Udayavni Special

ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜನ ಹವಾ


Team Udayavani, May 6, 2018, 6:50 AM IST

0505rjh6.jpg

ನಗರ: ಹಣ್ಣುಗಳ ಮಾರುಕಟ್ಟೆಯಲ್ಲಿ ಎಪ್ರಿಲ್‌ ಅಂತ್ಯದ ವರೆಗೆ ಇತರ ಹಣ್ಣುಗಳಿಗೆ ಬೇಡಿಕೆ ಯಾದರೆ ಆಮೇಲೆ ಹಣ್ಣುಗಳ ರಾಜ ಮಾವಿನದ್ದೇ ಹವಾ!

ಒಂದೆರಡು ಮಳೆ ಸುರಿಯಲು ಆರಂಭಿಸಿದರೆ ಇತರ ಹಣ್ಣು – ಹಂಪಲುಗಳಿಗೆ ಬೇಡಿಕೆ ಕುಸಿದು ಮಾವಿನ ಸೀಸನ್‌ ಆರಂಭವಾಗುತ್ತದೆ. ಪುತ್ತೂರಿನ ಮಾರುಕಟ್ಟೆಯಲ್ಲಿ ಈಗ ತಮಿಳುನಾಡಿನಿಂದ ಬರುವ ಬಂಗನ ಪಳ್ಳಿ, ಬೆನೆಟ್‌ ಅಲೊ#àನ್ಸಾ, ಮುಂಡಪ್ಪ, ತೋತಾಪುರಿ, ಬಾದಾಮಿ, ನೀಲಂ, ಸಕ್ಕರೆ ಮಾವು (ಸಕ್ಕರೆ ಕುಟ್ಟಿ), ರಸಪೂರಿ, ಮಲ್ಲಿಕಾ, ಕಾಳಪ್ಪಾಡಿ, ರತ್ನಗಿರಿ ಅಲೊ#àನ್ಸಾ ಮಾವಿನ ಹಣ್ಣುಗಳು ಪ್ರವೇಶಿಸುತ್ತಿವೆ.

ಹೊರಭಾಗದ ಅವಲಂಬನೆ
ಹಣ್ಣುಗಳ ಪೂರೈಕೆಯ ವಿಚಾರದಲ್ಲಿ ತಮಿಳುನಾಡು, ಆಂಧ್ರ ಹಾಗೂ ಕರ್ನಾಟಕದ ಕೋಲಾರ ಮತ್ತು ಬೆಂಗಳೂರನ್ನು ಇಲ್ಲಿನ ವ್ಯಾಪಾರಿಗಳು ಅವಲಂಬಿಸಬೇಕಾಗಿದೆ. ಸ್ಥಳೀಯವಾಗಿ ಇಲ್ಲಿ ಮಾವಿನ ಹಣ್ಣುಗಳನ್ನು ವ್ಯಾಪಾರದ ದೃಷ್ಟಿಯಿಂದ ಬೆಳೆಸುವುವವರಿಲ್ಲ. ಸ್ಥಳೀಯವಾದ ನೆಕ್ಕರೆ, ಕಾಟು ಮಾವಿನಹಣ್ಣು ಸಹಿತ ಕೆಲವೊಂದು ತಳಿಗಳಷ್ಟೇ ಇಲ್ಲಿ ಲಭ್ಯವಿವೆ.

ಪೂರೈಕೆ ಹೀಗಿದೆ
ಪುತ್ತೂರಿನ ಮಾರುಕಟ್ಟೆಗೆ ಸೀಸನ್‌ ಆರಂಭದ ಅವಧಿಯಲ್ಲಿ ವಾರಕ್ಕೆ 30 ಟನ್‌ಗಳಷ್ಟು ಮಾವಿನ ಹಣ್ಣುಗಳು ಪೂರೈಕೆಯಾಗುತ್ತವೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಈ ಪ್ರಮಾಣ ಏರಿಕೆಯಾಗುತ್ತದೆ. ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಹಣ್ಣು ಹಂಪಲು ಅಂಗಡಿಗಳಿಗೆ ಪುತ್ತೂರಿನಿಂದ ಮಾವಿನ ಹಣ್ಣುಗಳು ಪೂರೈಕೆಯಾಗುತ್ತವೆ. ಪುತ್ತೂರು ನಗರದಲ್ಲಿ ರಖಂ ಮತ್ತು ಚಿಲ್ಲರೆಯಾಗಿ ಮಾವಿನ ಹಣ್ಣುಗಳ ಮಾರಾಟ ಮಾಡುವ 20ಕ್ಕೂ ಹೆಚ್ಚು ಅಂಗಡಿಗಳಿವೆ.

ಪ್ರಸ್ತುತ ಧಾರಣೆ
ಮಾರುಕಟ್ಟೆಯಲ್ಲಿ ಮಾವುಗಳ ಮಾರಾಟ ಸೀಸನ್‌ ಆರಂಭದ ಹಂತದಲ್ಲಿರುವುದರಿಂದ ಬೇಡಿಕೆ ಹೆಚ್ಚಿದೆ. ಬಹು ಬೇಡಿಕೆಯ ಬಂಗನಪಲ್ಲಿ ಮಾವಿನ ಹಣ್ಣಿಗೆ ಈಗ ಕೆ.ಜಿ.ಗೆ 100 -120 ರೂ. ಇದೆ. ಮುಂಡಪ್ಪ ಮಾವಿನ ಹಣ್ಣಿಗೆ 120 ರೂ., ಬಾದಾಮಿ ಮಾವಿನ ಹಣ್ಣಿಗೆ 100 ರೂ., ತೋತಾಪುರಿ ಮಾವಿನ ಹಣ್ಣಗೆ ಕೆ.ಜಿ.ಗೆ 100 ರೂ., ಆಪೂಸ್‌ ಮಾವಿನ ಹಣ್ಣಿಗೆ 150 ರೂ., ಸಕ್ಕರೆ ಕುಟ್ಟಿ 120 ರೂ., ರಸಪುರಿಗೆ 140 ರೂ., ನೀಲಂ 120 ರೂ., ಬಡಾಪೈರಿ 120 ರೂ., ಕಾಳಪಾಡಿ 160 ರೂ. ಧಾರಣೆ ಇದೆ. ಮಲ್ಲಿಕಾ ಮಾವಿನ ಹಣ್ಣು ಬೇಗನೆ ಮಾರುಕಟ್ಟೆಗೆ ಬಂದಿರುವುದರಿಂದ ಆರಂಭಿಕ ಹಂತದಲ್ಲೇ 160 ರೂ.ಗೆ ಮಾರಾಟವಾಗುತ್ತಿದೆ.

ಜೂನ್‌ಗೆ ಬರಲಿವೆ ರತ್ನಗಿರಿ, ನೀಲಂ
ರತ್ನಗಿರಿ ಅಲೊ#àನ್ಸಾ, ಮಲ್ಗೊàವಾ, ರಸಪೂರಿ ಮಾವಿನ ಹಣ್ಣು ಜೂನ್‌ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ರುಚಿಯಲ್ಲಿ ಉತ್ಕೃಷ್ಟ ಸ್ಥಾನ ಹೊಂದಿರುವ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿರುವ ಮತ್ತು ವಿದೇಶಿ ರಾಷ್ಟ್ರಗಳಿಗೆ ರಫ್ತಾಗುವ ಗುಣಮಟ್ಟದ ಮಾವಿನ ಹಣ್ಣು ಮಹಾರಾಷ್ಟ್ರ ರಾಜ್ಯದಲ್ಲಿ ಬೆಳೆಯುವ ರತ್ನಗರಿ ಅಲೊ#àನ್ಸಾದ ದರ ಕೆ.ಜಿ.ಯೊಂದರ 500 ರೂ. ಮೇಲ್ಪಟ್ಟು ಇರುತ್ತದೆ. ಮಾವಿನ ಹಣ್ಣುಗಳ ಸೀಸನ್‌ನಲ್ಲಿ ಕೊನೆಗೆ ಅಂದರೆ ಜೂನ್‌ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ಮಾವಿನ ಹಣ್ಣು ಚಿತ್ತೂರು ನೀಲಂ.
ಮಂಗಳೂರು ರಸಪೂರಿ ಎಂದು ಹಾಸನ, ಮೈಸೂರುಗಳಲ್ಲಿ ಬೇಡಿಕೆ ಇರುವ ನೆಕ್ಕರೆ ಮಾವಿನ ಹಣ್ಣು ಈ ಬಾರಿ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಫಸಲು ತೀರಾ ಕಡಿಮೆ ಇರುವ ಕಾರಣ ಈ ಪರಿಸ್ಥಿತಿ ಉಂಟಾಗಿದೆ. ಸಣ್ಣ ಗಾತ್ರದ ಕಾಟು ಮಾವಿನ ಹಣ್ಣುಗಳ ಪ್ರಮಾಣ ಕೂಡ ತೀರಾ ಕಡಿಮೆಯಾಗಿದೆ.

ಬಂದಿದೆ ಸಕ್ಕರೆ ಕುಟ್ಟಿ
ಮಾರುಕಟ್ಟೆಗೆ ಮೇ ತಿಂಗಳಲ್ಲಿ ಲಗ್ಗೆಯಿಡುವ ಅತ್ಯಂತ ಬೇಡಿಕೆಯ ಮಾವಿನ ಹಣ್ಣು ಸಕ್ಕರೆ ಮಾವು (ಸಕ್ಕರೆ ಕುಟ್ಟಿ). ಅತ್ಯಂತ ಸಿಹಿ ರುಚಿಯ ಸಣ್ಣ ಗಾತ್ರದ ಸಕ್ಕರೆ ಕುಟ್ಟಿ ಮಾವಿನ ಹಣ್ಣು ಶುಭ ಸಮಾರಂಭದಲ್ಲಿ ಮೆಣಸುಕಾಯಿ ತಯಾರಿಸಲು, ಶರಬತ್ತು ತಯಾರಿಸಲು ಹೆಚ್ಚು ಬಳಕೆಯಾಗುತ್ತದೆ. ಈ ವರ್ಷ ಆರಂಭಿಕ ಧಾರಣೆಯೇ ಕೆ. ಜಿ.ಗೆ 120 ರೂ. ಇದೆ.

 ಮಳೆ ಬಂದರೆ ಬೇಡಿಕೆ ಜಾಸ್ತಿ
ಸದ್ಯಕ್ಕೆ ಮಾವಿನ ಹಣ್ಣಿಗೆ ಬೇಡಿಕೆ ಕಡಿಮೆ ಇದೆ. ಒಂದೆರಡು ಮಳೆ ಬಂದ ಕೂಡಲೇ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಸಾಧಾರಣವಾಗಿ ಎಲ್ಲ ಜಾತಿಗಳ ಮಾವುಗಳನ್ನು ಇಲ್ಲಿಗೆ ತರಿಸುತ್ತೇವೆ.
– ಸರಾಫುದ್ದೀನ್‌
ಹಣ್ಣಿನ ವ್ಯಾಪಾರಿ, ಪುತ್ತೂರು

-  ರಾಜೇಶ್‌ ಪಟ್ಟೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ: ಇಲ್ಲಿದೆ ಆಕರ್ಷಕ ಫೋಟೋಗಳು

dgp

ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ, ಕಳ್ಳನಂತೆ ಅಲ್ಲ, ಸಿಂಹದಂತೆ!: ಬಿಹಾರ ಮಾಜಿ DGP ಪಾಂಡೆ

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟ ರಾಕ್ ಲೈನ್ ಸುಧಾಕರ್ ನಿಧನ

ಭ್ರಷ್ಟಾಚಾರ ಆರೋಪ: ಸಿಎಂ ಬಿಎಸ್ ವೈ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಭ್ರಷ್ಟಾಚಾರ ಆರೋಪ:ಸಿಎಂ ಬಿಎಸ್ ವೈ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಡ್ರಗ್ಸ್‌ ತನಿಖಾ ಮಾಹಿತಿ ಲೀಕ್‌: ಎಸಿಪಿ ಸೇರಿ ಇಬ್ಬರ ಅಮಾನತು

ಉಪ್ಪಿನಂಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಉಪ್ಪಿನಂಗಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ

ಹಿರಿಯ ವಿದ್ವಾಂಸ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪ್ಪಿನಂಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಉಪ್ಪಿನಂಗಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಶಾಲಾ ಖಾತೆಗೆ ಹಣ ಬಂದರೂ ಎಲ್‌ಕೆಜಿ ಅತಿಥಿ ಶಿಕ್ಷಕರಿಗೆ ತಲುಪದ ವೇತನ

ಶಾಲಾ ಖಾತೆಗೆ ಹಣ ಬಂದರೂ ಎಲ್‌ಕೆಜಿ ಅತಿಥಿ ಶಿಕ್ಷಕರಿಗೆ ತಲುಪದ ವೇತನ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

rn-tdy-1

ಆಸ್ತಿ ದಾಖಲೆ ಪಡೆದುಕೊಳ್ಳಲು ನಾರಾಯಣಪ್ಪ ಸಲಹೆ

ತುಂಗಭದ್ರಾ ನದಿಗೆ ನಿರ್ಮಿಸಿದ್ದ ರಸ್ತೆ ಮೇಲ್ಸೇತುವೆ ಕುಸಿತ ; ಆತಂಕದಲ್ಲಿ ವಾಹನ ಸವಾರರು

ತುಂಗಭದ್ರಾ ನದಿಗೆ ನಿರ್ಮಿಸಿದ್ದ ರಸ್ತೆ ಮೇಲ್ಸೇತುವೆ ಕುಸಿತ ; ಆತಂಕದಲ್ಲಿ ವಾಹನ ಸವಾರರು

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ: ಇಲ್ಲಿದೆ ಆಕರ್ಷಕ ಫೋಟೋಗಳು

100 ಕಾರುಗಳನ್ನು ನೇಪಾಳಕ್ಕೆ ಸಾಗಿಸಿದ ನೈರುತ್ಯ ರೈಲೆ

100 ಕಾರುಗಳನ್ನು ನೇಪಾಳಕ್ಕೆ ಸಾಗಿಸಿದ ನೈರುತ್ಯ ರೈಲೆ

ಕಲ್ಲು-ಮರ- ಲೋಹದ ವಸ್ತುಗಳಿಗೆ ಜೀವ ತುಂಬುವ ಬಹುಮುಖ ಪ್ರತಿಭೆ ಮಾನಪ್ಪ ಬಡಿಗೇರ

ಕಲ್ಲು-ಮರ- ಲೋಹದ ವಸ್ತುಗಳಿಗೆ ಜೀವ ತುಂಬುವ ಬಹುಮುಖ ಪ್ರತಿಭೆ ಮಾನಪ್ಪ ಬಡಿಗೇರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.