ಚಾಲಕನ ನಿಯಂತ್ರಣ ತಪ್ಪಿ ನದಿ ಬದಿಗೆ ಚಲಿಸಿದ ವ್ಯಾನ್: ತಪ್ಪಿದ ಅನಾಹುತ

Team Udayavani, Oct 23, 2019, 8:53 PM IST

ಸುಳ್ಯ : ಮಾಣಿ - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಬಳಿಯ ಕಲ್ಚೆರ್ಪೆ ಪಾಲಡ್ಕ ಮಧ್ಯೆ ವ್ಯಾನೊಂದು ಚಾಲಕನ ನಿಯಂತ್ರಣ ತಪ್ಪಿ ಪಯಸ್ವಿನಿ ನದಿ ಬದಿಗೆ ಸಂಚರಿಸಿ ಕೂದಳಲೆಯಂತರದಿಂದ ಪಾರಾಗಿ ಭಾರೀ ಅನಾಹುತವೊಂದು ತಪ್ಪಿದ ವಿದ್ಯಾಮಾನ ಬುಧವಾರ ಸಂಜೆ ಸಂಭವಿಸಿದೆ.

ಪ್ರಯಾಣಿಕರಿದ್ದ ವ್ಯಾನ್ ನದಿ ಬದಿಯಲ್ಲಿ ನಿಂತು ಮುಂದಕ್ಕೆ ಚಲಿಸಲಿಲ್ಲ. ಈ ಕಾರಣ ಭಾರೀ ಅಪಾಯವೊಂದು ತಪ್ಪಿತು. ಘಟನಾ ಸ್ಥಳದಲ್ಲಿ ನೂರಾರು ಮಂದಿ‌ ನೆರೆದಿದ್ದರು.

ಅತೀ ವೇಗ ಕಾರಣ..!
ಪೆರಾಜೆಯ ಕಲ್ಚರ್ಪೆ ಬಳಿಯ ಚೆಂಬುವಿಗೆ ಸಂಚರಿಸುತ್ತಿದ್ದ ಸರ್ವಿಸ್ ವ್ಯಾನ್ ಅಪಘಾತಕ್ಕೆ ಈಡಾಗಲು ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣವೆಂದು ಪ್ರಯಾಣಿಕರು ಹೇಳಿದ್ದಾರೆ.

ಬುಧವಾರ ಬದಲಿ ಚಾಲಕರೊಬ್ಬರು ವ್ಯಾನ್ ಚಲಾಯಿಸುತ್ತಿದ್ದು ವ್ಯಾನ್ ನಲ್ಲಿ ಕಿಕ್ಕಿರಿದು ಪ್ರಯಾಣಿಕರು ತುಂಬಿದ್ದರು. ಪರಿವಾರ ಕಾನದ ಬಳಿ ಸ್ಕೂಟಿಯನ್ನು ಓವರ್ ಟೇಕ್ ಮಾಡುವಾಗ ಆ ಸ್ಕೂಟಿ ಸವಾರರು ವ್ಯಾನ್ ನಡಿಗೆ ಬೀಳುವುದು ಕೂದಲೆಳೆಯ ಅಂತರದಲ್ಲಿ ತಪ್ಪಿತೆಂದು ಪ್ರಯಾಣಿಕರು ಹೇಳುತ್ತಾರೆ.

ಪೆರಾಜೆಯ ಕಲ್ಚರ್ಪೆ ಬಳಿ ಓವರ್ ಸ್ಪೀಡ್ ನಿಂದಾಗಿ ವ್ಯಾನ್ ನಿಯಂತ್ರಣ ತಪ್ಪಿ ಬಲ ಬದಿಗೆ ಹೋಗಿ ನದಿಗೆ ಬೀಳುವುದರಲ್ಲಿತ್ತು. ಮುಂಭಾಗದ ಎರಡು ಚಕ್ರಗಳು ರಸ್ತೆಯ ಬದಿಯ ಕಲ್ಲಿನ ಗೋಡೆ ದಾಟಿತ್ತು ಆದರೆ ನಡು ಭಾಗ ಮತ್ತು ಹಿಂಬದಿ ಚಕ್ರಗಳು ಆ ಕಲ್ಲು ಕಟ್ಟಿದ ಪಾಗಾರದಲ್ಲಿ ಸಿಲುಕಿಕೊಂಡಿದ್ದರಿಂದ ವ್ಯಾನ್ ನದಿಗೆ ಉರುಳಲಿಲ್ಲ. ನದಿಯಲ್ಲಿ ಸಾಕಷ್ಟು ನೀರು ತುಂಬಿದ್ದು, ಈ ಭಾಗ ಸಾಕಷ್ಟು ಇದ್ದ ಅಳ ಕಾರಣ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ