ಟಿಪ್ಪರ್ – ಬಸ್ ಮುಖಾಮುಖಿ ಡಿಕ್ಕಿ
Team Udayavani, Oct 12, 2019, 10:20 AM IST
ವಿಟ್ಲ; ಮರಳು ಸಾಗಾಟದ ಟಿಪ್ಪರ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಮಿತ್ತೂರುನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಟಿಪ್ಪರ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಮಾಣಿ ಕಡೆಯಿಂದ ಸಾಗುತ್ತಿದ್ದ ಟಿಪ್ಪರ್ ನಡುವೆ ಮಿತ್ತೂರು ಬಳಿಯ ಅಪಾಯಕಾರಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.