ಉಪ್ಪಿನಂಗಡಿ ಪೊಲೀಸ್ ಠಾಣೆ ಕಾಮಗಾರಿ ಪುನಾರಂಭ
Team Udayavani, May 24, 2018, 5:55 AM IST
ಉಪ್ಪಿನಂಗಡಿ: ಪೋಲಿಸ್ ಠಾಣೆ ಕಾಮಗಾರಿ ಅಮೆನಡಿಗೆಯಲ್ಲಿ ಸಾಗುತ್ತಿದ್ದು, ಕಟ್ಟಡ ಕಟ್ಟಲು ಹೊಂಡ ನಿರ್ಮಿಸಿ ಅಪಾಯ ಸೃಷ್ಟಿಯಾಗುತ್ತಿರುವ ಕುರಿತು ‘ಸುದಿನ’ ಸಚಿತ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಕಬ್ಬಿಣದ ಸಲಾಕೆಗಳನ್ನು ಕಟ್ಟಿ ಹೊಂಡಕ್ಕೆ ಇಳಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ಮತ್ತೆ ಚಾಲನೆ ಸಿಕ್ಕಂತಾಗಿದೆ. ಪೋಲಿಸ್ ಠಾಣೆಯ ಹಳೆಯ ಕಟ್ಟಡ 100 ವರ್ಷ ಹಳೆಯದಾಗಿದ್ದು, ಛಾವಣಿ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ಹಾಗೂ ಗೃಹ ಮಂಡಳಿಗೆ ಪತ್ರ ಬರೆದ ಬಳಿಕ ಅನುದಾನ ಬಿಡುಗಡೆಯಾಗಿತ್ತು.
ಬಿರಿಸುಗೊಂಡ ಕಾಮಗಾರಿ
ಸ್ಥಳೀಯ ಪೊಲೀಸ್ ಠಾಣೆಯನ್ನು ಪಿ.ಎಸ್.ಐ.ಗೆ ಸೇರಿದ ವಸತಿ ನಿಲಯಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಮೂಲಕ ಕಾಮಗಾರಿಗೆ ಅನುಕೂಲ ಮಾಡಿಕೊಡಲಾಗಿತ್ತು. ವರ್ಷ ದೊಳಗೆ ಕೆಲಸ ಮುಗಿಸುವುದಾಗಿ ಭರವಸೆ ನೀಡಿದ ಗುತ್ತಿಗೆದಾರರು ಬಿರುಸಿನಿಂದ ಕಾಮಗಾರಿ ಆರಂಭಿಸಿದರೂ ಆಮೇಲೆ ನಿಧಾನಗತಿಯಲ್ಲಿ ಸಾಗಿತ್ತು.
ಈಗ ಠಾಣೆ ಕಾರ್ಯಾಚರಿಸುವ ಕಟ್ಟಡ ಕೇವಲ ನಾಲ್ಕು ಸಣ್ಣ ಕೊಠಡಿಗಳನ್ನು ಹೊಂದಿದ್ದು, ಠಾಣೆ ಪಿ.ಎಸ್.ಐ., ವೃತ್ತ ನಿರೀಕ್ಷಕರ ಕೊಠಡಿ, ಕಂಪ್ಯೂಟರ್ ಇತ್ಯಾದಿಗಳಿಗೆ ಜಾಗ ಸಾಲದೆ, ಪೊಲೀಸರು ಹೊರಾಂಗಣದಲ್ಲೇ ಉಳಿಯುವ ಅನಿವಾರ್ಯತೆ ಒದಗಿದೆ. ಸರಿಯಾದ ಬಂದಿಖಾನೆ ಹಾಗೂ ದಾಸ್ತಾನು ಕೊಠಡಿಗಳೂ ಇಲ್ಲದೆ ಪೊಲೀಸರು ಬಂಧಿತ ಆರೋಪಿಗಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತಾಗಿದೆ. ಹಿರಿಯ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿದರೂ ಕಾಮಗಾರಿ ವೇಗ ಪಡೆದಿರಲಿಲ್ಲ, ಪೊಲೀಸರ ಸಮಸ್ಯೆ ನಿವಾರಣೆ ಆಗಿರಲಿಲ್ಲ. ಸದ್ಯ ಹೊಸ ಕಟ್ಟಡದ ಕಾಮಗಾರಿ ಮತ್ತೂಮ್ಮೆ ಮುಂದುವರಿದಿದ್ದು, ಪೊಲೀಸರು ಹಾಗೂ ಸ್ಥಳೀಯರಲ್ಲಿ ಹೊಸ ಆಶಾಭಾವ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?