Udayavni Special

ದ.ಕ.: ಕೋವಿಡ್‌ ಪರೀಕ್ಷೆಗೆ ಏಕರೂಪ ದರವಿಲ್ಲ 

Team Udayavani, May 7, 2021, 5:00 AM IST

ದ.ಕ.: ಕೋವಿಡ್‌ ಪರೀಕ್ಷೆಗೆ ಏಕರೂಪ ದರವಿಲ್ಲ 

ಮಹಾನಗರ: ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ಆಸ್ಪತ್ರೆಗಳಲ್ಲಿ ಏಕರೂಪ ದರವನ್ನು ಕೇಂದ್ರ ಸರಕಾರ ನಿಗದಿಪಡಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಜಿಲ್ಲೆಯಲ್ಲಿ ದಿನೇದಿನೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಮುಂಜಾಗ್ರತೆಯಾಗಿ ಪರೀಕ್ಷೆ ಮಾಡಿ ಸುವವರ ಸಂಖ್ಯೆಯೂ ಹೆಚ್ಚಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಉಚಿತ ವಾಗಿದ್ದರೂ ಫ‌ಲಿತಾಂಶ ತಡವಾಗುತ್ತಿದೆ ಎಂಬ ಕಾರಣಕ್ಕೆ ಅನೇಕರು ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಇಲ್ಲಿ ಎಷ್ಟು  ದರ ಪಾವತಿಸಬೇಕೆಂಬ ಮಾಹಿತಿಯೂ ಇಲ್ಲ ಎಂಬುದು ಹಲವರ ಅಭಿಪ್ರಾಯ.

ಆರ್‌ಟಿಪಿಸಿಆರ್‌ ಪರೀಕ್ಷೆಗೆ 800 ರೂ. ನಿಗದಿ ಪಡಿಸಲಾಗಿದ್ದು, ಕೆಲವೆಡೆ  ಬಿಲ್‌ನಲ್ಲಿ 800 ರೂ. ಎಂದು ನಮೂದಿಸಿ, ಪ್ರತೀ ಪರೀಕ್ಷೆಗೂ 2ರಿಂದ 3 ಸಾವಿರ ರೂ. ವರೆಗೆ ಪಡೆಯುತ್ತಿವೆ ಎಂಬ ದೂರುಗಳಿವೆ. ಹೆಚ್ಚುವರಿ ವಸೂಲಿಗೆ ಕಾರಣ ಕೇಳಿದರೆ, ಗಂಟಲ ದ್ರವದ ಮಾದರಿಯನ್ನು ಮಂಗಳೂರಿಗೆ ಕಳುಹಿಸಲು ಖರ್ಚು-ವೆಚ್ಚವಿರು ವುದರಿಂದ ಹೆಚ್ಚುವರಿ ಹಣ ನೀಡಬೇಕು ಎನ್ನುತ್ತಿದ್ದಾರೆ ಎಂಬ ಆರೋಪವಿದೆ.

ಪ್ರತೀ ದಿನ 5ರಿಂದ 6 ಸಾವಿರ ಪರೀಕ್ಷೆ :

ಸರಕಾರಿ ವಲಯದಲ್ಲಿ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆಯ ಜತೆಗೆ ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಲ್ಲಿ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗುತ್ತದೆ. ಜಿಲ್ಲೆಯ 10  ಪ್ರಯೋಗಾಲಯದಲ್ಲಿ ಈ ಪರೀಕ್ಷೆ ನಡೆಸಲಾ ಗುತ್ತದೆ. ಪ್ರತೀ ದಿನ ಸರಾಸರಿ 5ರಿಂದ 6 ಸಾವಿರ ತಪಾಸಣೆ ನಡೆಸಲಾಗುತ್ತಿದೆ. ಕೆಲವು ದಿನಗಳಿಂ ದೀಚೆಗೆ ತಪಾಸಣೆ ಚುರುಕಾಗಿದ್ದು, ಸರಕಾರಿ ವಲ ಯದಲ್ಲಿ ಪರೀಕ್ಷೆಯ ಫ‌ಲಿತಾಂಶ ಬರಲು 3-4 ದಿನ ಬೇಕು. ವೆನಾÉಕ್‌ ಆಸ್ಪತ್ರೆಯಲ್ಲಿ ಒತ್ತಡದ ಪರಿಣಾಮ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಸರಕಾರಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿರುವುದು ವಿಳಂಬಕ್ಕೆ ಕಾರಣ. ಖಾಸಗಿ ಆಸ್ಪತ್ರೆಗಳಲ್ಲಾದರೆ ತ್ವರಿತವಾಗಿ ಫ‌ಲಿತಾಂಶ ಲಭಿಸುತ್ತದೆ.

ಹೆಚ್ಚು ದರ ವಿಧಿಸಿದರೆ ಹೀಗೆ ಮಾಡಿ :

ಆರ್‌ಟಿಪಿಸಿಆರ್‌ ಪರೀಕ್ಷೆಗೆ ಕೇಂದ್ರ ಸರಕಾರ ದರ (800 ರೂ.) ನಿಗದಿಪಡಿಸಿದೆ. ಯಾರೂ ಅದಕ್ಕಿಂತ ಹೆಚ್ಚಿನ ದರ ವಸೂಲಿ ಮಾಡು ವಂತಿಲ್ಲ. ವಸೂಲಿ ಮಾಡಿದರೆ ಸಂತ್ರಸ್ತರು ಸೂಕ್ತ ದಾಖಲೆಗಳೊಂದಿಗೆ ಆರೋಗ್ಯ ಇಲಾಖೆಯನ್ನು ಸಂಪರ್ಕಿಸ ಬಹುದು. ಅದನ್ನು ಪರಿಶೀಲಿಸಿ ದೋಷ ಪೂರಿತವಾಗಿದ್ದರೆ  ಕಠಿನ ಕ್ರಮ ಕೈಗೊಳ್ಳಲಿದೆ. ಕೊರೊನಾ ಮೊದಲ ಅಲೆಯ ಸಂದರ್ಭ ದಲ್ಲೂ ಕೆಲವು ದೂರು ಬಂದಿದ್ದವು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಕೇಂದ್ರ ಸರಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಮೊತ್ತ ಪಡೆಯಲು ಅವಕಾಶ ಇಲ್ಲ. ದುಪ್ಪಟ್ಟು ದರ ವಿಧಿಸುತ್ತಿರುವುದು ಸಾರ್ವಜನಿಕರ ಗಮನಕ್ಕೆಬಂದರೆ ಸೂಕ್ತ ದಾಖಲೆ ನೀಡಿ ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ದೂರು ನೀಡಿದರೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು.  -ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ

ಟಾಪ್ ನ್ಯೂಸ್

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಯಾವುದೇ ಅನುಮಾನವಿಲ್ಲ, ಹೊರಗಿನಿಂದ ಬಂದವರಿಂದಲೇ ಸರ್ಕಾರ ಬಂದಿದೆ: ಅಶ್ವಥ್ ನಾರಾಯಣ

ಯಾವುದೇ ಅನುಮಾನವಿಲ್ಲ, ಹೊರಗಿನಿಂದ ಬಂದವರಿಂದಲೇ ಸರ್ಕಾರ ಬಂದಿದೆ: ಅಶ್ವಥ್ ನಾರಾಯಣ

698545

‘ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ 25 ವಸಂತಗಳ ಸಂಭ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

banking frauds

“ಬ್ಯಾಂಕ್‌ ಖಾತೆ ಬ್ಲಾಕ್‌’ ಸಂದೇಶ: ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಹಣ ದೋಚುವ ವಂಚಕರು!

ಮರವೂರು ಸೇತುವೆ ಬಿರುಕು: ಬಜಪೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಇಲ್ಲಿದೆ ರಸ್ತೆ ಮಾಹಿತಿ

ಮರವೂರು ಸೇತುವೆ ಬಿರುಕು: ಬಜಪೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಇಲ್ಲಿದೆ ರಸ್ತೆ ಮಾಹಿತಿ

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

dfghjhgfdsdfgh

ಬಂಟ್ವಾಳ : ಟ್ಯಾಂಕರ್, ಆಂಬ್ಯುಲೆನ್ಸ್ ,ಬೈಕ್ ನಡುವೆ ಅಪಘಾತ

ಜೂನ್‌ 15ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಜೂನ್‌ 15ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

MUST WATCH

udayavani youtube

ಕಷಾಯ ಸೇವಿಸುವ ಸರಿಯಾದ ವಿಧಾನ ನಿಮಗೆ ಗೊತ್ತಿತ್ತಾ?

udayavani youtube

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

ಹೊಸ ಸೇರ್ಪಡೆ

15bgv-11

ಪೊಲೀಸರ ಮೇಲೆ ಹಲ್ಲೆ-ಗುಂಪು ಪರಾರಿ

15bgv4

ಸಮಾಜ-ಸಮಾಜ ಸೇವೆ ಅರ್ಥೈಸಿಕೊಳ್ಳಿ

98

ಮುಂಗಾರು ಆರ್ಭಟ; ಮತ್ತೆ ನೆರೆ ಕಾಟ

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.