Udayavni Special

ಇಂದು ಕೇಂದ್ರ ಗೃಹ ಸಚಿವ  ಮಂಗಳೂರಿಗೆ


Team Udayavani, Mar 9, 2019, 12:30 AM IST

union-home-minister-rajnath-singh-sss.jpg

ಮಂಗಳೂರು: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಶನಿವಾರ ಮಂಗಳೂರಿಗೆ ಭೇಟಿ ನೀಡಿ ಬಿಜೆಪಿ ಕ್ಲಸ್ಟರ್‌
ಸಮಾವೇಶ ಮತ್ತು ಪ್ರಬುದ್ಧರ ಜತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅವರ ಕಾರ್ಯಕ್ರಮಕ್ಕೆ ಸಂಬಂಧಿಸಿ ಬಿಜೆಪಿ ವತಿಯಿಂದ ಸಿದ್ಧತೆಗಳು ನಡೆದಿವೆ; ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.

ಸಮಯ ಬದಲಾವಣೆ 
ಗೃಹ ಸಚಿವರ ಕಾರ್ಯಕ್ರಮದಲ್ಲಿ  ಕೆಲವು ಬದಲಾವಣೆ ಮಾಡಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ. 

ರಾಜನಾಥ್‌ ಸಿಂಗ್‌ ಅವರು ಮಧ್ಯಾಹ್ನ 12 ಗಂಟೆಗೆ ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಪರಾಹ್ನ 1 ಗಂಟೆಗೆ ನಗರದ ಕೇಂದ್ರ ಮೈದಾನದಲ್ಲಿ  ಏರ್ಪಡಿ ಸಿರುವ ದಕ್ಷಿಣ ಕನ್ನಡ, ಉಡುಪಿ, ಬಿಜೆಪಿ ಕ್ಲಸ್ಟರ್‌ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು.

2.30ಕ್ಕೆ ಪತ್ರಿಕಾಗೋಷ್ಠಿ, 3 ಗಂಟೆಗೆ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ ನಲ್ಲಿ ಪ್ರಬುದ್ಧರ ಜತೆ ಸಂವಾದ ಕಾರ್ಯಕ್ರಮ, ಬಳಿಕ 4.30ಕ್ಕೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡುವರು.

ಪ್ರಬುದ್ಧರ ಸಭೆಯಲ್ಲಿ  ಭಾಗವಹಿಸು ವವ‌ರಿಗೆ ಪಾಸ್‌ ವಿತರಿಸಲಾಗಿದ್ದು, ಇನ್ನೂ ಭಾಗವಹಿಸಲು ಇಚ್ಛಿಸುವವರಿಗೆ ಕಾರ್ಯಕ್ರಮ ಸ್ಥಳದ ಕೌಂಟರ್‌ ನಲ್ಲಿ  ಪಾಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ. ಕಾರ್ಯ ಕ್ರಮ 3 ಗಂಟೆಗೆ ಆರಂಭವಾಗಲಿದ್ದು, 2.45ರೊಳಗೆ ಬಂದು ಸಾರ್ವಜನಿಕರು ಆಸೀನರಾಗಬೇಕು ಎಂದಿದ್ದಾರೆ.
 
ಕೇಂದ್ರ ಮೈದಾನದಲ್ಲಿ ನಡೆಯುವ ಕ್ಲಸ್ಟರ್‌ ಮಟ್ಟದ ಸಮಾವೇಶದಲ್ಲಿ ಶಕ್ತಿ ಕೇಂದ್ರ ಪ್ರಮುಖರು, ಸಹ ಪ್ರಮುಖರು, ಬೂತ್‌ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಭಾರಿ ಗಳು ಸೇರಿದಂತೆ ಸುಮಾರು 10,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಪೊಲೀಸ್‌ ಬಂದೋಬಸ್ತು 
ರಾಜನಾಥ್‌ ಸಿಂಗ್‌ ಅವರ ಭೇಟಿಗೆ ಸಂಬಂಧಿಸಿ ಪೊಲೀಸ್‌ ಬಂದೋಬಸ್ತು ಮಾಡಲಾಗಿದೆ. ಸಂದರ್ಭಕ್ಕೆ ತಕ್ಕಂತೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ.

ರಾಜನಾಥ್‌ ಸಿಂಗ್‌ ಇಂದು ಪೊಳಲಿಗೆ 
ಪೊಳಲಿ:
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಸಂಜೆ 4ಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ… ಉಳಿಪ್ಪಾಡಿ ತಿಳಿಸಿದರು. ಗೃಹ ಸಚಿವರ ಆಗಮನದ ಸಂದರ್ಭ ಹೆಚ್ಚಿನ ಭದ್ರತೆ ಇದ್ದು, ಭಕ್ತರು ಸಹಕರಿಸಬೇಕು ಎಂದರು. 

ಕೇಂದ್ರ ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ಭದ್ರತೆಯ ಕುರಿತು ಪರಿಶೀಲಿಸಿದರು.

ಟಾಪ್ ನ್ಯೂಸ್

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

Championd

ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

“ಸರ್ದಾರ್‌ ಪಟೇಲ್‌ರ ಹಾದಿಯಲ್ಲೇ ನಡೆಯಿರಿ’

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಜೆಇಇ- ಅಡ್ವಾನ್ಸ್ಡ್ ಫ‌ಲಿತಾಂಶ ಪ್ರಕಟ: ಮೃದುಲ್‌ ಟಾಪರ್‌

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು

ಉನ್ನತ ಶಿಕ್ಷಣ ಸಚಿವರಿಗೆ ಸನ್ಮಾನ ಸಲ್ಲಿಸಿದ ದುಬೈ ಕನ್ನಡಿಗರು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ಯಾನ್ಸರ್‌ ವಿರುದ್ಧ ಕೇಶದಾನ ಅಭಿಯಾನ ಕಾಯ್ದೆ- ಮಾಹಿತಿ ಕಾರ್ಯಾಗಾರ

ಕ್ಯಾನ್ಸರ್‌ ವಿರುದ್ಧ ಕೇಶದಾನ ಅಭಿಯಾನ ಕಾಯ್ದೆ: ಮಾಹಿತಿ ಕಾರ್ಯಾಗಾರ

b-1

ಪುಂಜಾಲಕಟ್ಟೆ: ಬೈಕ್ ಗಳೆರಡರ ಢಿಕ್ಕಿಯಾಗಿ ಹೆಡ್ ಕಾನ್ಸ್ ಟೇಬಲ್ ಸಾವು, ಇನ್ನೋರ್ವ ಗಂಭೀರ

ರೆಡ್‌ಕ್ರಾಸ್‌ ತಂಡದಿಂದ ರಾಷಪತಿ ಭೇಟಿ

ರೆಡ್‌ಕ್ರಾಸ್‌ ತಂಡದಿಂದ ರಾಷಪತಿ ಭೇಟಿ

1-ww

ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ: ಪೊಲೀಸ್ ಆಯುಕ್ತರಿಂದ ಸನ್ಮಾನ

tri-1

ಬಜರಂಗ ದಳ ತ್ರಿಶೂಲ ಪೂಜೆ :ಪರಿಶೀಲಿಸಲು ಪೊಲೀಸ್ ಆಯುಕ್ತರ ಸೂಚನೆ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

ಸಾವರ್ಕರ್‌ ದೇಶಭಕ್ತಿಯನ್ನು ಪ್ರಶ್ನಿಸಲಾಗದು: ಅಮಿತ್‌ ಶಾ

BSYರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ರಂಗೇರಿದ ಉಪಚುನಾವಣೆ ಕಣ; ಇಂದಿನಿಂದ ಘಟಾನುಘಟಿ ನಾಯಕರ “ರಂಗ’ಪ್ರವೇಶ

ಜಡ್ಕಲ್‌ನಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಜಡ್ಕಲ್‌ನಲ್ಲಿ ಇಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

Uber Cup badminton:

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಭಾರತ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

ಶಿಕ್ಷಕ ಸಣ್ಣ ತಿಮ್ಮಯ್ಯರ ದೊಡ್ಡತನ- ಶಿಕ್ಷಣ ಸಚಿವರ “ಪ್ರೌಢ’ ಸರಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.