Udayavni Special

ಅಪಾಯಕಾರಿಯಾಗಿ ವಸ್ತು ಸಾಗಾಟ

Team Udayavani, May 18, 2018, 9:58 AM IST

18-may-1.jpg

ಮಹಾನಗರ: ಯಾವುದೇ ಮುನ್ನೆಚ್ಚರಿಕೆ ವಹಿಸದೆ ವಿದ್ಯುತ್‌ ಕಂಬಗಳನ್ನು ಮಿನಿ ಲಾರಿಯಲ್ಲಿ ಸಾಗಿಸಿದ ಪರಿಣಾಮ ಕುದ್ರೋಳಿಯಲ್ಲಿ ಆಟೋರಿಕ್ಷಾವೊಂದು ಬುಧವಾರ ಹಾನಿಯಾಗಿದೆ. ಇದು ಒಂದು ಘಟನೆಯಲ್ಲ. ಮಂಗಳೂರಿನ ಬಹುತೇಕ ಭಾಗದಲ್ಲಿ ಇಂತಹ ಘಟನೆ ಮತ್ತೆ ಮತ್ತೆ ಎದುರಾಗುತ್ತಿದೆ.

ತೆರೆದ ವಾಹನದಲ್ಲಿ ಕಲ್ಲು, ವಿದ್ಯುತ್‌ ಕಂಬ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಸಾಗಿಸುತ್ತಿರುವುದರಿಂದ ಇತರ ವಾಹನ ಸವಾರರು ಆತಂಕ ಎದುರಿಸುವಂತಾಗಿದೆ. ವಾಹನ ದಟ್ಟಣೆ ಹೆಚ್ಚಿರುವ ನಗರ ಪ್ರದೇಶಗಳಲ್ಲಿ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಸಾಮಗ್ರಿ ಸೇರಿದಂತೆ, ವಿದ್ಯುತ್‌ ಕಂಬ, ಲೋಡುಗಟ್ಟಲೆ ದೈತ್ಯಾಕಾರದ ಕಲ್ಲುಗಳನ್ನು ಯಾವುದೇ ಮುಂಜಾಗೃತ ಕ್ರಮ ಗಳನ್ನು ಕೈಗೊಳ್ಳದೆ ಅಧಿಕಾರಿಗಳ ಕಣ್ಣೇದುರೇ ಸಾಗಿಸುತ್ತಿದ್ದರೂ ಯಾವುದೇ ಕ್ರಮ ಜರಗಿಸದೆ ಇರುವುದು ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನ ಸವಾರರಲ್ಲಿ ಭಯ ಮೂಡಿಸಿದೆ. ಈ ಮೂಲಕ ಮೋಟಾರ್‌ ವಾಹನ ಕಾಯ್ದೆಯನ್ನು ಗಾಳಿಗೆ ತೂರಲಾಗಿದೆ.

ಅಪಾಯದಿಂದ ಪಾರಾದ ಕಾರು ಚಾಲಕ
ರಿಕ್ಷಾ ಸೇರಿದಂತೆ ಗೂಡ್ಸ್‌ ವಾಹನದಲ್ಲಿ ಅಲ್ಯೂಮಿನಿಯಂ ಕಬ್ಬಿಣ ರಾಡ್‌ಗಳನ್ನು ಕೂಡ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಕೊಂಡೊಯ್ಯುತ್ತಿರುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ನಗರದ ಬಿಜೈಯಲ್ಲಿ ಗೂಡ್ಸ್‌ ರಿಕ್ಷಾದಲ್ಲಿ ಕಬ್ಬಿಣದ ಸರಳು ಕೊಂಡೊಯ್ಯುತ್ತಿದ್ದಾಗ ರಿಕ್ಷಾ ಚಾಲಕ ತತ್‌ಕ್ಷಣ ಬ್ರೇಕ್‌ ಹಾಕಿದ್ದರಿಂದ ರಾಡ್‌ ಹಿಂಬದಿಯ ಕಾರಿನ ಗ್ಲಾಸ್‌ ಒಳಭಾಗಕ್ಕೆ ಹೋಗಿದೆ. ಕಾರು ಚಾಲಕ ಸ್ವಲ್ಪ ದರಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಇಂತಹ ಘಟನೆಗಳು ನಗರದಲ್ಲಿ ಪದೇ ಪದೇ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕಠಿನ ಕ್ರಮ ಜರಗಿಸದೆ ಇರುವುದು ಅಚ್ಚರಿ ಮೂಡಿಸಿದೆ.

ಅಪಾಯ ಕಟ್ಟಿಟ್ಟ ಬುತ್ತಿ
ಹೀಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದೆ ಅಪಾಯಕಾರಿ ವಸ್ತುಗಳನ್ನು ಸಾಗಾಟ ಮಾಡುವುದರಿಂದ ಇತರ ವಾಹನಗಳಿಗೆ ಅಪಾಯ ವಾಗುವ ಸಾಧ್ಯತೆ ಹೆಚ್ಚು. ಇದರ ವಿರುದ್ಧ ಟ್ರಾಫಿಕ್‌ ಪೊಲೀಸರು ದೂರು ದಾಖಲಿಸಿ ದಂಡ ಹಾಕಿ ಕಳುಹಿಸುತ್ತಾರೆ. ಆದ್ದರಿಂದ ಚಾಲಕರ ವಿರುದ್ಧ ಕಠಿನ ಕ್ರಮ ಜರಗಿಸಿದರೆ ಮತ್ತೆ ಇಂತಹ ಘಟನೆಗಳು ಮರುಕಳಿಸದು.

ನಿಯಮಪಾಲಿಸದೆ ಇದ್ದಲ್ಲಿ ದಂಡ
ಯಾವುದೇ ಭಾಗದಲ್ಲಿ ಅಪಾಯಕಾರಿ ವಸ್ತುಗಳನ್ನು ಸಾಗಾಟ ಮಾಡುವಾಗ ಕೆಂಪು ಬಣ್ಣದ ದೀಪ ಅಥವಾ ಬಟ್ಟೆಗಳನ್ನು ಹಾಕಲೇ ಬೇಕು. ಇಲ್ಲವಾದಲ್ಲಿ ಅಂತಹ ವಾಹನ ಚಾಲಕರ ವಿರುದ್ಧ ಕ್ರಮ ಜರಗಿಸಲಾಗುತ್ತದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ವಾಹನ ಚಲಾಯಿಸಿ ಯಾವುದೇ ಅಪಘಾತಗಳು ಸಂಭವಿಸಿದ್ದಲ್ಲಿ ನಿರ್ಲಕ್ಷ್ಯತನ ಪ್ರಕರಣ ದಾಖಲಿಸಲಾಗುತ್ತದೆ.  
ಮಂಜುನಾಥ ಶೆಟ್ಟಿ
  ಎಸಿಪಿ, ಟ್ರಾಫಿಕ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅವರೂಪದ ಗಾಯಕ: ಕವಿರಾಜ್

ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅಪರೂಪದ ಗಾಯಕ: ಕವಿರಾಜ್

ಸಂಗೀತ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಎಸ್ ಪಿಬಿ

ಸಂಗೀತ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಎಸ್ ಪಿಬಿ

ಸರಳತೆಯಲ್ಲಿ ಇಂದಿನ ಕಲಾವಿದರಿಗೆ ಎಸ್ ಪಿಬಿ ಮಾದರಿ: ಗುರುಕಿರಣ್ ನೆನಪಿಸಿಕೊಂಡಂತೆ…

ಸರಳತೆಯಲ್ಲಿ ಇಂದಿನ ಕಲಾವಿದರಿಗೆ ಎಸ್ ಪಿಬಿ ಮಾದರಿ: ಗುರುಕಿರಣ್ ನೆನಪಿಸಿಕೊಂಡಂತೆ…

‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಸರ್ಕಾರಿ ಗೌರವಗಳೊಂದಿಗೆ ಸ್ವಕ್ಷೇತ್ರದಲ್ಲಿ ಶಾಸಕ ನಾರಾಯಣರಾವ್ ಅಂತ್ಯಕ್ರಿಯೆ

ಸರ್ಕಾರಿ ಗೌರವಗಳೊಂದಿಗೆ ಸ್ವಕ್ಷೇತ್ರದಲ್ಲಿ ಶಾಸಕ ನಾರಾಯಣರಾವ್ ಅಂತ್ಯಕ್ರಿಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

ಹಳ್ಳಿಗಳಲ್ಲಿಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಹಳ್ಳಿಗಳಲ್ಲಿಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಭೂ ಕಂದಾಯ ಕಾಯ್ದೆ ತಿದ್ದುಪಡಿ ಕೈಬಿಡಿ: ಟಿಬಿಜೆ

ಭೂ ಕಂದಾಯ ಕಾಯ್ದೆ ತಿದ್ದುಪಡಿ ಕೈಬಿಡಿ: ಟಿಬಿಜೆ

ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅವರೂಪದ ಗಾಯಕ: ಕವಿರಾಜ್

ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅಪರೂಪದ ಗಾಯಕ: ಕವಿರಾಜ್

ಸಂಗೀತ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಎಸ್ ಪಿಬಿ

ಸಂಗೀತ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಎಸ್ ಪಿಬಿ

ಎತ್ತಿನಹೊಳೆ ಸಂತ್ರಸ್ತರಿಗೆ ಪರಿಹಾರ ನೀಡಿ

ಎತ್ತಿನಹೊಳೆ ಸಂತ್ರಸ್ತರಿಗೆ ಪರಿಹಾರ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.