ಉಳ್ಳಾಲ ತಲವಾರಿನಿಂದ ಕಡಿದು ಕೊಲೆ ಯತ್ನ
Team Udayavani, Mar 27, 2017, 11:20 AM IST
ಉಳ್ಳಾಲ: ಯುವಕನೊಬ್ಬನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಯುವಕ ಉಳ್ಳಾಲ ನಿವಾಸಿ ನೌಷಾದ್ ಎಂದು ತಿಳಿದುಬಂದಿದೆ. ರವಿವಾರ ರಾತ್ರಿ ನೌಷಾದ್ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ರಮಿತ್ ಹಾಗೂ ಸಹಚರರ ತಂಡ ನೌಷಾದ್ ನನ್ನು ಅಡ್ಡಗಟ್ಟಿ ತಲವಾರಿನಿಂದ ಕೊಲೆಗೆ ಯತ್ನಿಸಿದ್ದಾರೆ, ಈ ವೇಳೆ ನೌಷಾದ್ ನ ಕೈಗೆ ಗಂಭೀರ ಗಾಯವಾಗಿದ್ದು ಅವರನ್ನು ಉಳ್ಳಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆ : ರಮಿತ್ ಹಾಗೂ ಆತನ ಸಹಚರರು ಕಳೆದ ಎರಡು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದರು. ಆದರೆ ಕೃತ್ಯಕ್ಕೆ ಕರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಾಗಿದೆ
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ