ಭಟ್ಕಳ: ಕನ್ಯಾಡಿ ಶ್ರೀಗಳನ್ನು ಭೇಟಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ

Team Udayavani, Nov 10, 2019, 6:48 PM IST

ಬೆಳ್ತಂಗಡಿ: ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರವಿವಾರ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಶಾಖಾ ಮಠವಾದ ಭಟ್ಕಳ್ ಕರಿಕ್ಕಳ್‌ನ ಶ್ರೀ ರಾಮ ಕ್ಷೇತ್ರ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಾದ ಪಡೆದರು.

ಭಟ್ಕಳ ಕರಿಕ್ಕಳ್‌ನಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಜರಗುವ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಾಗವಹಿಸಲಿದ್ದಾರೆ.

ಈ ಪ್ರಯುಕ್ತ ಕನ್ಯಾಡಿ ಸ್ವಾಮೀಜಿ ಅವರ ಸಾನಿಧ್ಯಕ್ಕೆ ರವಿವಾರ ಭೇಟಿ ಮಾಡಿ ಕಾರ್ತಿಕ ಮಾಸದ ವಿಶೇಷ ಪೂಜೆಯಲ್ಲಿ ರಾಮ ಪರಿವಾರ ದೇವರುಗಳ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಕಾಗೇರಿ ಅವರನ್ನು ಸ್ವಾಮೀಜಿ ಕ್ಷೇತ್ರದ ವತಿಯಿಂದ ಗೌರವಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ