ದಂಡ ವಿಧಿಸುವ ಟೋಯಿಂಗ್‌ಗೆ ದಂಡ ಹಾಕುವವರು ಯಾರು?

1 ವರ್ಷದಿಂದ ವಿಮೆ, ಫಿಟ್ನೆಸ್‌ ಸರ್ಟಿಫಿಕೆಟ್‌ ಇಲ್ಲದೆ ಓಡಾಡಿದ ಟೋಯಿಂಗ್‌ ವಾಹನ

Team Udayavani, Dec 14, 2020, 12:33 PM IST

ದಂಡ ವಿಧಿಸುವ ಟೋಯಿಂಗ್‌ಗೆ ದಂಡ ಹಾಕುವವರು ಯಾರು?

ಮಹಾನಗರ, ಡಿ. 13: ರಸ್ತೆ ಬದಿ ಪಾರ್ಕಿಂಗ್‌ ನಿಯಮಗಳನ್ನು ಉಲ್ಲಂಘಿಸಿ ನಿಲುಗಡೆ ಮಾಡುವ ಹತ್ತಾರು ವಾಹನ ಗಳನ್ನು ಏಕ ಕಾಲದಲ್ಲಿ ಹೊತ್ತೂಯ್ದು ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುವ ಟೋಯಿಂಗ್‌ ವಾಹನ ವಿಮೆ ಇಲ್ಲದೆ, ಫಿಟ್‌ನೆಸ್‌ ಸರ್ಟಿಫಿಕೆಟ್‌ ನವೀ ಕರಿಸದೆ ನಿಯಮಗಳನ್ನು ಗಾಳಿಗೆ ತೂರಿ 1 ವರ್ಷದಿಂದ ಕಾರ್ಯಾಚರಿಸಿದೆ!

ಹೌದು, ಇದು ಮಂಗಳೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ಒಂದು ಟೋಯಿಂಗ್‌ ವಾಹನದ ಕಥೆ. 2 ದಿನಗಳ ಹಿಂದೆ ಈ ವಿಚಾರ ಟ್ರಾಫಿಕ್‌ ಪೊಲೀಸರ ಗಮನಕ್ಕೆ ಬಂದಿದ್ದು, ಇದೀಗ 2 ದಿನಗಳಿಂದ ಈ ಟೋಯಿಂಗ್‌ ವಾಹನದಲ್ಲಿ ಟೋಯಿಂಗ್‌ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ನಗರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಟೋಯಿಂಗ್‌ ವ್ಯವಸ್ಥೆಯ ಬಗ್ಗೆ ಬೇಸತ್ತ ದ್ವಿಚಕ್ರ ವಾಹನ ಮಾಲಕರೊಬ್ಬರು ಟೋ ಯಿಂಗ್‌ ವಾಹನದ ದಾಖಲೆಗಳನ್ನು ಸಾರಿಗೆ ಇಲಾಖೆಯ ಕಚೇರಿಯಲ್ಲಿ ಪರಿಶೀಲನೆಗೆ ಒಳ ಪಡಿಸಿದಾಗ ಈ ಟೋಯಿಂಗ್‌ ವಾಹನದ ಜಾತಕ ಬಯಲಾಗಿದೆ.

ಈ ವಾಹನದ ಇನ್ಶೂರೆನ್ಸ್‌ 2019 ನವೆಂಬರ್‌ನಲ್ಲಿಯೇ ಲ್ಯಾಪ್ಸ್‌ ಆಗಿದ್ದು, ನವೀಕರಣ ಮಾಡಿರಲಿಲ್ಲ. ಫಿಟೆ°ಸ್‌ ಸರ್ಟಿಫಿಕೆಟ್‌ ನವೀಕರಿಸದೆ ಇರುವುದು ಬೆಳಕಿಗೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಅದು ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸರು ಈ ವಾಹನದಲ್ಲಿ ಟೋಯಿಂಗ್‌ ಮಾಡುವುದನ್ನು ಸದ್ಯದ ಮಟ್ಟಿಗೆ ತಡೆ ಹಿಡಿದಿದ್ದಾರೆ.

ನಿಯಮ ಉಲ್ಲಂಘಿಸಿದ ವಾಹನಗಳನ್ನು ಎತ್ತಂಗಡಿ ಮಾಡುವ ಟೋಯಿಂಗ್‌ ವಾಹನವೇ ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಟೋಯಿಂಗ್‌ ವ್ಯವಸ್ಥೆಯನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಗುತ್ತಿಗೆಗೆ ಪಡೆದು ಎರಡು ವರ್ಷಗಳಿಂದ ನಿರ್ವಹಣೆ ಮಾಡುತ್ತಿದ್ದಾರೆ. ನಾಲ್ಕು ಟೋಯಿಂಗ್‌ ವಾಹನಗಳಲ್ಲಿ ಒಂದು ವಾಹನ ಕೋವಿಡ್ ಸಂದರ್ಭದಲ್ಲಿ ಫಿಟೆ°ಸ್‌ ತಪಾಸಣೆಗಾಗಿ ಬೆಂಗಳೂರಿಗೆ ಕೊಂಡು ಹೋಗಿದ್ದು, ಅದು ಇನ್ನೂ ಬಂದಿಲ್ಲ. ಉಳಿದ 3 ವಾಹನಗಳಲ್ಲಿ ಒಂದು ವಾಹನದ ವಿಮೆ ಮತ್ತು ಫಿಟೆ°ಸ್‌ ಅವಧಿ 2019 ನವೆಂಬರ್‌ನಲ್ಲಿ ಮುಗಿದಿದ್ದರೂ ಅನಧಿಕೃತವಾಗಿ ಕಾರ್ಯಾಚರಣೆಗೆ ಇಳಿಸಲಾಗಿತ್ತು.

ಪೊಲೀಸರ ಸೂಚನೆಯಂತೆ ಈ ವಾಹನದ ಇನ್ಸುರೆನ್ಸ್ ನ್ನು ಶನಿವಾರ ನವೀ ಕರಿಸಲಾಗಿದೆ. ಫಿಟೆ°ಸ್‌ ಸರ್ಟಿಫಿಕೆಟ್‌ (ಕ್ಷಮತಾ ಪ್ರಮಾಣ ಪತ್ರ) ಇನ್ನಷ್ಟೇ ಆಗ ಬೇಕಾಗಿದೆ. ಹಾಗಾಗಿ ಈ ವಾಹನದಲ್ಲಿ ಟೋಯಿಂಗ್‌ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟೋಯಿಂಗ್‌ ವಾಹನದ ಮಾಲಕರು ಈಗ ಇನ್ಶೂರೆನ್ಸ್‌ ಪಾವತಿಸಿದ್ದಾರೆ. ಫಿಟೆ°ಸ್‌ ಸರ್ಟಿಫಿಕೆಟ್‌ ನವೀಕರಣ ಇನ್ನಷ್ಟೇ ಆಗ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಈ ವಾಹನದಲ್ಲಿ ಟೋಯಿಂಗ್‌ ಮಾಡುವುದನ್ನು ನಿಲ್ಲಿಸಲಾಗಿದೆ. ನಟರಾಜ್‌, ಎಸಿಪಿ, ಟ್ರಾಫಿಕ್‌

ಟೋಯಿಂಗ್‌ ವಾಹನ ನಿಯಮ ಉಲ್ಲಂಘಿಸಿ ಓಡಾಡುತ್ತಿದೆ ಎಂದರೆ ಈ ವಾಹನದ ಟೋಯಿಂಗ್‌ ಕಾರ್ಯಾಚರಣೆಯೂ ಅಕ್ರಮ ವಲ್ಲವೇ? ನಿಯಮ ಉಲ್ಲಂಘಿಸಿದ ವಾಹನ ಮಾಲಕರಿಂದ ದಂಡ ವಸೂಲಿ ಮಾಡುವ ಇಂತಹ ಟೋಯಿಂಗ್‌ ವಾಹ ನಕ್ಕೆ ದಂಡ ವಿಧಿಸುವವರು ಯಾರು? 1ವರ್ಷದಲ್ಲಿ ವಸೂಲಿ ಮಾಡಿದ ದಂಡ ಮೊತ್ತವನ್ನು ಸಂಬಂಧಪಟ್ಟ ವಾಹನ ಮಾಲಕರಿಗೆ ಹಿಂದಿರುಗಿಸುವರೇ? –ಪ್ರಸನ್ನ ಕುಮಾರ್‌, ನಾಗರಿಕ

ನಿಯಮ ಉಲ್ಲಂಘಿಸಿದ ವಾಹನಗಳನ್ನು ಹೊತ್ತೂಯ್ಯುವ ಟೋಯಿಂಗ್‌ ವಾಹನದಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಇರುತ್ತಾರೆ. ಟೋಯಿಂಗ್‌ ಮಾಡುವ ವಾಹನದ ವಿಮೆ, ಎಫ್‌ಸಿ ಇತ್ಯಾದಿ ದಾಖಲೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಅವರ ಜವಾಬ್ದಾರಿ ಅಲ್ಲವೇ? ಈ ರೀತಿ ಕಾರ್ಯಾಚರಿಸುತ್ತಿರುವ ವಾಹನಗಳ ವಿರುದ್ಧ ಪೊಲೀಸ್‌ ಆಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು.ರವಿ, ಮಂಗಳೂರು, ನಾಗರಿಕ

ಟಾಪ್ ನ್ಯೂಸ್

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

1-sdsdddad

ಬಣ್ಣದ ವೈಭವ-4 : ಮರೆತು ಹೋದ ರಾಕ್ಷಸ ಪಾತ್ರಗಳ ಮೇಕಪ್ ಕಲೆಗಾರಿಕೆ

ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಶಿಕ್ಷಕರ ದಿನಾಚರಣೆ  : ಒಕ್ಕಲಿಗ ಸಂಘದ ಅಂತರಿಕ ಕಲಹ ಸ್ಪೋಟ

ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಶಿಕ್ಷಕರ ದಿನಾಚರಣೆ  : ಒಕ್ಕಲಿಗ ಸಂಘದ ಅಂತರಿಕ ಕಲಹ ಸ್ಪೋಟ

ಪುರಿ ಜಗನ್ನಾಥನ ದೇಗುಲದ ಆಸ್ತಿ ಡಿಜಿಟಲೀಕರಣ

ಪುರಿ ಜಗನ್ನಾಥನ ದೇಗುಲದ ಆಸ್ತಿ ಡಿಜಿಟಲೀಕರಣ

ಕಟೀಲ್ ಬಫೂನ್ ಇದ್ದಂತೆ: ಅವರ ಮೆದುಳು-ನಾಲಿಗೆಗೆ ಸಂಪರ್ಕವೇ ಇರಲ್ಲ; ಎಂ.ಬಿ.ಪಾಟೀಲ್

ಕಟೀಲ್ ಬಫೂನ್ ಇದ್ದಂತೆ: ಅವರ ಮೆದುಳು-ನಾಲಿಗೆಗೆ ಸಂಪರ್ಕವೇ ಇರಲ್ಲ; ಎಂ.ಬಿ.ಪಾಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—s-ddad

ಉಳ್ಳಾಲ ಸೀಮಂತ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಗರ್ಭಿಣಿಯ ಭಾವಚಿತ್ರ ; ವಿವಾದ

ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ: ಏಕಕಾಲದಲ್ಲಿ 2 ಕೋರ್ಸ್‌ಗೆ ಅನುಮತಿ

ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ: ಏಕಕಾಲದಲ್ಲಿ 2 ಕೋರ್ಸ್‌ಗೆ ಅನುಮತಿ

ಮುಂದುವರಿದ ಪಿಎಫ್‌ಐ, ಎಸ್‌ಡಿಪಿಐ ನಾಯಕರ ಬಂಧನ ಸತ್ರ

ಮುಂದುವರಿದ ಪಿಎಫ್‌ಐ, ಎಸ್‌ಡಿಪಿಐ ನಾಯಕರ ಬಂಧನ ಸತ್ರ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಕರಾವಳಿಯಾದ್ಯಂತ ನವರಾತ್ರಿ ಸಡಗರಕ್ಕೆ ಚಾಲನೆ : ಶತಮಾನೋತ್ಸವ ಶಾರದಾ ಮಾತೆ ವಿಗ್ರಹ ಪ್ರತಿಷ್ಠೆ

ಕರಾವಳಿಯಾದ್ಯಂತ ನವರಾತ್ರಿ ಸಡಗರಕ್ಕೆ ಚಾಲನೆ : ಶತಮಾನೋತ್ಸವ ಶಾರದಾ ಮಾತೆ ವಿಗ್ರಹ ಪ್ರತಿಷ್ಠೆ

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

arrested

ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಭೂ ಪರಿವರ್ತನೆ ಸರಳ ಕ್ರಮ: ಸಚಿವ ಆರ್‌.ಅಶೋಕ್‌

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯ ಶೀಘ್ರ ಸೇರ್ಪಡೆ

1-sdsdddad

ಬಣ್ಣದ ವೈಭವ-4 : ಮರೆತು ಹೋದ ರಾಕ್ಷಸ ಪಾತ್ರಗಳ ಮೇಕಪ್ ಕಲೆಗಾರಿಕೆ

ಕುಟುಂಬ ಕಲಹ : ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕುಟುಂಬ ಕಲಹ : ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.