ಪೆಟ್ರೋಲ್ ಬಂಕ್‌ನಲ್ಲಿ ನಾಲ್ಕು ಬಸ್‌ಗಳಿಗೆ ಗುದ್ದಿದ ಟಿಪ್ಪರ್
Team Udayavani, Sep 24, 2017, 12:04 PM IST
ಬಿ.ಸಿ.ರೋಡ್: ಇಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಭಾನುವಾರ ನಡೆಯಬೇಕಾಗಿದ್ದ ಭಾರಿ ಅನಾಹುತ ಅದೃಷ್ಟವಷಾತ್ ತಪ್ಪಿಹೋಗಿದ್ದು, ಮರಳು ತುಂಬಿದ್ದ ಟಿಪ್ಪರ್ ನಾಲ್ಕು ಬಸ್‌ಗಳಿಗೆ ಗುದ್ದಿ ಪಲ್ಟಿಯಾದ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಲಾರಿ ಏಕಾಏಕಿ ಢಿಕ್ಕಿಯಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.