ಉಪ್ಪಿನಂಗಡಿ: ಗ್ರಾ.ಪಂ. ಆವರಣಗೋಡೆ ನಿರ್ಮಾಣಕ್ಕೆ ಕಂದಾಯ ಇಲಾಖೆ ತಡೆ

Team Udayavani, Oct 7, 2019, 5:23 AM IST

ಉಪ್ಪಿನಂಗಡಿ : ಕಂದಾಯ ಇಲಾಖೆ ನಿವೇಶನಕ್ಕೆ ಆವರಣ ಗೋಡೆ ಕಟ್ಟಲು ಆರಂಭಿಸಿದ ಹೊತ್ತಲ್ಲೇ ಕಂದಾಯ ನಿರೀಕ್ಷಕ ಜಯವಿಕ್ರಮ ಪೊಲೀಸರ ಸಹಕಾರದಿಂದ ಕಾಮಗಾರಿ ನಿಲ್ಲಿಸಿದ್ದಾರೆ.

ಇಲ್ಲಿನ ಬಸ್‌ ನಿಲ್ದಾಣ ಸಮೀಪ ಕಂದಾಯ ನಿರೀಕ್ಷಕರ ಕಚೇರಿ ಹಾಗೂ ವಸತಿಗೃಹಗಳು ಇದ್ದು, ಉಳಿದ ನಿವೇಶನ ಖಾಲಿ ಬಿದ್ದುಕೊಂಡಿತ್ತು. ಸ್ಥಳೀಯ ಪಂಚಾಯತ್‌ ಈ ನಿವೇಶನಕ್ಕೆ ಆವರಣ ಗೋಡೆ ರಚಿಸಲು ಕೆಲವು ಸಮಯದಿಂದ ಯೋಜನೆ ರೂಪಿಸಿಕೊಂಡಿತ್ತು.

ಠಾಣೆಗೆ ದೂರು
ಇದನ್ನರಿತ ಸ್ಥಳೀಯರು ಪುತ್ತೂರು ಸಹಾಯಕ ಆಯುಕ್ತರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಅವರು ಕಂದಾಯ ನಿರೀಕ್ಷಕರಿಗೆ ಕರೆ ಮಾಡಿ, ಠಾಣೆಗೆ ದೂರು ನೀಡಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಕಂದಾಯ ನಿವೇಶನ ಪಕ್ಕದಲ್ಲೇ ಸಾರ್ವಜನಿಕ ಗ್ರಂಥಾಲಯವಿದ್ದು, ಈ ಪ್ರದೇಶ ಮಲ-ಮೂತ್ರ ವಿಸರ್ಜನೆಯಿಂದ ಮಲಿನವಾಗುತ್ತಿದೆ ಎಂದು ಗ್ರಂಥಪಾಲಕರ ದೂರಿನ ಮೇರೆಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಬಳಿಕ ಕಂದಾಯ ಇಲಾಖೆ ನಿವೇಶನಕ್ಕೆ ಹಾಗೂ ಗ್ರಂಥಾಲಯಕ್ಕೆ ಪ್ರತ್ಯೇಕ ಆವರಣ ಗೋಡೆ ರಚಿಸುವ ಮೂಲಕ ಮಲಿನವನ್ನು ತಡೆಗಟ್ಟುವ ಅಭಿಪ್ರಾಯದಂತೆ ನಿರ್ಣಯ ಅಂಗೀಕಾರವಾಗಿತ್ತು. ಪಂಚಾಯತ್‌ಗೆ ಸೇರಿದ ವಸತಿಗೃಹಗಳು ಇದಕ್ಕೆ ಹೊಂದಿ ಕೊಂಡಿವೆ. ಅದರಂತೆ ಪುತ್ತೂರು ಸಹಾಯಕ ಆಯುಕ್ತರಿಗೆ ನಿರ್ಣಯ ಕಳುಹಿಸಿಕೊಟ್ಟು ಆವರಣ ಗೋಡೆ ನಿರ್ಮಾಣಕ್ಕೆ ಲಿಖೀತ ಅನುಮತಿ ಪಡೆದ ಬಳಿಕವೇ ಕಾಮಗಾರಿ ಆರಂಭಿಸಲಾಗಿದೆ ಎಂದು ಗ್ರಾಮ ಪಂಚಾಯತ್‌ ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ