ಕೊಳವೆ ಬಾವಿ ಬಳಸಲು ‘ಯೋಗ’ವೇ ಇಲ್ಲ!

ನೆಕ್ರಾಜೆ, ಬಾಣಪದವು ಪರಿಸರದಲ್ಲಿ ದಶಕಗಳಿಂದ ನೀರಿನ ಸಮಸ್ಯೆ

Team Udayavani, May 13, 2019, 6:02 AM IST

1205RJH1B

ಬಾವಿ ಇದ್ದರೂ ಪೈಪ್‌ ಮೂಲಕ ನೀರು ತರಿಸಿಕೊಳ್ಳುವ ಅನಿವಾರ್ಯತೆ.

ಪುತ್ತೂರು: ಈ ಭಾಗದಲ್ಲಿ ಇರುವ ಒಂದೆರಡು ಬಾವಿಗಳು ಫೆಬ್ರವರಿ ತಿಂಗಳಲ್ಲೇ ಬತ್ತಿ ಹೋಗುತ್ತವೆ. ಗ್ರಾ.ಪಂ.ನ ನಳ್ಳಿ ನೀರಿನ ಸಂಪರ್ಕವೇ ಇಲ್ಲ. ಮೂರು ದಶಕಗಳ ಹಿಂದಿನಿಂದಲೂ ಈ ಜನರು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಕೊಳವೆ ಬಾವಿ ಕೊರೆಸಿ ಭರಪೂರ ನೀರು ಸಿಕ್ಕಿ 4 ವರ್ಷವಾದರೂ ಅದರ ಫಲ ಪಡೆಯುವ ದಿನ ಬಂದಿಲ್ಲ.

ಇದು ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ನೆಕ್ರಾಜೆ, ಬಾಣಪದವು ಪರಿಸರದ ಜನತೆ ಹಲವು ದಶಕಗಳಿಂದ ಎದುರಿಸುತ್ತಿರುವ ಸಮಸ್ಯೆ. ಈ ಪರಿಸರದಲ್ಲಿ 25ಕ್ಕೂ ಹೆಚ್ಚು ಮನೆಗಳಲ್ಲಿ 80ಕ್ಕೂ ಮಿಕ್ಕಿ ಜನರಿದ್ದಾರೆ. ಕೂಲಿ ಮಾಡಿ ಬದುಕು ಸಾಗಿಸುವ ಇವರಿಗೆ ಸ್ವಂತ ಬಾವಿ ಅಥವಾ ಕೊಳವೆ ಬಾವಿ ಕೊರೆಸುವ ಶಕ್ತಿ ಇಲ್ಲ. ಪರಿ ಣಾಮವಾಗಿ ಬೇಸಗೆಯಲ್ಲಿ ಇವರ ನೀರಿನ ಬವಣೆ ನಿತ್ಯ ನಿರಂತರ ಎನ್ನುವಂತಾಗಿದೆ.

ಬಾಡಿಗೆ ನೀರು
ಒಂದಷ್ಟು ಎತ್ತರ ಪ್ರದೇಶದಲ್ಲಿರುವ ಬಾಣಪದವು ಜನತೆ ಸದ್ಯಕ್ಕೆ ಬಾಡಿಗೆ ನೀರನ್ನು ಆಶ್ರಯಿಸಿ ದ್ದಾರೆ. ಸ್ಥಳೀಯರೊಬ್ಬರ ನೀರಿನ ಆಶ್ರಯದಿಂದ ಸಣ್ಣ ಗಾತ್ರದ ಪೈಪ್‌ಗ್ಳನ್ನು ಕಿಲೋಮೀಟರ್‌ ದೂರದ ಮನೆಯವರೆಗೆ ಅಳವಡಿಸಿ ಅಲ್ಲಿಂದ ನೀರು ಪಡೆಯುತ್ತಿದ್ದಾರೆ.

ಫೆ. 10ರಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಜತೆಗೆ ವಿದ್ಯುತ್‌ ಇದ್ದರೂ ಲೋ ವೋಲ್ಟೇಜ್ ಸಮಸ್ಯೆ ಇದೆ. ಫ್ಯಾನ್‌ ಕೂಡ ತಿರುಗುವುದಿಲ್ಲ ಎನ್ನುತ್ತಾರೆ ಬಾಣಪದವು ನಿವಾಸಿ ರವಿಶಂಕರ್‌.

ನೀರು ಸಿಕ್ಕಿದರೂ ಸಿಗದ ಫ‌ಲ!
ಈ ಪರಿಸರದಲ್ಲಿ ಬೇಸಗೆಗೆ ಕುಡಿಯುವ ನೀರಿಗೆ ಉಂಟಾಗುವ ತತ್ವಾರ ಮತ್ತು ಜನರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ತಾ.ಪಂ. ಸದಸ್ಯರ ಅನುದಾನದಿಂದ 4 ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಲಾಯಿತು. ನೀರು ಉಕ್ಕಿ ಹರಿಯಿತು. 4.5 ಇಂಚಿನಷ್ಟು ಭರಪೂರ ನೀರು ಸಿಕ್ಕಿತು. ಇನ್ನೇನು ಕುಡಿಯುವ ನೀರಿನ ಸಮಸ್ಯೆ ನೀಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ಇದುವರೆಗೂ ನೀರಿನ ಫಲ ಪಡೆಯಲು ಸಾಧ್ಯವಾಗಿಲ್ಲ. ಗುಡ್ಡದ ಮೇಲೆ ದೊಡ್ಡ ಟ್ಯಾಂಕ್‌ ನಿರ್ಮಿಸಿ ಅದಕ್ಕೆ ನೀರು ಹರಿಸಿ ಪೈಪ್‌ ಮೂಲಕ ಹರಿಸುವುದಾಗಿ ನೀಡಿದ ಭರವಸೆ ಆಗಿಲ್ಲ.

ಪಂಪ್‌ ಅಳವಡಿಕೆ, ಟ್ಯಾಂಕ್‌ ನಿರ್ಮಾಣ, ವಿದ್ಯುತ್‌ ಪರಿವರ್ತಕ, ಮನೆಗಳಿಗೆ ಪೈಪ್‌ಲೈನ್‌ ಹಾಕಲು ಸೇರಿದಂತೆ 7-8 ಲಕ್ಷ ರೂ. ಹಣ ಬೇಕು. ಸ್ಥಳೀಯಾಡಳಿತದಲ್ಲಿ ಇಷ್ಟೊಂದು ಹಣ ಭರಿಸಲು ಸಾಧ್ಯವಾಗದೇ ಇರುವುದರಿಂದ ಜಿ.ಪಂ., ಶಾಸಕರ ಅನುದಾನ ಬೇಕಾಗುತ್ತದೆ ಎನ್ನುವುದು ಗ್ರಾ.ಪಂ. ಆಡಳಿತದ ಅಭಿಪ್ರಾಯ.

ಚುನಾವಣ ಭರವಸೆ ಮಾತ್ರ
ಗ್ರಾ.ಪಂ.ನ ಪೈಪ್‌ಲೈನ್‌ ವ್ಯವಸ್ಥೆ ಇಲ್ಲಿಗೆ ತಲುಪಿಲ್ಲ. ಪ್ರತಿ ಬಾರಿ ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಸಮಸ್ಯೆ ಬಗೆಹರಿದಿಲ್ಲ. ನಮ್ಮ ಸಮಸ್ಯೆ ಚುನಾವಣ ಸಂದರ್ಭದ ಭರವಸೆಗೆ ಮಾತ್ರ ಸೀಮಿತವಾಗಿದೆ ಎಂದು ನೆಕ್ರಾಜೆಯ ರಘುನಾಥ ಹೇಳುತ್ತಾರೆ.

ನೆನೆದರೆ ಸಂಕಟವಾಗುತ್ತದೆ
ಕುಗ್ರಾಮಕ್ಕಿಂತಲೂ ಕಡೆಯ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಬೇಸಗೆ ಆರಂಭವಾಯಿತೆನ್ನುವುದನ್ನು ನೆನೆದರೆ ಸಂಕಟವಾಗುತ್ತದೆ. ದಿನ ಬೆಳಗಾದರೆ ನೀರಿಗಾಗಿ ಪರಿತಪಿಸಬೇಕಾಗುತ್ತದೆ ಎಂದು ಬಾಣಪದವು ನಿವಾಸಿ ಮಹೇಶ್‌ ನಾಯಕ್‌ ಹೇಳುತ್ತಾರೆ.

ವ್ಯವಸ್ಥೆಗೆ ಸಮಸ್ಯೆ
ತಾ.ಪಂ. ಅನುದಾನದಿಂದ ಕೊಳವೆ ಬಾವಿ ಕೊರೆಸಲಾಗಿದೆ. ಪೈಪ್‌ ಅಳವಡಿಸಲು ಜಿ.ಪಂ.ನಿಂದ ಸದಸ್ಯೆ 1.60 ಲಕ್ಷ ರೂ. ಅನುದಾನ ನೀಡಿದ್ದಾರೆ.

ನಿವಾಸಿಗಳ ಬೇಡಿಕೆ
– ಕೊರೆಸಿದ ಕೊಳವೆ ಬಾವಿಗೆ ಶೀಘ್ರ ಪಂಪ್‌ ಅಳವಡಿಸಿ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿ.
-ಲೋ ವೋಲ್ಟೇಜ್ ವಿದ್ಯುತ್‌ ಸಮಸ್ಯೆ ಸರಿಪಡಿಸಿ.
– ಮೂಲ ಆವಶ್ಯಕತೆಯಾದ ಸಮರ್ಪಕ ರಸ್ತೆ ವ್ಯವಸ್ಥೆ ಕಲ್ಪಿಸಿ.

ಸಮಸ್ಯೆಗೆ ಶೀಘ್ರ ಪರಿಹಾರ
ಈ ಭಾಗದ ಜನರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಾ.ಪಂ.ನಿಂದ ಕೊಳವೆಬಾವಿ ಕೊರೆಸಿ ನೀರೂ ಸಿಕ್ಕಿದೆ. ಆದರೆ ಜನರಿಗೆ ತಲುಪಿಸಲು ಆಗಿಲ್ಲ. ಎಲ್ಲ ವ್ಯವಸ್ಥೆಗೆ 7-8 ಲಕ್ಷ ರೂ. ಬೇಕಿದ್ದು, ಶಾಸಕರಲ್ಲಿ ವಿನಂತಿಸಿದ್ದೇವೆ. ಶೀಘ್ರ ಪರಿಹಾರ ಆಗಲಿದೆ.
– ರಾಧಾಕೃಷ್ಣ ಬೋರ್ಕರ್‌ ತಾ.ಪಂ. ಅಧ್ಯಕ್ಷರು, ಪುತ್ತೂರು

ಭರವಸೆ ಸಿಕ್ಕಿದೆ
ಕೊಳವೆಬಾವಿ ಕೊರೆಸಿ ನೀರು ಸಿಕ್ಕಿದರೂ ಉಳಿದ ವ್ಯವಸ್ಥೆಗಳಿಗೆ 6-7 ಲಕ್ಷ ರೂ. ಬೇಕು. ಗ್ರಾ.ಪಂ.ನಿಂದ ಇಷ್ಟೊಂದು ಹಣ ನೀಡಲು ಆಗದು. ಶಾಸಕರು, ಜಿ.ಪಂ. ಸದಸ್ಯರಿಗೆ ಮನವಿ ಮಾಡಿದ್ದು, ಭರವಸೆ ನೀಡಿದ್ದಾರೆ. ನೀತಿ ಸಂಹಿತೆ ಮುಗಿದ ತತ್‌ಕ್ಷಣ ಸ್ಪಂದಿಸುವುದಾಗಿ ತಿಳಿಸಿದ್ದಾರೆ.
– ಕೇಶವ ಗೌಡ ಕನ್ನಾಯ ಅಧ್ಯಕ್ಷರು, ಬಡಗನ್ನೂರು ಗ್ರಾ.ಪಂ.

-ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

ತಡೆಯಲಾಗದ ಬಿಸಿಲ ಧಗೆ; ಅಂಗನವಾಡಿ ಪುಟಾಣಿಗಳಿಗೆ 41 ದಿನ ರಜೆ ಭಾಗ್ಯ!

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Uppinangady ಬಿಸಿಲ ಬೇಗೆ: ಬತ್ತುತ್ತಿದೆ ಕೆರೆಮೂಲೆಯ ಕೆರೆ; ಸಾವಿರಾರು ಮೀನುಗಳ ಮಾರಣ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ

Kalladka: ಕಾರುಗಳ ಅಪಘಾತ; ದಂಪತಿಗೆ ಹಲ್ಲೆ; ಪ್ರಕರಣ ದಾಖಲು

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

Belthangady ರಸ್ತೆ ಬದಿಗೆ ಜಾರಿದ ಟೆಂಪೋ; ಟ್ರಾಫಿಕ್‌ ಜಾಮ್‌

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

ಏ.25, 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕ್ಕಿಂಗ್ ನೀಡಬೇಡಿ: ಮಾಲೀಕರಿಗೆ ಜಿಲ್ಲಾಡಳಿತ ಆದೇಶ

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

MP B.Y. Raghavendra: “ಬಿಜೆಪಿಯಿಂದ ಉತಮ ಪ್ರಣಾಳಿಕೆ ಬಿಡುಗಡೆ’ʼ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.