಾಗಿದೆ. ಮುಂಬರುವ ವರ್ಷದಲ್ಲಿ ಫ‌ಸಲು ಬರಬಹುದು ಎನ್ನುವ ನಿರೀಕ್ಷೆ ಇರಿಸಲಾಗಿದೆ. ಮಕ್ಕಳಲ್ಲಿ ಸ್ವಾವಲಂಬನೆ ಬೆಳೆಸುವುದಕ್ಕೋಸ್ಕರ ತರಕಾರಿ ತೋಟ ಪ್ರಾರಂಭಿಸಲಾಯಿತು. ಶಾಲೆಯ ತರಕಾರಿ ವೆಚ್ಚ ಕಡಿಮೆಯಾಗಿದೆ. ಮಕ್ಕಳಿಗೆ ವಿಷರಹಿತ ತರಕಾರಿ ಸೇವನೆ ನಡೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳುತ್ತಾರೆ ಶಾಲಾ ಶಿಕ್ಷಕ-ಶಿಕ್ಷಕಿಯರು.

ಮಕ್ಕಳಿಂದ ತರಕಾರಿ ಕೊಯ್ಲು
ತರಕಾರಿ ತೋಟದಲ್ಲಿ ಬದನೆಕಾಯಿ, ಮುಳ್ಳುಸೌತೆ, ಬೆಂಡೆಕಾಯಿ, ಚೀನಿ ಕಾಯಿ, ಕುಂಬಳಕಾಯಿ, ಟೊಮೆಟೊ, ಬಸಳೆ, ಹರಿವೆ, ಅಲಸಂಡೆ, ಮೆಣಸು, ತೊಂಡೆಕಾಯಿ ಮೊದಲಾದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ವಾರದಲ್ಲಿ 2 ದಿನ ಶಾಲಾ ಮಕ್ಕಳು ಸೇರಿ ತರಕಾರಿ ಕೊಯ್ಲು ಮಾಡುತ್ತಿದ್ದಾರೆ. ಅದನ್ನು ಶಾಲೆಯ ಮಧ್ಯಾಹ್ನದ ಊಟಕ್ಕೆ ಬಳಸುತ್ತಾರೆ. ಇಂತಹ ಅದ್ಭುತ ಕಾರ್ಯಕ್ಕೆ ಶಾಲೆಯ ವ್ಯವಸ್ಥಾಪಕರು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘ, ಕೃಷಿ ಇಲಾಖೆಯವರು ಸಹಕಾರ ನೀಡಿದ್ದಾರೆ.

ಸ್ವಾವಲಂಬನೆ‌ ಉದ್ದೇಶ
ಶಾಲಾ ಮಕ್ಕಳಲ್ಲಿ ಸ್ವಾವಲಂಬನೆ ಬೆಳೆಸುವುದು ಈ ತರಕಾರಿ ತೋಟದ ಉದ್ದೇಶವಾಗಿದೆ. ಶಾಲೆಯ ಎಲ್ಲ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಪೋಷಣೆಯ ಕಾರ್ಯವನ್ನೂ ಅವರು ನಡೆಸುತ್ತಾರೆ. ಉತ್ತಮ ಫ‌ಸಲು ಬರುತ್ತಿದೆ. ತರಕಾರಿಗಳನ್ನು ಮಕ್ಕಳ ಭೋಜನಕ್ಕೆ ಬಳಸಲಾಗುತ್ತಿದೆ.
– ಪ್ರಶಾಂತ್‌
ಮುಖ್ಯೋಪಾಧ್ಯಾಯರು

ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.