ಈ ವಾರ್ಡ್‌ನಲ್ಲಿ ಹಳೆಯ ಒಳಚರಂಡಿ, ಫ‌ುಟ್‌ಪಾತ್‌ನದ್ದೇ ಸಮಸ್ಯೆ


Team Udayavani, Oct 29, 2019, 4:00 AM IST

x-31

ಮಹಾನಗರ: ನಗರದ‌ ಹೃದಯಭಾಗದ ಪ್ರದೇಶಗಳನ್ನು ಒಳಗೊಂಡಿರುವ ಶಿವಭಾಗ್‌ ವಾರ್ಡ್‌ (ವಾರ್ಡ್‌ 34) ವಾಣಿಜ್ಯ ಕೇಂದ್ರಗಳ ಜತೆಗೆ ಪ್ರತಿಷ್ಠಿತ ವಸತಿ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಶತಮಾನದ ಇತಿಹಾಸವನ್ನು ಹೊಂದಿರುವ ಬೆಂದೂರು ಸೈಂಟ್‌ ಸೆಬಾ ಸ್ಟಿಯನ್‌ ಚರ್ಚ್‌, ಬಾಲಯೇಸು ಪುಣ್ಯಕ್ಷೇತ್ರ, ನಾಯರ್‌ಲೇನ್‌ ಸಿದ್ಧಿವಿನಾಯಕ ದೇವಸ್ಥಾನ, ಇಸ್ಕಾನ್‌ ಮಂದಿರ, ಸೈಂಟ್‌ ಆಗ್ನೇಸ್‌ ಶಿಕ್ಷಣ ಸಂಸ್ಥೆಗಳು, ಸೈಂಟ್‌ ತೆರೇಸಾ ವಿದ್ಯಾಸಂಸ್ಥೆಗಳನ್ನು ಒಳಗೊಂಡಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲೊಂದಾಗಿರುವ ಕದ್ರಿ ಮಾರುಕಟ್ಟೆ ಈ ವಾರ್ಡ್‌ ನಲ್ಲಿದೆ. ಬೃಹತ್‌ ವಸತಿ ಸಮುಚ್ಚಯಗಳು, ಪ್ರಮುಖ ವಾಣಿಜ್ಯ ಮಳಿಗೆಗಳನ್ನು ಒಳಗೊಂಡಿರುವ ಈ ವಾರ್ಡ್‌ನ ಪ್ರಮುಖ ರಸ್ತೆಗಳು ಸದಾ ವಾಹನ ದಟ್ಟಣೆಯಿಂದಲೂ ತುಂಬಿವೆ.

ವಾರ್ಡ್‌ ಬಹುತೇಕ ನಗರ ಪ್ರದೇಶವನ್ನು ಒಳಗೊಂಡಿರುವುದರಿಂದ ಇಲ್ಲಿನ ಹೆಚ್ಚಿನ ರಸ್ತೆಗಳು ಅಭಿವೃದ್ದಿಯಾಗಿವೆ. ಆದರೆ ಹಳೆಯ ಒಳಚರಂಡಿ ವ್ಯವಸ್ಥೆ ಈ ವಾರ್ಡ್‌ನಲ್ಲಿ ಒಂದಷ್ಟು ಸಮಸ್ಯೆ ನಿರ್ಮಿಸಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಬೆಂದೂರ್‌ನಲ್ಲಿ ಸೈಂಟ್‌ ಆಗ್ನೇಸ್‌ ಕಾಲೇಜು ಬಳಿ ಬಸ್‌ನಿಲ್ದಾಣ ನಿರ್ಮಾಣವಾಗಿದೆ. ಕದ್ರಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ವ್ಯಾಪಾರಸ್ಥರಿಗೆ ತಾತ್ಕಾಲಿಕ ಅಂಗಡಿ ನಿರ್ಮಾಣ ಮಾಡಿ ಸ್ಥಳಾಂತರಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಮಹಾನಗರ ಪಾಲಿಕೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4 ಕೋಟಿ ರೂ. ಬಿಡುಗಡೆಯಾಗಿದೆ. ವಾರ್ಡ್‌ನಲ್ಲಿ ಹೆಚ್ಚಿನ ರಸ್ತೆಗಳು, ಫುಟ್‌ಪಾತ್‌ಗಳು ಉನ್ನತೀಕರಣವಾಗಿವೆ. ಆದರೆ ಮಳೆಗಾಲದಲ್ಲಿ ಒಳಚರಂಡಿಗಳು ತುಂಬಿ ಮಲಿನ ನೀರು ರಸ್ತೆಯಲ್ಲೇ ಹರಿಯುವುದರಿಂದ ಸಮಸ್ಯೆ ಆಗುತ್ತಿದೆ. ಪಾರ್ಕಿಂಗ್‌ ಸಮಸ್ಯೆಯಿಂದ ಕೆಲವು ಬಾರಿ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಮಸ್ಯೆಉಂಟಾಗುತ್ತದೆ. ಈ ಬಾರಿಯೂ ಈ ವಾರ್ಡ್‌ ಮಹಿಳಾ ಸಾಮಾನ್ಯ ವರ್ಗ ಮೀಸಲಾತಿ ಹೊಂದಿದೆ.

ಈ ವಾರ್ಡ್‌ನಲ್ಲಿ ಹೆಚ್ಚಿನ ರಸ್ತೆಗಳು ಅಭಿವೃದ್ಧಿಯಾಗಿವೆ. ಆದರೆ ಒಳಚರಂಡಿ ಸಮಸ್ಯೆ ಇದೆ. ಒಳಚರಂಡಿಗೆ ಮಳೆ ನೀರು ಬಿಡುವುದರಿಂದ ಕೆಲವು ಕಡೆ ಮ್ಯಾನ್‌ಹೋಲ್‌ಗ‌ಳು ತುಂಬಿ ರಸ್ತೆಯಲ್ಲೇ ಮಲಿನ ನೀರು ಹರಿದು ಸಮಸ್ಯೆಗಳಾಗುತ್ತಿವೆ. ಕೆಲವು ಕಡೆ ಫುಟ್‌ಪಾತ್‌ ಕಾಮಗಾರಿಗಳು ಬಾಕಿ ಇವೆ. ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಿ ಸುಮಾರು 3 ತಿಂಗಳು ಸಮೀಪಿಸುತ್ತಿದ್ದರೂ ಕದ್ರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲೇ ಉಳಿದುಕೊಂಡಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಯೋರ್ವರು.

ರಾಜಕೀಯ ಹಿನ್ನೋಟ
ಪ್ರತಿಷ್ಠಿತ ರೆಸಿಡೆನ್ಸಿಯಲ್‌ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ ನಂ. 34 ಶಿವಭಾಗ್‌ ಕಾಂಗ್ರೆಸ್‌ ಪಾರಮ್ಯವನ್ನು ಮೆರೆಯುತ್ತಾ ಬಂದಿರುವ ಕ್ಷೇತ್ರ. ಕಳೆದ ಅವಧಿಯಲ್ಲಿ ಈ ವಾರ್ಡ್‌ ಸಾಮಾನ್ಯ ಮಹಿಳಾ ಮೀಸಲಾತಿ ಹೊಂದಿತ್ತು. ಈ ಬಾರಿಯೂ ಅದೇ ಮೀಸಲಾತಿ ಮುಂದುವರಿದಿದೆ. ಕಳೆದ ಅವಧಿಯ ಕಾರ್ಪೊರೇಟರ್‌ ಸಬಿತಾ ಮಿಸ್ಕಿತ್‌ಗಿಂತ ಮೊದಲು ಕಾಂಗ್ರೆಸ್‌ನ ಗ್ರೆಟ್ಟಾ ರೆಬೆಲ್ಲೊ ಈ ಕ್ಷೇತ್ರದ ಕಾರ್ಪೊರೇಟರ್‌ ಆಗಿದ್ದರು. ಕಳೆದ ಬಾರಿ ಕಾಂಗ್ರೆಸ್‌ ಇಲ್ಲಿ ಸಮೀಪದ ಸ್ಪರ್ಧಿ ಬಿಜೆಪಿಗಿಂತ 620 ಮತಗಳ ಅಂತರಿದಂದ ಜಯ ಸಾಧಿಸಿತ್ತು.

ಶಿವಭಾಗ್‌ ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಕದ್ರಿ ಮಾರುಕಟ್ಟೆ ಪ್ರದೇಶದಿಂದ ಆರಂಭಗೊಂಡು, ಲೋಬೋ ಲೇನ್‌ನ ಒಂದು ಪಾರ್ಶ್ವ, ಬೆಂದೂರು ಸೈಂಟ್‌ಆಗ್ನೇಸ್‌ ಕಾಲೇಜು, ಶಿವಭಾಗ್‌, ಮರ್ಕೆರಾ ಹಿಲ್‌, ಇಎಸ್‌ಐ ಆಸ್ಪತ್ರೆ ಪ್ರದೇಶ, ಲೋವರ್‌ ಬೆಂದೂರು ಭಾಗ, ತಾರತೋಟದ ಪ್ರದೇಶದ ಒಂದು ಭಾಗ, ಬಿಕರ್ನಕಟ್ಟೆ ನಾಯರ್‌ ಲೇನ್‌ ಪ್ರದೇಶ, ಬಾಲಯೇಸು ಪುಣ್ಯ ಕ್ಷೇತ್ರ ಪ್ರದೇಶ ಮುಂತಾದ ಪ್ರದೇಶಗಳನ್ನು ಶಿವಭಾಗ್‌ ವಾರ್ಡ್‌ ಒಳಗೊಂಡಿದೆ.

ಒಟ್ಟು ಮತದಾರರು 6978
ನಿಕಟಪೂರ್ವ ಕಾರ್ಪೊರೇಟರ್‌-ಸಬಿತಾ ಮಿಸ್ಕಿತ್‌

2013ರ ಚುನಾವಣೆ ಮತ ವಿವರ
ಕಾಂಗ್ರೆಸ್‌: ಸಬಿತಾ ಮಿಸ್ಕಿತ್‌: 1431
ಬಿಜೆಪಿ: ಸಂಧ್ಯಾ ವೆಂಕಟೇಶ: 811
ಜೆಡಿ ಎ ಸ್‌: ಜ್ಯುಡಿತ್‌ ಡಿ’ಸೋಜಾ: 223
ಪಕ್ಷೇತರ: ಗೀತಾ ಬಿ.ಶೆಟ್ಟಿ: 37

-  ಕೇಶವ ಕುಂದರ್‌

ಟಾಪ್ ನ್ಯೂಸ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.