ಪುತ್ತೂರು ಒಡೆಯನ ಜಳಕದ ಗುಂಡಿ ಮರಳಿನಿಂದ ಆವೃತ 

Team Udayavani, Mar 10, 2019, 5:05 AM IST

10-march-3.jpg

ನರಿಮೊಗರು : ಪುತ್ತೂರು ಮಹಾಲಿಂಗೇಶ್ವರ ದೇವರು ವಾರ್ಷಿಕ ಜಾತ್ರೆಯ ಅವಭೃಥ ಸ್ನಾನಕ್ಕಾಗಿ ಪೇಟೆ ಸವಾರಿಯ ಮೂಲಕ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ಸಂಭ್ರಮದಿಂದ ತೆರಳುವುದು ಸಂಪ್ರದಾಯ.

ದೇವರು ಸ್ನಾನ ಮಾಡುವ ಜಳಕದ ಗುಂಡಿ ಈ ಬಾರಿ ಸಂಪೂರ್ಣವಾಗಿ ಮರಳಿನಿಂದ ಆವೃತವಾಗಿದೆ. ಕುಮಾರಧಾರಾ ನದಿಯಲ್ಲಿ ಮರಳು ತೆಗೆಯದೇ ಇದ್ದ ಪರಿಣಾಮ, ಕಳೆದ ಮಳೆಗಾಲದಲ್ಲಿ ನೆರೆ ಬಂದ ಹಿನ್ನೆಲೆಯಲ್ಲಿ ಮಳೆ ನೀರು ಇಡೀ ವೀರಮಂಗಲ ಪ್ರದೇಶದಲ್ಲಿದ್ದ ತೋಟ, ಮನೆಗಳನ್ನು ಮುಳುಗಿಸಿತ್ತು. ನೆರೆ ಪರಿಣಾಮ ದೇವರ ಜಳಕದ ಗುಂಡಿ ಮುಚ್ಚಿದೆ. ಎ. 18ರಂದು ಇಲ್ಲಿ ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನ ನಡೆಯಲಿದೆ. ಅದಕ್ಕೂ ಮುನ್ನ ಮರಳು ತೆರವುಗೊಳಿಸುವ ಕಾರ್ಯ ನಡೆಯಬೇಕಿದೆ.

ಧಾರ್ಮಿಕ ಹಿನ್ನೆಲೆ
ಇಲ್ಲಿ ದೇವರ ಅವಭೃಥ ಸ್ನಾನದ ಬಳಿಕ ಭಕ್ತರು ಮಾಡಿದ ಸ್ನಾನ ಪವಿತ್ರ ತೀರ್ಥಸ್ನಾನವಾಗುತ್ತದೆ. ಇದು ಫಲಪ್ರದಾಯಕ, ಪಾಪನಾಶಕ ಎನ್ನುವುದು ನಂಬಿಕೆ. ಮಹಾಲಿಂಗೇಶ್ವರ ದೇವರ ಜಳಕಕ್ಕೆ ವಿಶೇಷ ಪ್ರಾಧಾನ್ಯ ಇದೆ. ಅವಭೃಥಕ್ಕೆಂದೇ ಪುತ್ತೂರಿನಿಂದ ವೀರಮಂಗಲಕ್ಕೆ ಬರುವ ದೇವರು ನದಿ ತಟದ ಕಟ್ಟೆಯಲ್ಲಿ ಪೂಜೆ ಪಡೆದು ಅಲ್ಲಿಂದ ಜಳಕ ಸೇವೆಗೆ ಬರುತ್ತಾರೆ. ಅನಂತರ ಪೂಜೆ ಮುಗಿಸಿ ಪುತ್ತೂರಿಗೆ ನಿರ್ಗಮನ. ದೇವರ ಸ್ನಾನವಾದ ಬಳಿಕ ಪುಣ್ಯಸ್ನಾನ ಮಾಡಲು ಸಾವಿರಾರು ಭಕ್ತರು ಕಾಯುತ್ತಿರುತ್ತಾರೆ.

ಪ್ರಸಿದ್ಧ ಕ್ಷೇತ್ರ ವೀರಮಂಗಲ
ತಾಲೂಕು ಕೇಂದ್ರ ಪುತ್ತೂರಿನಿಂದ 15 ಕಿ.ಮೀ. ದೂರದಲ್ಲಿರುವ ವೀರಮಂಗಲ ಕ್ಷೇತ್ರ ಶ್ರೀ ಮಹಾಲಿಂಗೇಶ್ವರ ದೇವರಿಂದಾಗಿ ಲೋಕಮಾನ್ಯವಾಗಿದೆ. ಪ್ರತೀ ವರ್ಷ ಜಾತ್ರೆಯ ಕೊನೆಯಲ್ಲಿ ಎ. 18ರ ಸಂಜೆ ದೇಗುಲದಿಂದ ದೇವರು ಅವಭೃಥ ಸ್ನಾನಕ್ಕೆ ಸವಾರಿ ಹೊರಡುತ್ತಾರೆ. ಕಟ್ಟೆಪೂಜೆ ಸ್ವೀಕರಿಸುತ್ತಾ ಮರುದಿನ ಮುಂಜಾನೆ 6 ಗಂಟೆಯ ಹೊತ್ತಿಗೆ ವೀರಮಂಗಲ ನದಿ ತಟ ತಲುಪುತ್ತಾರೆ. 

ದೇವರೊಂದಿಗೆ ಹಾದಿಯುದ್ದಕ್ಕೂ ಸಾವಿರಾರು ಸಂಖ್ಯೆಯ ಭಕ್ತರು ಸೇರಿಕೊಂಡು, ಬೆಳಗಿನ ಜಾವ ವೀರಮಂಗಲ ತಲುಪುತ್ತಾರೆ. ದೇವರ ಜಳಕವಾದ ಕೂಡಲೇ ಅದೇ ನೀರಿನಲ್ಲಿ ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ, ಪ್ರತೀತಿ ಇದ್ದು, ಇದಕ್ಕಾಗಿ ಭಕ್ತರು ಸ್ನಾನಕ್ಕಾಗಿ ಮುಗಿ ಬೀಳುತ್ತಾರೆ.

ಮರಳು ಶೀಘ್ರ ತೆರವಾಗಲಿ
ಎಪ್ರಿಲ್‌ ವೇಳೆಗೆ ಇಲ್ಲಿ ನದಿಯಲ್ಲಿ ನೀರಿ ಪ್ರಮಾಣದ ಸಾಕಷ್ಟು ಕಡಿಮೆ ಇರುತ್ತದೆ. ಕೆಲ ಕಡೆ ಹೊಂಡಗಳಲ್ಲಿ ಮಾತ್ರ ನೀರಿರುತ್ತದೆ. ದೇವರ ಜಳಕದ ಗುಂಡಿಯಲ್ಲೂ ತಾತ್ಕಾಲಿಕವಾಗಿ ನೀರು ಸಂಗ್ರಹಿಸಲಾಗುತ್ತದೆ. ಈ ಬಾರಿ ಜಳಕದ ಗುಂಡಿಯಲ್ಲಿ ಮರಳು ತುಂಬಿರುವುದರಿಂದ ನೀರು ನಿಲ್ಲಲು ಜಾಗವಿಲ್ಲದಂತಾಗಿದೆ. ಶೀಘ್ರದಲ್ಲಿ ಜಳಕದ ಗುಂಡಿಯಲ್ಲಿ ಸೇರಿರುವ ಮರಳು ತೆಗೆದರೆ ನೀರು ಸಂಗ್ರಹಕ್ಕೆ ಅವಕಾಶವಾಗಲಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಮರಳು ತೆರವು ಕಾರ್ಯ ಬೇಗನೆ ನಡೆಯಬೇಕಿದೆ.

ಕಲ್ಲುಗಳನ್ನೂ ತೆರವುಗೊಳಿಸಿ
ವೀರಮಂಗಲ ದೇವರ ಜಳಕದ ಗುಂಡಿ ಮರಳಿನಿಂದ ಆವೃತವಾಗಿದೆ. ಜತೆಗೆ ಜಳಕದ ಗುಂಡಿಯ ಬಳಿ ತೆರಳುವ ದಾರಿಯಲ್ಲಿ ಪ್ರತೀ ಬಾರಿ ಮರಳು ಇರುತ್ತಿತ್ತು. ಆದರೆ ಈ ಬಾರಿ ನೆರೆ ಬಂದ ಪರಿಣಾಮ ಮರಳು ಕೊಚ್ಚಿ ಹೋಗಿ ಕಲ್ಲು ರಾಶಿ ಬಿದ್ದಿದೆ. ಇದನ್ನೂ ತೆರವುಗೊಳಿಸಬೇಕಿದೆ.
– ರವೀಂದ್ರ ಕೈಲಾಜೆ
ಸ್ಥಳೀಯರು ವೀರಮಂಗಲ

ಪ್ರವೀಣ್‌ ಚೆನ್ನಾವರ 

ಟಾಪ್ ನ್ಯೂಸ್

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.