Udayavni Special

ಆರ್ಥಿಕ ಸ್ವಾತಂತ್ರ್ಯದಿಂದ ಮಹಿಳೆ ಸ್ವಾವಲಂಬಿ: ಡಾ| ಸಂಧ್ಯಾ ಎಸ್‌. ಪೈ


Team Udayavani, Dec 9, 2018, 10:11 AM IST

sarre.jpg

ಮಂಗಳೂರು: ಮಹಿಳೆ ದುಡಿಯಲು ಆರಂಭಿಸಿದ ಮೇಲೆ ಆರ್ಥಿಕ ಸ್ವಾತಂತ್ರ್ಯ ದೊರೆತಿದ್ದು, ಸ್ವಾವ ಲಂಬಿಯಾಗಿ ಬದುಕಲು ಸಾಧ್ಯವಾಗಿದೆ ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅಭಿಪ್ರಾಯ ಪಟ್ಟರು.

ದೀಪಾವಳಿ ಪ್ರಯುಕ್ತ “ಉದಯವಾಣಿ’ ಪತ್ರಿಕೆಯು ಸಂಜೀವ ಶೆಟ್ಟಿಸಿಲ್ಕ್ನವರ ಸಹಯೋಗದಲ್ಲಿ ಆಯೋಜಿಸಿದ್ದ “ರೇಷ್ಮೆ ಜತೆಗೆ ದೀಪಾವಳಿ’ ಫೋಟೋ ಸ್ಪರ್ಧೆಯ ವಿಜೇತರಿಗೆ ಶನಿವಾರ ಬಹುಮಾನ ವಿತರಿಸಿ ಮಾತನಾಡಿದರು.
ಮಹಿಳೆ ಎಂದಿಗೂ ತನ್ನಲ್ಲಿ ಇದ್ದುದ ರಲ್ಲೇ ಖುಷಿಪಡುತ್ತಿದ್ದವಳು. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆಗೆ ಸೀರೆ ಖರೀದಿಸುವುದೇ ಒಂದು ಸಂಭ್ರಮ. ಆದರೀಗ ಬದಲಾಗಿದೆ. ಆರ್ಥಿಕ ಸ್ವಾತಂತ್ರ್ಯದ ಹಿನ್ನೆಲೆ ಯಲ್ಲಿ ಮಹಿಳೆಯರು ತಮಗೆ ಇಷ್ಟವಾದದ್ದನ್ನು ಖರೀದಿಸಿ ಖುಷಿ ಪಡು ವಂತಾಗಿದೆ ಎಂದರು. ಮುಂದಿನ ವರ್ಷದಿಂದ ಸ್ಪರ್ಧೆಯಲ್ಲಿ ಪುರುಷರೂ ಭಾಗವಹಿಸುವಂತೆ ಕರೆ ನೀಡಿದರು.

ಉತ್ತಮ ಸ್ಪಂದನೆ
ಮುಖ್ಯ ಅತಿಥಿಯಾಗಿದ್ದ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಪ್ರೈ.ಲಿ.  ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಓದುಗರೊಂದಿಗೆ “ಉದಯವಾಣಿ’ಯು ದೀಪಾವಳಿ ಸಂಭ್ರಮದಲ್ಲಿ ಸಹಭಾಗಿಯಾಗ ಬೇಕೆಂದು ಈ ಸ್ಪರ್ಧೆ ಆಯೋಜಿಸಿತ್ತು. ಕಳೆದ ವರ್ಷ ಪ್ರಾರಂಭಿಸಿದ್ದ ವಿನೂತನ ಪರಿಕಲ್ಪನೆಯ ಸಾಂಪ್ರದಾಯಿಕ ಸ್ಪರ್ಶವಿರುವ ಈ ಸ್ಪರ್ಧೆಗೆ ಓದುಗರು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ಈ ಬೆಳವಣಿಗೆ ನಮಗೆ ಇನ್ನಷ್ಟು ಉತ್ಸಾಹ ತುಂಬಿದೆ ಎಂದರು.

ಪರಂಪರೆ ಮುಂದುವರಿಯಲಿ
ಪ್ರಾಯೋಜಕರಾದ ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸಾರೀಸ್‌ನ ಮಾಲಕರಾದ ಎಂ. ಅಶ್ವಿ‌ತಾ ಮಹೇಂದ್ರ ಮಾತನಾಡಿ, ಭಾರತೀಯ ಸಂಸ್ಕೃತಿಯ ಸ್ಪರ್ಶವಿರುವ ರೇಷ್ಮೆ ಸೀರೆಗೆ ಮನ್ನಣೆ ತಂದು ಕೊಡುವ ನಿಟ್ಟಿನಲ್ಲಿ ಉದಯವಾಣಿ ಆಯೋಜಿಸಿದ ಈ ಸ್ಪರ್ಧೆ ಶ್ಲಾಘನೀಯ. ನಮ್ಮನ್ನೂ ಒಳಗೊಂಡಿದ್ದು ಖುಷಿ ತಂದಿದೆ. ಈ ಪರಂಪರೆ ಪ್ರತಿ ವರ್ಷ ಮುಂದುವರಿ ಯಲಿ ಎಂದು ಆಶಿಸಿದರು. ಸಂಸ್ಥೆಯ ಮಾಲಕ ಎಂ. ಮಹೇಂದ್ರ ಅತಿಥಿಯಾಗಿದ್ದರು. 

ಪ್ರಥಮ ಬಹುಮಾನ ವಿಜೇತ ತಂಡದ ಪರವಾಗಿ ಮಲ್ಲಿಕಾ ಶೆಟ್ಟಿ ಮಾತನಾಡಿ, ದೀಪಾವಳಿಯನ್ನು ಉದಯವಾಣಿಯೊಂದಿಗೆ ಸ್ಮರಣೀ ಯವಾಗಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಸಹಕಾರಿಯಾಗಿದೆ. ಇದೊಂದು ಅಪೂರ್ವ ಕ್ಷಣ ಎಂದು ಹೇಳಿದರು. ವಿಜೇತರರಾದ ಸರಸ್ವತಿ, ವಂದನಾ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಬಹುಮಾನಿತರ ಪಟ್ಟಿ ವಾಚಿಸಿದರು. ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸ್ಯಾರೀಸ್‌ ಮಾಲಕ ಎಂ. ಮುರಳೀಧರ ಶೆಟ್ಟಿ ಉಪಸ್ಥಿತರಿದ್ದರು. ವರದಿಗಾರರಾದ ಪ್ರಜ್ಞಾ ಶೆಟ್ಟಿ ಪ್ರಸ್ತಾವನೆಗೈದರು. ನೀತಾ ಶೆಟ್ಟಿ ವಂದಿಸಿದರು. ಧನ್ಯಾ ಬಾಳೆಕಜೆ ನಿರೂಪಿಸಿದರು.

ಬಹುಮಾನ ವಿಜೇತರು
ಮಲ್ಲಿಕಾ ಶೆಟ್ಟಿ, ವಿನುತಾ, ಶ್ರುತಿ ಹಾಗೂ ಶ್ರೇಯಾ ಬಜಪೆ ತಂಡ (ಪ್ರಥಮ), ಶೀತಲ್‌ ಎಸ್‌. ರಾವ್‌, ಸಿದ್ಧಿ ರಾವ್‌, ನೇಜಾರ್‌ ಉಡುಪಿ ತಂಡ (ದ್ವಿತೀಯ), ದೀಪಾ ಮಸ್ಕರೇನ್ಹಸ್‌, ಸವಿತಾ ಕೋಟ್ಯಾನ್‌, ಕವಿತಾ ಪಿ. ಸ್ವರೂಪ, ಹೇಮಲತಾ ಪೂಜಾರಿ, ಸರಸ್ವತಿ ಕೆ., ಸಬಾ ಅಫ್ರೀನ್‌, ಮಿನೋಲ್‌ ಶಮ್ರಿàನ್‌, ಉಜ್ವಲಾ ಕುಂಬಾರ್‌, ಲಲಿತಾ ಶೆಟ್ಟಿ, ಬ್ಲೇನ್‌ ಡಿಕುನ್ಹ, ತೃಪ್ತಿ ಶೆಟ್ಟಿ ಮಂಗಳೂರು ತಂಡದವರು (ತೃತೀಯ) ಬಹುಮಾನ ಪಡೆದುಕೊಂಡರು.
ಶ್ರಾವ್ಯಾ ಕೃಷ್ಣ, ಸೃಷ್ಟಿ ಕೃಷ್ಣ, ಭೂಮಿಕಾ, ಮೇಧಾ, ಜನಿ¾ತಾ, ಅಪೇಕ್ಷಾ ಬಜಪೆ ತಂಡ; ಶಶಿಕಲಾ ಕೆ. ಹೆಗ್ಡೆ, ಕರ್ತವ್ಯಾ ಜೈನ್‌ ಹಿರಿಯಂಗಡಿ ಕಾರ್ಕಳ ತಂಡ; ನೀತು ರಾಜೇಶ್‌, ನಿರೀಕ್ಷಾ, ಮನಸ್ವಿ, ಅಂಕಿತಾ ಪ್ರಿಯೇಶ್‌ ಶಾಂತಿಗೋಡು ಪುತ್ತೂರು ತಂಡ; ಮನೀಷಾ, ಅಲಿಷಾ, ಸ್ಟೆಫಿ, ಕಲ್ಯಾಣಪುರ, ಉಡುಪಿ ತಂಡ; ಬೆಳ್ಳಿಪ್ಪಾಡಿ ದಯಾ ವಿ. ರೈ, ಶರ್ಮಿಳಾ ಡಿ. ಮಾರ್ತಾ, ಭಾರತಿ ಬಿ. ರೈ, ಬೆಳ್ಳಿಪ್ಪಾಡಿ ಲಲಿತಾ ಭೋಜ ಶೆಟ್ಟಿ ಕೆಯ್ಯೂರು ಪುತ್ತೂರು ತಂಡ; ಸುಪ್ರಿಯಾ, ವಿಜೇತಾ, ಪದ್ಮಾ, ರೇಖಾ, ಮಂಜುಳಾ, ಚಂದ್ರಿಕಾ, ಗಾಯತ್ರಿ, ಸುಲತಾ, ನಿವೇದಿತಾ, ಪಲ್ಲವಿ ರಥಬೀದಿ, ಮಂಗಳೂರು ತಂಡ; ಚಿತ್ರಾ ಪೈ, ರಜನಿ ಪ್ರಭು, ಸುಮನಾ ಪ್ರಭು, ಸುಲತಾ ನಾಯಕ್‌, ದಿವ್ಯಾ ಶೆಣೈ, ವಿಜಯಾ ನಾಯಕ್‌, ವಿದ್ಯಾ ಭಟ್‌, ಶೋಭಾ ಪ್ರಭು ಪುತ್ತೂರು ತಂಡ; ಜ್ಯೋತಿ ಆರ್‌. ಶೆಟ್ಟಿ, ಅನುಪಮಾ ಬಳ್ಕೂರು ಕುಂದಾಪುರ ತಂಡ; ವಂದನಾ, ಶಿಲ್ಪಾ, ಪ್ರೀತಿ, ಅರ್ಚನಾ, ಶೃತಿ, ದಿವ್ಯಾ, ಪ್ರಿಯಾ, ರೇವತಿ, ಪ್ರಜ್ಞಾ ಕಾರ್ಕಳ ತಂಡವು ಸಮಾಧಾನಕರ ಬಹುಮಾನ ಪಡೆದುಕೊಂಡರು.

ಟಾಪ್ ನ್ಯೂಸ್

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

virat kohli k l rahul ishan kishan

ಇಶಾನ್, ರಾಹುಲ್, ವಿರಾಟ್: ಟಿ20 ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಆಟಗಾರ ಯಾರು?

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸಟೇಬಲ್ ಅನ್ನೇ ಅಪಹರಿಸಿದ!

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸ್ ಟೇಬಲ್ ಅನ್ನೇ ಅಪಹರಿಸಿದ!

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ghfghftyyht

ಬಾಲಿವುಡ್ ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು ಮಂಜೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಣಾಜೆ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನ

ಕೊಣಾಜೆ: ಬಿಜೆಪಿ ಕಾರ್ಯಕರ್ತನ ಕೊಲೆಗೆ ಯತ್ನ

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಅಪಾಯ, ಮುನ್ನೆಚ್ಚರಿಕೆಗೆ ತತ್‌ಕ್ಷಣ ಮಾಹಿತಿ

ಸೋಮವಾರದಿಂದ ಪುಟಾಣಿಗಳೂ ಶಾಲೆಗೆ

ಸೋಮವಾರದಿಂದ ಪುಟಾಣಿಗಳೂ ಶಾಲೆಗೆ

ಮರಳು ದಿಬ್ಬ ಸಮೀಕ್ಷೆ ಆರಂಭ ; ನವೆಂಬರ್‌ನಲ್ಲಿ ಮರಳು ಸಾಧ್ಯತೆ

ಮರಳು ದಿಬ್ಬ ಸಮೀಕ್ಷೆ ಆರಂಭ ; ನವೆಂಬರ್‌ನಲ್ಲಿ ಮರಳು ಸಾಧ್ಯತೆ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

27

ಬಸವ ತತ್ವದ ಜಾಗತಿಕ ಪ್ರಚಾರ ಅಗತ್ಯ

ಕರಿಬೇವು ಬೆಳೆದು ಕೈತುಂಬ ಆದಾಯ

ಕರಿಬೇವು ಬೆಳೆದು ಕೈತುಂಬ ಆದಾಯ

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

chikkamagalore news

ಕುಗ್ರಾಮ ಕಾರ್ಲೆಗೆ ಬೇಕಿದೆ ಮೂಲ ಸೌಲಭ್ಯ

ballari news

ಕರಿಬೇವು ಬೆಳೆದು ಕೈತುಂಬ ಆದಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.