ನೆರೆ ಸಂತ್ರಸ್ತರಿಗೆ ಮಂಗಳೂರಿನಿಂದ ತರಕಾರಿ;

Team Udayavani, Aug 21, 2018, 10:07 AM IST

vegi.jpg

ಮಂಗಳೂರು: ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿ ಒದಗಿಸುವ ನಿಟ್ಟಿನಲ್ಲಿ ಮಂಗಳೂರಿನಿಂದ ತರಕಾರಿಗಳು ಯಥೇತ್ಛವಾಗಿ ದಾನಿಗಳ ಮೂಲಕ ಸರಬರಾಜು ಆಗುತ್ತಿವ.  ಇದೇ ವೇಳೆ ಮಂಗಳೂರಿಗೆ ತರಕಾರಿ ಪೂರೈಕೆಯಾಗುವ ಬೆಂಗಳೂರು ಮತ್ತು ಬಯಲು ಸೀಮೆಯಿಂದ ನೇರ ರಸ್ತೆ ಸಾರಿಗೆ ಸಂಪರ್ಕ ಕಡಿತಗೊಂಡ ಕಾರಣ ಕೆಲವು ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಮುಖ್ಯವಾಗಿ ಎರಡು ದಿನಗಳಿಂದ ಈರುಳ್ಳಿ, ಬಟಾಟೆ, ಟೊಮೆಟೊ, ಬೀಟ್‌ ರೂಟ್‌, ಅಲಸಂಡೆ ದರ ಸರಾಸರಿ 5 ರೂ. ನಂತೆ ಏರಿಕೆಯಾಗಿದೆ. ಸೋಮವಾರ ಈ ತರಕಾರಿಗಳ ಬೆಲೆ: ಈರುಳ್ಳಿ- 25, ಬಟಾಟೆ- 30, ಟೊಮೆಟೊ- 20, ಬೀಟ್‌ರೂಟ್‌- 40, ಅಲಸಂಡೆ- 50 ರೂ. ಗಳಷ್ಟಿತ್ತು. 

ನೆರೆ ಸಂತ್ರಸ್ತರಿಗಾಗಿ ಅಧಿಕ ಪ್ರಮಾಣ
ದಲ್ಲಿ ತರಕಾರಿ ಸಾಗಿಸುತ್ತಿದ್ದರೂ ಮಾರ್ಕೆಟ್‌ನಲ್ಲಿ ತರಕಾರಿ ಕೊರತೆ ಕಂಡು ಬಂದಿಲ್ಲ. ಸಂತ್ರಸ್ತರಿಗೆ ನೀಡುವುದಕ್ಕಾಗಿ ಖರೀದಿಸಲು ಬರುವ ನೈಜ ದಾನಿಗಳಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ ಎಂದವರು ವಿವರಿಸಿದ್ದಾರೆ. 
ಮಂಗಳೂರಿಗೆ ಈರುಳ್ಳಿ ಹುಬ್ಬಳ್ಳಿಯಿಂದ ಹಾಗೂ ಬಟಾಟೆ ಮಹಾರಾಷ್ಟ್ರದ ಪುಣೆಯಿಂದ ಸರಬರಾಜು ಆಗುತ್ತಿದೆ. ಇತರ ತರಕಾರಿಗಳು ಬೆಂಗಳೂರು ಮತ್ತು ರಾಜ್ಯದ ಬಯಲು ಸೀಮೆಯಿಂದ ಬರುತ್ತಿವೆ. ಶಿರಾಡಿ ಘಾಟಿ, ಚಾರ್ಮಾಡಿ ಮತ್ತು ಮಡಿಕೇರಿ ಮಾರ್ಗಗಳು ಮುಚ್ಚಿದ್ದರಿಂದ ಎಸ್‌ಕೆ ಬಾರ್ಡರ್‌ ಮೂಲಕ ಮಂಗಳೂರಿಗೆ ತರಿಸಲಾಗುತ್ತದೆ. ಹಾಗಾಗಿ ಮಾರ್ಕೆಟ್‌ಗೆ ತರಕಾರಿ ತಲಪುವಾಗ 2- 3 ಗಂಟೆ ವಿಳಂಬವಾಗುತ್ತಿದೆ.

ಕೇರಳಕ್ಕೆ  ರವಾನೆ
ಮಂಗಳೂರಿನಿಂದ ಕೊಡಗಿಗಿಂತಲೂ ಹೆಚ್ಚಾಗಿ ಕೇರಳಕ್ಕೆ ತರಕಾರಿ ರವಾನೆಯಾಗುತ್ತದೆ. ದಾನಿಗಳು ಈರುಳ್ಳಿ ಮತ್ತು ಬಟಾಟೆ ಅಧಿಕ ಪ್ರಮಾಣದಲ್ಲಿ ಖರೀದಿಸಿ ಸಾಗಾಟ ಮಾಡುತ್ತಿದ್ದಾರೆ. ಸೋಮವಾರ ಮಂಗಳೂರಿಗೆ ಎಂದಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ತ‌ರಿಸಿದ್ದು, ಎಲ್ಲವೂ ಖಾಲಿಯಾಗಿದೆ ಎನ್ನುತ್ತಾರೆ ನಗರದ ಸೆಂಟ್ರಲ್‌ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್‌ ಡಿ’ಸೋಜಾ. 

ಟಾಪ್ ನ್ಯೂಸ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.