ಉಳ್ಳಾಲ ದರ್ಗಾ ಆಡಳಿತಾಧಿಕಾರಿ ನೇಮಕ ವಿಚಾರ; ಮುಂದುವರಿದ ವಿರೋಧ

Team Udayavani, Dec 3, 2019, 12:07 AM IST

ಉಳ್ಳಾಲ: ಇಲ್ಲಿನ ಪ್ರಸಿದ್ಧ ಸಯ್ಯದ್‌ ಮದನಿ ದರ್ಗಾಕ್ಕೆ ರಾಜ್ಯ
ಸರಕಾರವು ನೇಮಿಸಿರುವ ಆಡಳಿತಾಧಿ ಕಾರಿಯು ಆಡಳಿತ ವಹಿಸಿಕೊಳ್ಳಲು ಆಗಮಿಸುವ ಮಾಹಿತಿ ಲಭಿಸಿ ಸರಕಾರದ ಈ ನಡೆಯನ್ನು ವಿರೋಧಿಸುತ್ತಿರುವ ಸ್ಥಳೀಯರು ದರ್ಗಾದ ಮುಖ್ಯ ದ್ವಾರದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆದರೆ ಅಧಿಕಾರಿ ಸೋಮವಾರವೂ ಆಗಮಿಸಿಲ್ಲ.
ಸೋಮವಾರ ನೂತನ ಆಡಳಿತಾಧಿ ಕಾರಿ ಅಧಿಕಾರ ಸ್ವೀಕರಿಸಲು ಆಗಮಿ ಸುವ ನಿರೀಕ್ಷೆಯಿತ್ತು. ಬಿಗುವಿನ ವಾತಾವರಣ ಇದ್ದುದರಿಂದ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರಾಜ್ಯ ಸರಕಾರ ದರ್ಗಾಕ್ಕೆ ನಿವೃತ್ತ ಅಧಿಕಾರಿ ಇಬ್ರಾಹಿಂ ಕೂರ್ನಡ್ಕ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದು, ನ. 20ರಂದು ಅವರು ದರ್ಗಾಕ್ಕೆ ಆಗಮಿಸಿದಾಗ ಸ್ಥಳೀಯರು ಹಿಂದಕ್ಕೆ ಕಳುಹಿಸಿದ್ದರು. ಈ ಸಂಬಂಧ ದರ್ಗಾ ಅಧ್ಯಕ್ಷರು ಕಾನೂನು ನೆರವು ಪಡೆದ ಸಂದರ್ಭದಲ್ಲೇ ಸಹಾಯಕ ಆಯುಕ್ತರು ದರ್ಗಾ ಪದಾಧಿಕಾರಿಗಳ ಸಭೆ ನಡೆಸಿ ಡಿ. 2ರಂದು ಅಧಿಕಾರ ಬಿಟ್ಟುಕೊಡುವಂತೆ ಸೂಚಿಸಿದ್ದರು. ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆಯೇ ಆಕ್ರೋಶಿತರಾದ ಸ್ಥಳೀಯರು ಒಂದು ವಾರದಿಂದ ದರ್ಗಾದ ಎಲ್ಲ ಗೇಟುಗಳನ್ನು ಮುಚ್ಚಿ ಮುಖ್ಯದ್ವಾರದ ಮುಂಭಾಗದಲ್ಲಿ ಆಡಳಿತಾಧಿಕಾರಿ ಯನ್ನು ತಡೆಯಲು ಕಾಯುತ್ತಿದ್ದಾರೆ.

ಚಾರಿಟೆಬಲ್‌ ಟ್ರಸ್ಟ್‌ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಮಾತನಾಡಿ, ದರ್ಗಾ ಸಮಿತಿಗೆ ಜನರೇ ಪ್ರತಿನಿಧಿ ಗಳನ್ನು ಆಯ್ಕೆ ಮಾಡಿದ್ದರೂ ಸರಕಾರವು
ಆಡಳಿತಾಧಿ ಕಾರಿಯನ್ನು ನೇಮಿಸಿರುವುದರಿಂದ ಉಳ್ಳಾಲದ ಸರ್ವ ಧರ್ಮೀಯರು ಬೇಸರಗೊಂಡಿದ್ದಾರೆ. ದರ್ಗಾ ಆಡಳಿತ ಬಿಟ್ಟುಕೊಡಲು ಜಿಲ್ಲಾಧಿಕಾರಿ ಸೂಚಿಸಿದ್ದು, ಅಧಿಕಾರಿ ಬಂದರೆ ಅವರಿಗೆ ತೊಂದರೆ ಉಂಟು ಮಾಡಬೇಡಿ. ಅವರು ಬಂದಾಗ ಆಡಳಿತ ವಹಿಸಿಕೊಳ್ಳಲು ಅವಕಾಶ ನೀಡದೆ ಶಾಂತಿಯಿಂದ ಹಿಂದಕ್ಕೆ ಕಳುಹಿಸೋಣ ಎಂದರು.

ಭರವಸೆ ಕಾರ್ಯರೂಪಕ್ಕೆ ಬರಲಿ
ಸದಸ್ಯ ಫಾರೂಕ್‌ ಉಳ್ಳಾಲ ಮಾತ ನಾಡಿ, ಮೂರೂವರೆ ವರ್ಷಗಳಲ್ಲಿ ಒಂದೇ ಒಂದು ಕೋಮು ಗಲಭೆ ಉಳ್ಳಾಲದಲ್ಲಿ ನಡೆದಿಲ್ಲ ಎನ್ನುವುದನ್ನು ಪೊಲೀಸ್‌ ಇಲಾಖೆಯ ದಾಖಲೆಗಳು ಹೇಳುತ್ತಿವೆ. ಉಳ್ಳಾಲದ ಜನರ ಭಾವನೆ
ಗಳನ್ನು ಸಂಸದರು, ಉಸ್ತುವಾರಿ ಸಚಿವರು, ಶಾಸಕರು ಅರ್ಥಮಾಡಿಕೊಂ ಡಿದ್ದಾರೆಂಬ ವಿಶ್ವಾಸವಿದೆ. ಅವರು ನೀಡಿರುವ ಭರವಸೆ ಕಾರ್ಯರೂಪಕ್ಕೆ ಬರಬೇಕು, ಅಧ್ಯಕ್ಷ ಅಬ್ದುಲ್‌ ರಶೀದ್‌ ಮತ್ತು ಹಾಲಿ ಸಮಿತಿ ಉರೂಸ್‌ವರೆಗೆ ಮುಂದುವರಿಯಬೇಕು ಎಂದರು.

ಸ್ಥಳದಲ್ಲಿ ಉಳ್ಳಾಲ ಪೊಲೀಸರು, ಕೆಎಸ್‌ಆರ್‌ಪಿ ಪೊಲೀಸ್‌ ಪಡೆ ಭದ್ರತೆ ಯನ್ನು ನಿಯೋಜಿಸಲಾಗಿದೆ.

ಮದನಿ ಅವರಿಂದಲೇ ದರ್ಗಾ ರಕ್ಷಣೆ
ದರ್ಗಾ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್‌ ರಶೀದ್‌ ಪ್ರತಿಕ್ರಿಯಿಸಿ, ದರ್ಗಾಕ್ಕೆ
ಚುನಾಯಿತ ಪ್ರತಿನಿಧಿಗಳಿದ್ದರೂ ರಾಜ್ಯ ಸರಕಾರದ ಆದೇಶದಂತೆ ವಕ್ಫ್ ಸಮಿತಿ ಆಡಳಿತಾಧಿಕಾರಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಿದೆ. ಈ ವಿಚಾರದಲ್ಲಿ ಕಾನೂನು ನೆರವು ಪಡೆಯಲಾಗುತ್ತಿದೆ. ಇದೇವೇಳೆ ಆಡಳಿತಾಧಿಕಾರಿ ಮಕದ
ಬಗ್ಗೆ ಅರಿತ ಭಕ್ತರು ಕೆಲವು ದಿನಗಳಿಂದ ದರ್ಗಾದ ಮುಂಭಾಗದಲ್ಲಿ ಸೇರಿದ್ದು, ಅಧಿಕಾರಿ ಕೈಗೆ ದರ್ಗಾದ ಆಡಳಿತ ಕೊಡುವುದಿಲ್ಲ ಎನ್ನುವ ಪಣ ತೊಟ್ಟಿದ್ದಾರೆ. ದರ್ಗಾ ರಕ್ಷಣೆಯನ್ನು ಸಯ್ಯದ್‌ ಮದನಿ ತಂಙಳ್‌ ಅವರೇ ಮಾಡುತ್ತಾರೆ ಎಂಬ ನಂಬಿಕೆಯಿಂದ ಸೋಮವಾರ ಗೇಟು ತೆರೆದು, ಸೇರಿದ್ದ ಜನರನ್ನು ಹಿಂದಕ್ಕೆ
ಕಳುಹಿಸಲಾಗಿದೆ. ಸೋಮವಾರದವರೆಗೆ ಆಡಳಿತಾಧಿ ಕಾರಿ ಬಂದಿಲ್ಲ ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ