ಉಜಿರೆ: ರಸ್ತೆಗೆ ಉರುಳಿದ ಮರ

Team Udayavani, Sep 9, 2019, 5:39 AM IST

ಬೆಳ್ತಂಗಡಿ : ಉಜಿರೆ- ಚಾರ್ಮಾಡಿ ರಸ್ತೆಯ ಉಜಿರೆ ಪೆಟ್ರೋಲ್‌ ಬಂಕ್‌ ಸಮೀಪ ಬೃಹದಾಕಾರದ ಮರವೊಂದು ರವಿವಾರ ರಸ್ತೆಗೆ ಉರುಳಿ ಬಿದ್ದು ಕೆಲವು ಕಾಲ ರಸ್ತೆ ತಡೆ ಉಂಟಾಯಿತು.

ರವಿವಾರ ರಜೆಯಾದ್ದರಿಂದ ವಾಹನ ಓಡಾಟ ವಿರಳವಾಗಿತ್ತು. ಇದರಿಂದ ಸಂಭವಿಸಬಹುದಾಗಿದ್ದ ಅಪಾಯ ತಪ್ಪಿದೆ. ಸಂಚಾರಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬಂದಿ, ಸ್ಥಳೀಯರು ಮರ ತೆರವುಗೊಳಿಸಲು ಸಹಕರಿಸಿದರು.

ರಸ್ತೆ ಅಂಚಿನ ಅಪಾಯಕಾರಿ ಮರ ಕೊಂಬೆ ಕಟಾವು ಮಾಡುವ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಂಬಂಧಿಸಿದ ಇಲಾಖೆ ಎಚ್ಚೆತ್ತಂತೆ ಕಾಣುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆ ಆ್ಯಂಬುಲೆನ್ಸ್‌ ಅಪಾಯದಲ್ಲಿ ಸಿಲುಕಿತ್ತು. ಇನ್ನಾದರೂ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಂಭವಿಸಬಹುದಾದ ಜೀವ ಹಾನಿ ತಪ್ಪಿಸಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ