ಕೊನೆಯ ಕ್ಷಣದ ತೀರ್ಮಾನ ನಮ್ಮನ್ನು ಬದುಕಿಸಿತು: ವೇಣೂರು ದಂಪತಿ


Team Udayavani, Apr 23, 2019, 6:30 AM IST

kone-kshana

ಮಂಗಳೂರು: “ಮದುವೆ ವಾರ್ಷಿಕೋತ್ಸವ ಆಚರಿಸುವುದಕ್ಕೆ ಹೋಗಿದ್ದ ನಾವು ಶ್ರೀಲಂಕಾದ “ದಿ ಸಿನೆಮನ್‌ ಗ್ರಾÂಂಡ್‌’ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟ್ರಾವೆಲ್‌ ಏಜೆನ್ಸಿಯವರು ಸಮೀಪದ ಮತ್ತೂಂದು ಹೊಟೇಲ್‌ನಲ್ಲಿ ವಾಸ್ತವ್ಯ ನೀಡಿದ್ದ ಕಾರಣಕ್ಕೆ ನಮ್ಮಿಬ್ಬರ ಜೀವ ಉಳಿದಿದೆ’.

ಶ್ರೀಲಂಕಾದಲ್ಲಿ ಸಂಭವಿಸಿರುವ ಸರಣಿ ಸ್ಫೋಟದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಮೂಲದ ಡಾ| ಕೇಶವ ರಾಜ್‌-ಶ್ರೀದೇವಿ ದಂಪತಿ, ಆ ದಿನದ ಭಯಾನಕ ಸನ್ನಿವೇಶವನ್ನು “ಉದಯವಾಣಿ’ ಜತೆಗೆ ಹಂಚಿಕೊಂಡಿದ್ದು ಹೀಗೆ.

ದಂಪತಿ ಎ. 21ರಂದು ಮುಂಜಾನೆ “ದಿ ಸಿನೆಮನ್‌ ಗ್ರಾÂಂಡ್‌’ ಪಂಚತಾರಾ ಹೊಟೇಲ್‌ನಲ್ಲಿ ತಂಗಬೇಕಿತ್ತು. ಆದರೆ ಕೊನೆಕ್ಷಣದಲ್ಲಿ “ಕ್ಲಾರಿಯಾನ್‌ ಹಬ್‌’ ಹೊಟೇಲ್‌ಗೆ ವಾಸ್ತವ್ಯ ಬದಲಾಗಿತ್ತು. ಈ ಹೊಟೇಲ್‌ಗೆ ತೆರಳಿ ಸುಮಾರು 4 ಗಂಟೆಯ ಬಳಿಕ ಸಿನೆಮನ್‌ ಹೊಟೇಲ್‌ನಿಂದ ದೊಡ್ಡ ಶಬ್ದ ಕೇಳಿಸಿತು. ಅದು ಬಾಂಬ್‌ ಎಂದು ಅರಿವಾದಾಗ ದಂಪತಿಗೆ ಒಮ್ಮೆಲೇ ದಿಗ್ಭ್ರಮೆಯಾಗಿದ್ದು, ಸದ್ಯ “ನಾವು ಬದುಕುಳಿದೆವು’ ಎಂದು ನಿಟ್ಟುಸಿರು ಬಿಟ್ಟರು.ಇನ್ನೂ ಅವರಿಂದ ಆತಂಕ ದೂರವಾಗಿಲ್ಲ.

ಮಂಗಳವಾರ ಭಾರತಕ್ಕೆ ವಾಪಾಸ್‌ ಆಗುವ ಸಾಧ್ಯತೆಯಿದೆ.

ಮಂಗಳೂರಿನ ಶರಬತ್ತು ಕಟ್ಟೆಯಲ್ಲಿರುವ ಶ್ರೀ ವೇದಂ ಆಯುರ್ವೇ ದಿಕ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಾಲಕರೂ ಆಗಿರುವ ಡಾ| ಕೇಶವ ರಾಜ್‌ ಶ್ರೀಲಂಕಾದಲ್ಲಿ ನಡೆದಿರುವ ಹೃದಯವಿದ್ರಾವಕ ಅಮಾಯಕ ಜೀವಗಳ ಮಾರಣಹೋಮದ ಸನ್ನಿ ವೇಶಗಳನ್ನು ಕಣ್ಣಾರೆ ನೋಡಿದ್ದು, ಘಟನೆಗಳ ಬಗ್ಗೆ ಅವರು ಪತ್ರಿಕೆ ಜತೆಗೆ ಮಾತನಾಡಿದ್ದಾರೆ.

“ನಾನು ಮತ್ತು ಪತ್ನಿ ಟೂರ್‌ ಪ್ಯಾಕೇಜ್‌ ಮೂಲಕ ಪ್ರವಾಸ ಕೈಗೊಂಡಿದ್ದು, ಎ. 20ರಂದು ಮಂಗಳೂರಿನಿಂದ ಬೆಂಗಳೂ ರಿಗೆ ಹೋಗಿ ಅಲ್ಲಿಂದ ವಿಮಾನದಲ್ಲಿ ಚೆನ್ನೆ  ç ಮಾರ್ಗವಾಗಿ ಕೊಲಂ ಬೋಕ್ಕೆ ಪ್ರಯಾ ಣಿಸಿದ್ದೆವು. ರವಿವಾರ ಬೆಳಗ್ಗೆ 4.30ಕ್ಕೆ ಕೊಲಂಬೊ ವಿಮಾನ ನಿಲ್ದಾಣ ತಲು ಪಿದೆವು. “ದಿ ಸಿನೆಮನ್‌ ಗ್ರಾÂಂಡ್‌ ಹೊಟೇಲ್‌’ನಲ್ಲೇ ತಂಗಬೇಕಿದ್ದ ನಾವು ಕೊನೆಯ ಕ್ಷಣದಲ್ಲಿ ವಾಸ್ತವ್ಯ ಬದಲಾಯಿಸಿದ್ದರಿಂದ ಬಚಾವಾದೆವು. ಆ ದೇವರೇ ನಮ್ಮನ್ನು ರಕ್ಷಿಸಿದ್ದು’ ಎನ್ನುತ್ತಾರೆ ಡಾ| ಕೇಶವ ರಾಜ್‌.

“9 ಗಂಟೆ ಸುಮಾರಿಗೆ ದೂರ ದಿಂದ ಭೀಕರ ಶಬ್ದ ಕೇಳಿಸಿತು. ಕೆಲವೇ ನಿಮಿಷಗಳಲ್ಲಿ ರಸ್ತೆಯಲ್ಲಿ ಆ್ಯಂಬು ಲೆನ್ಸ್‌, ಪೊಲೀಸ್‌ ವಾಹನಗಳು ಧಾವಿಸುವುದನ್ನು ಗಮನಿಸಿದೆವು. ಪ್ರವಾಸಿ ಮಾರ್ಗದರ್ಶಿಯ ಮೂಲಕ ಬಾಂಬ್‌ ಸ್ಫೋಟದ ವಿಷಯ ತಿಳಿಯಿತು’ ಎಂದರು.

ಊರಿನಲ್ಲಿ ಆತಂಕ
ಸರಣಿ ಸ್ಫೋಟದ ಬಳಿಕ ಡಾ| ಕೇಶವ ರಾಜ್‌ ಇದ್ದ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇಂಟರ್‌ನೆಟ್‌ ರದ್ದುಗೊಳಿಸಲಾಗಿತ್ತು. ಇದರಿಂದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದ ವೀಕ್ಷಣೆ ಸಾಧ್ಯವಾಗುತ್ತಿರಲಿಲ್ಲ.

ಇತ್ತ ಮಾಧ್ಯಮಗಳ ಮೂಲಕ ವಿಷಯ ತಿಳಿದ ಊರಿನಲ್ಲಿರುವ ಕೇಶವ ರಾಜ್‌ ಅವರ ಮನೆ ಮಂದಿ, ಸಂಬಂಧಿಕರು ಗಾಬರಿಯಲ್ಲಿದ್ದರು.

ಮೊಬೈಲ್‌ ಸಂಪರ್ಕ ಕಡಿತ
ಮೊಬೈಲ್‌ ಸಂಪರ್ಕವೂ ಸಾಧ್ಯವಾ ಗುತ್ತಿರಲಿಲ್ಲ. ಕೊನೆಗೆ ರವಿವಾರ ಸಂಜೆ ವೇಳೆಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿತ್ತು. ಅಣ್ಣ ಮತ್ತು ಅತ್ತಿಗೆ ಕ್ಷೇಮವಾಗಿದ್ದಾರೆ ಅಂದಾಗ ಆತಂಕ ಸ್ವಲ್ಪ ದೂರವಾಯಿತು’ ಎನ್ನುತ್ತಾರೆ ಡಾ| ಕೇಶವ ರಾಜ್‌ ಅವರ ತಮ್ಮ ಕಾರ್ತಿಕ್‌ ರಾಜ್‌.

ಇಂದು ಭಾರತಕ್ಕೆ
ಶ್ರೀಲಂಕಾದ ಪ್ರವಾಸಿ ತಾಣ ಗಳನ್ನು ವೀಕ್ಷಿಸಿ ಎ. 24ರಂದು ಭಾರತಕ್ಕೆ ವಾಪಸ್‌ ಬರುವುದೆಂದು ಯೋಜಿಸಿದ್ದೆವು. ಆದರೆ ಪರಿಸ್ಥಿತಿ ಬೇರೆಯದೇ ಆಯಿತು. ದೇವರ ದಯದಿಂದ ನಾವು ಬದುಕಿದ್ದೇವೆ. ಕೊಲಂಬೋದಿಂದ ಭಾರತಕ್ಕೆ ಸೋಮವಾರ ವಿಮಾನ ಹಾರಾಟವಿಲ್ಲ. ಮಂಗಳವಾರ ಸ್ವದೇಶಕ್ಕೆ ವಾಪಸಾಗುತ್ತಿದ್ದೇವೆ.
– ಡಾ| ಕೇಶವ ರಾಜ್‌

ಸ್ಫೋಟ ಘಟನೆ ತಿಳಿದು ಗಾಬರಿಯಾದೆವು. ಕೂಡಲೇ ಅಣ್ಣನನ್ನು ಸಂಪರ್ಕಿಸಲು ಪ್ರಯತ್ನಿಸಿ ದೆವಾದರೂ ಸಾಧ್ಯವಾಗಿಲ್ಲ. ಕೊನೆಗೂ ಸಂಜೆ ವೇಳೆಗೆ ಅಣ್ಣನಿಗೆ ಕರೆ ಸಿಕ್ಕಿ ಅವರು ಕ್ಷೇಮವಾಗಿದ್ದಾನೆ ಎಂದು ತಿಳಿದು ನಿರಾಳವಾಯಿತು.
– ಕಾರ್ತಿಕ್‌ ರಾಜ್‌, ಸಹೋದರ

ಟಾಪ್ ನ್ಯೂಸ್

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.