Udayavni Special

ತಮಿಳುನಾಡಿನ ಓಲೆ ಬೆಲ್ಲಕ್ಕೆ  ಭರ್ಜರಿ ಬೇಡಿಕೆ!


Team Udayavani, Aug 8, 2018, 10:52 AM IST

8-agust-3.jpg

ಬೆಳ್ತಂಗಡಿ : ಕರಾವಳಿ ಪ್ರದೇಶದ ಜನರಿಗೆ ಓಲೆ ಬೆಲ್ಲ (ಶೇಂದಿಯನ್ನು ಕುಂದಿಸಿ ತಯಾರಿಸುವ ಬೆಲ್ಲ) ಗೊತ್ತು. ಗ್ರಾಮೀಣ ಪ್ರದೇಶದಲ್ಲಿ ಕೆಲವರು ಇದನ್ನೇ ಉದ್ಯಮವಾಗಿ ಮಾಡಿಕೊಂಡು ಬದುಕು ನಿರ್ವಹಿಸುತ್ತಿದ್ದಾರೆ. ಆದರೂ ತಮಿಳುನಾಡಿನ ಓಲೆ ಬೆಲ್ಲಕ್ಕೆ ಸಾಕಷ್ಟು ಬೇಡಿಕೆ ಕಂಡುಬಂದಿದೆ.

ಬೆಳ್ತಂಗಡಿಯ ಹಳೆಕೋಟೆ ಪರಿಸರದಲ್ಲಿ ಕೆಲವು ದಿನಗಳಿಂದ ತಮಿಳುನಾಡಿನ ವರ್ತಕರು ರಸ್ತೆ ಬದಿಯಲ್ಲಿ ನಿಂತು ಓಲೆ ಬೆಲ್ಲದ ವ್ಯಾಪಾರ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಸಾಗುವವರು ತಮ್ಮ ವಾಹನಗಳನ್ನು ನಿಲ್ಲಿಸಿ, ಬೆಲ್ಲ ಖರೀದಿಸುತ್ತಿದ್ದಾರೆ. ತಾವೇ ಬೆಲ್ಲವನ್ನು ತಯಾರಿಸಿ ತರುವುದರಿಂದ ಉತ್ತಮ ಲಾಭ ಸಿಗುತ್ತಿದೆ. ಗುಣಮಟ್ಟದ ಬಗ್ಗೆಯೂ ಖಾತ್ರಿ ಇದೆ ಎಂದು ವರ್ತಕರು ಹೇಳುತ್ತಾರೆ.

ಪ್ರಸ್ತುತ ಬೆಳ್ತಂಗಡಿಯಲ್ಲಿ ಬೆಲ್ಲ ಮಾರಾಟ ಮಾಡುವ ತಂಡದಲ್ಲಿ 6 ಮಂದಿ ಇದ್ದು, ಹೆದ್ದಾರಿ ಬದಿಯ 6 ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವರು ತಮಿಳುನಾಡು ತಿರುಚಂದೂರು ಕೋಯಿಲ್‌ಪ್ಪಾಡಿಯವರಾಗಿದ್ದು, ತಮ್ಮ ಊರಿನಲ್ಲಿ ಬೆಲ್ಲವನ್ನು ತಯಾರಿಸಿ, ಊರೂರು ಸುತ್ತಿ ಮಾರಾಟ ಮಾಡುವುದೇ ಇವರ ಕಾಯಕ.

10 ಕೆ.ಜಿ. ಕಟ್ಟು!
ಇವರು ತಯಾರಿಸಿದ ಬೆಲ್ಲವನ್ನು ತಾಳೆ ಮರದ ಗರಿಗಳಿಂದ ಬುಟ್ಟಿಯ ಮಾದರಿ ತಯಾರಿಸಿ, ತಲಾ 10 ಕೆ.ಜಿ.ಯಂತೆ ಪ್ಯಾಕ್‌ ಮಾಡುತ್ತಾರೆ. 10 ಕೆ.ಜಿ.ಗೆ 1,400 ರೂ. ಬೆಲೆ. ಅಷ್ಟು ಪ್ರಮಾಣದ ಬೆಲ್ಲ ಬೇಡ ಎಂದಾದಲ್ಲಿ ಕೆ.ಜಿ.ಗೆ 140 ರೂ.ಗಳಂತೆಯೂ ಮಾರಾಟ ಮಾಡುತ್ತಾರೆ. ತಾಳೆ ಮರದ ಗರಿಗಳ ಬುಟ್ಟಿ ಮಾದರಿಯಲ್ಲಿ ಪ್ಯಾಕ್‌ ಮಾಡುವುದರಿಂದ ಬೆಲ್ಲ ಎಷ್ಟು ಸಮಯವಾದರೂ ಹಾಳಾಗುವುದಿಲ್ಲ ಎಂದು ವರ್ತಕ ವೇಲುದುರೈ ತಿಳಿಸಿದರು.

ಮೂರು ತಿಂಗಳಲ್ಲಿ ತಯಾರಿ
ಊರೂರು ಸುತ್ತಿ ಬೆಲ್ಲ ಮಾರಾಟ ಮಾಡುವುದೇ ಇವರ ಉದ್ಯಮ. ಒಮ್ಮೆ ಬರುವಾಗ ಒಂದೂವರೆ ಟನ್‌ ಬೆಲ್ಲ ತಯಾರಿಸಿ ತರುತ್ತಾರೆ. ಇಷ್ಟಕ್ಕೆ ಅವರಿಗೆ ಬರೊಬ್ಬರಿ ಮೂರು ತಿಂಗಳು ಬೇಕಾಗುತ್ತದೆ. ಲೋಡ್‌ ಖಾಲಿಯಾದ ಮೇಲೆಯೇ ಊರಿಗೆ ಮರಳುವುದು. ವರ್ಷದಲ್ಲಿ ಒಂದು ಸಲ ಬಂದ ಊರಿಗೆ ಮತ್ತೆ ಬರುವುದಿಲ್ಲ. ಈ ಬಾರಿ ಕರಾವಳಿ ಪ್ರದೇಶಕ್ಕೆ 
ಆಗಮಿಸಿದ್ದು, ಮುಂದಿನ ಸಲ ಬೆಂಗಳೂರಿಗೆ ತೆರಳುತ್ತೇವೆ. ಆಯಾ ಪ್ರದೇಶದ ವ್ಯಾಪಾರ ನೋಡಿಕೊಂಡು ಮುಂದಿನ ಭೇಟಿಯನ್ನು ನಿರ್ಧರಿಸುತ್ತೇವೆ. ಬೆಳ್ತಂಗಡಿ ಹಳೆಕೋಟೆ ಭಾಗದಲ್ಲಿ 4 ದಿನಗಳಿಂದ ವ್ಯಾಪಾರ ಮಾಡುತ್ತಿದ್ದು, ವಾಹನಗಳನ್ನು ನಿಲ್ಲಿಸಿ ಜನ ಬೆಲ್ಲ ಖರೀದಿಸುತ್ತಿದ್ದಾರೆ. ಉತ್ತಮ ವ್ಯಾಪಾರ ಆಗಿದೆ ಎಂದು ಖುಷಿಯಿಂದಲೇ ಹೇಳಿದರು.

ಮಸಾಲ ಮಿಕ್ಸ್‌ ಬೆಲ್ಲ
ನಾವು ಓಲೆ ಬೆಲ್ಲದ ಜತೆಗೆ ಮಸಾಲ ಮಿಕ್ಸ್‌ ಬೆಲ್ಲವನ್ನೂ ಮಾರಾಟ ಮಾಡುತ್ತಿದ್ದೇವೆ. ಬೆಲ್ಲಕ್ಕೆ ಶುಂಠಿ, ಏಲಕ್ಕಿ, ಕರಿಮೆಣಸು ಸೇರಿಸಿ ಮಸಾಲ ಮಿಕ್ಸ್‌ ತಯಾರಿಸಲಾಗುತ್ತಿದೆ. ಇದು ಶೀತ, ಕಫ, ಕೆಮ್ಮಿಗೆ ಉತ್ತಮ ಔಷಧ. ಕರಾವಳಿ ಭಾಗದಲ್ಲಿ ಇದಕ್ಕೆ ಬೇಡಿಕೆಯೂ ಉತ್ತಮವಾಗಿದೆ. ಈ ಬೆಲ್ಲಕ್ಕೆ ಕೆ.ಜಿ.ಗೆ. 240 ರೂ. ಧಾರಣೆ ಇದೆ. ಮೂರು ತಿಂಗಳಲ್ಲಿ ಒಂದುವರೆ ಟನ್‌ ಬೆಲ್ಲ ತಯಾರಿಸಲು ಸಾಧ್ಯವಾಗುತ್ತದೆ. ನಾವೇ ತಯಾರಿಸಿ ಮಾರುವುದರಿಂದ ಲಾಭವಿದೆ ಎಂದು ಬೆಲ್ಲ ವರ್ತಕ ರಾಜಾ ವಿವರಿಸಿದರು.

ಕಿರಣ್‌ ಸರಪಾಡಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

ಡ್ರಗ್ಸ್ ಜಾಲದ ನಂಟು: ಎನ್ ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ, ಸಾರಾ

ಡ್ರಗ್ಸ್ ಜಾಲದ ನಂಟು: ಎನ್ ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ, ಸಾರಾ

“ಡ್ರಗ್ಸ್ ನಿಂದ ಸಮಾಜ ಮುಕ್ತವಾಗಲಿ”: ಸಿಸಿಬಿ ವಿಚಾರಣೆ ಮುಗಿಸಿ ಹೊರಟ ಅನುಶ್ರಿ

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

ಕನ್ನಡಿಗರ ಕಣ್ಮಣಿ ಎಸ್ ಪಿಬಿ ಮತ್ತೆ ಹುಟ್ಟಿ ಬನ್ನಿ: ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ

ಕನ್ನಡಿಗರ ಕಣ್ಮಣಿ ಎಸ್ ಪಿಬಿ ಮತ್ತೆ ಹುಟ್ಟಿ ಬನ್ನಿ: ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ

ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ

ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ

ಕೊಣಾಜೆ: ಅನುಮಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ, ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ

ಕೊಣಾಜೆ: ಅನುಮಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ, ಅತ್ಯಾಚಾರವೆಸಗಿ ಕೊಲೆಗೈದಿರುವ ಶಂಕೆ

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ: ಐವರು ಆರೋಪಿಗಳ ಬಂಧನ

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ: ಐವರು ಆರೋಪಿಗಳ ಬಂಧನ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ



ಹೊಸ ಸೇರ್ಪಡೆ

ಹುಣಸೂರು: ಕಾಯ್ದೆ ಹಿಂಪಡೆಯದಿದ್ದರೆ ಹೋರಾಟ

ಹುಣಸೂರು: ಕಾಯ್ದೆ ಹಿಂಪಡೆಯದಿದ್ದರೆ ಹೋರಾಟ

ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

ಚಾ.ನಗರ: ರೈತರಿಂದ ಹೆದ್ದಾರಿ ಬಂದ್ ಚಳವಳಿ

ಚಾ.ನಗರ: ರೈತರಿಂದ ಹೆದ್ದಾರಿ ಬಂದ್ ಚಳವಳಿ

ಮೂರು ತಿಂಗಳೊಳಗೆ ಹಾಲಿ ಉಳಿದಿರುವ ಕಬ್ಬು ಅರೆಯಿರಿ

ಮೂರು ತಿಂಗಳೊಳಗೆ ಹಾಲಿ ಉಳಿದಿರುವ ಕಬ್ಬು ಅರೆಯಿರಿ

ಡ್ರಗ್ಸ್ ಜಾಲದ ನಂಟು: ಎನ್ ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ, ಸಾರಾ

ಡ್ರಗ್ಸ್ ಜಾಲದ ನಂಟು: ಎನ್ ಸಿಬಿ ವಿಚಾರಣೆಗೆ ಹಾಜರಾದ ದೀಪಿಕಾ ಪಡುಕೋಣೆ, ಸಾರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.