ಬೆಳ್ತಂಗಡಿಯ ಸುದೆಮುಗೇರಿನಲ್ಲಿ ಯುವಕ, ಬಾಲಕಿ ನೇಣಿಗೆ ಶರಣು

Team Udayavani, Apr 16, 2019, 10:17 AM IST

ಬೆಳ್ತಂಗಡಿ: ಬೆಳ್ತಂಗಡಿ ನಗರದ ಸುದೆಮುಗೇರಿನ ಬಾಡಿಗೆ ಮನೆಯೊಂದರಲ್ಲಿ ಯುವಕ ಹಾಗೂ ಬಾಲಕಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ರೆಂಕೆದಗುತ್ತು ನಿವಾಸಿ ಕಿರಣ್‌ಕುಮಾರ್‌ (29) ಹಾಗೂ ಲಾೖಲದ 16ರ ಹರೆಯದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಪರಸ್ಪರ ಪ್ರೀತಿಸುತ್ತಿದ್ದು, ಕಿರಣ್‌ ಪತ್ನಿ ಲವೀನಾ ವಿರೋಧಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸಲಾಗಿದೆ.

ಕಿರಣ್‌ಕುಮಾರ್‌ ಲಾೖಲದಲ್ಲಿ ಮೆಕ್ಯಾನಿಕ್‌ ಆಗಿದ್ದು, ಕೆಲವು ವರ್ಷ ಗಳ ಹಿಂದೆ ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಬಳಿಕ ಅವರ ಮಧ್ಯೆ ಭಿನ್ನಾಭಿಪ್ರಾಯ ಬಂದು ವಿಚ್ಛೇದ‌ನ ಪಡೆದಿದ್ದರು.

ಬಳಿಕ ಪುತ್ರಬೈಲಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಬಣಕಲ್‌ ಮೂಲದ ಲವೀನಾಳನ್ನು ಪ್ರೀತಿಸಿ ವಿವಾಹವಾಗಿದ್ದ. ಮೃತ ಕಿರಣ್‌ನ ಹೆತ್ತವರ ಮನೆ ರೆಂಕೆದಗುತ್ತಿನಲ್ಲಿದ್ದರೂ ಆತ ಮನೆಗೆ ಹೋಗುತ್ತಿರಲಿಲ್ಲ. ಕಿರಣ್‌-ಲವೀನಾ ದಂಪತಿ ಸುದೆಮುಗೇರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಇವರಿಬ್ಬರ ಜತೆ ಲವೀನಾಳ ಸಂಬಂಧಿಯಾಗಿದ್ದ ಬಾಲಕಿಯೂ ವಾಸವಿದ್ದಳು. ಈ ಬಾಲಕಿ ಮತ್ತು ಕಿರಣ್‌ ಬೈಕಿನಲ್ಲಿ ಸುತ್ತಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಳು ಮತ್ತು ಇದೇ ಕಾರಣಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು. ಎ. 14ರಂದು ಕೂಡ ತಡರಾತ್ರಿ ದಂಪತಿ ನಡುವೆ ಜಗಳವಾಗಿ ಹೊಡೆದಾಡಿಕೊಂಡಿದ್ದು, ಬಳಿಕ ಕಿರಣ್‌ ಪತ್ನಿ ಲವೀನಾಳನ್ನು ಮನೆಯಿಂದ ಹೊರ ಹಾಕಿದ್ದ ಎಂದು ಹೇಳಲಾಗುತ್ತಿದೆ.  ಬಳಿಕ ಲವೀನಾ ನೇರವಾಗಿ ಬೆಳ್ತಂಗಡಿ ಠಾಣೆಗೆ ಬಂದಿದ್ದಳಾದರೂ ಪತಿ ವಿರುದ್ಧ ದೂರು ನೀಡಲು ಸಿದ್ಧಳಿರಲಿಲ್ಲ. ಪತಿಯ ಹಲ್ಲೆ ಯಿಂದ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಹೋಗುವಂತೆ ಪೊಲೀಸರು ಸಲಹೆ ನೀಡಿದರೂ, ಆಕೆ ನೇರವಾಗಿ ಸಂಬಂಧಿಕರ ಮನೆಗೆ ಹೋಗಿದ್ದಳು.

ಸೋಮವಾರ ಬೆಳಗ್ಗೆ ಲವೀನಾ ಮನೆಗೆ ಬಂದಾಗ ಪತಿ ಮತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದುದು ಕಂಡು ಬಂದಿತ್ತು.  ಬೆಳ್ತಂಗಡಿ ಸಿಐ ಸಂದೇಶ್‌ ಪಿ.ಜಿ., ಎಸ್‌ಐ ರವಿ ಬಿ.ಎಸ್‌. ಹಾಗೂ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಪಕ್ಕಾಸು ತುಂಡಾಗಿತ್ತು!
ಕಿರಣ್‌ ಹಾಗೂ ಬಾಲಕಿಯು ಶಾಲಿನಿಂದ ನೇಣು ಬಿಗಿದುಕೊಂಡಿದ್ದರು. ನೇಣು ಹಾಕಿದ್ದ ಒಂದು ಪಕ್ಕಾಸು ತುಂಡಾಗಿದ್ದು, ಬಳಿಕ ಮತ್ತೂಂದು ಪಕ್ಕಾಸಿಗೆ ನೇಣು ಹಾಕಿಕೊಂಡಿದ್ದುದು ಕಂಡುಬಂದಿದೆ. ಬಾಲಕಿಯು ಎರಡು ತಿಂಗಳ ಹಿಂದೆ ಮನೆಬಿಟ್ಟು ಬಂದಿದ್ದಳು ಆಕೆಯ ಸಹೋದರ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...